ಅವಕಾಶ ಬಳಸಿಕೊಳ್ಳಲು ಸಲಹೆ

7

ಅವಕಾಶ ಬಳಸಿಕೊಳ್ಳಲು ಸಲಹೆ

Published:
Updated:
Deccan Herald

ಚಿಕ್ಕಮಗಳೂರು: ಅವಕಾಶಗಳು ನಮ್ಮನ್ನು ಹುಡುಕಿಕೊಂಡು ಬರುವುದಿಲ್ಲ, ಅವಕಾಶ ಸಿಕ್ಕಿದಾಗ ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಎಸ್‌.ಎಲ್‌.ಭೋಜೇಗೌಡ ಸಲಹೆ ನೀಡಿದರು.

ನಗರದ ಆದಿಚುಂಚನಗಿರಿ ತಾಂತ್ರಿಕ ವಿದ್ಯಾಲಯದಲ್ಲಿ (ಎಐಟಿ) ಬುಧವಾರ ಏರ್ಪಡಿಸಿದ್ದ ಪ್ರಥಮ ವರ್ಷದ ಬಿ.ಇ ವಿದ್ಯಾರ್ಥಿಗಳ ತರಗತಿ ಉದ್ಘಾಟನೆ, ಶಾರದಾ ಪೂಜೆ ಸಮಾರಂಭದಲ್ಲಿ ಮಾತನಾಡಿದರು. ‘ವಿದ್ಯೆ ಒಕ್ಕಾಲು, ಬುದ್ಧಿ ಮುಕ್ಕಾಲು’ ಎಂಬ ನಾಣ್ಣುಡಿ ಇದೆ. ಜೀವನದಲ್ಲಿ ಎಡದವಂತೆ ಎಚ್ಚರಿವಹಿಸಬೇಕು. ಜೀವನದ ಪಾಠವನ್ನು ಮೊದಲು ಕಲಿಯಬೇಕು. ಇಂದು ವಿಪುಲ ಅವಕಾಶಗಳು ಇವೆ. ಅವುಗಳನ್ನು ಬಳಸಿಕೊಂಡು ಯಶಸ್ಸು ಸಾಧಿಸಬೇಕು ಎಂದು ಕಿವಿಮಾತು ಹೇಳಿದರು.

ಇದು ಮೊಬೈಲ್‌ ಯುಗ. ಮಕ್ಕಳು ದಾರಿ ತಪ್ಪುವ ಆತಂಕದಲ್ಲಿ ಪೋಷಕರು ಇರುತ್ತಾರೆ. ವಿದ್ಯಾರ್ಥಿಗಳು ಸರಿಯಾದ ಮಾರ್ಗದಲ್ಲಿ ನಡೆದು ಯಶಸ್ಸು ಸಾಧಿಸಬೇಕು ಎಂದರು.

ವಿದ್ಯಾಭ್ಯಾಸ ಮುಗಿಸಿದ ನಂತರ ಕಾರ್ಪೋರೇಟ್‌ ಕ್ಷೇತ್ರದ ಉದ್ಯೋಗಗಳ ಕಡೆಗೆ ಬಹಳಷ್ಟು ಮಂದಿ ಆಸಕ್ತಿ ತೋರುತ್ತಿದ್ದಾರೆ. ವಿದೇಶಗಳಲ್ಲಿ ಉದ್ಯೋಗ ಮಾಡಲು ಒವಲು ತೋರುತ್ತಿದ್ದಾರೆ. ಆದರೆ, ಅಧ್ಯಾಪನ ವೃತ್ತಿ ಕಡೆಗ ಆಸಕ್ತಿ ತೋರುತ್ತಿಲ್ಲ. ಉಪನ್ಯಾಸಕರ ಕೊರತೆಗೆ ಇದು ಕಾರಣ ಎಂದು ಹೇಳಿದರು.

ಬ್ಯುಸಿನೆಸ್‌ ಮ್ಯಾನೇಜ್‌ಮೆಂಟ್‌ ಎಕ್ಸಿಕ್ಯುಟಿವ್‌ ವಿವೇಕ್ ಮಾತನಾಡಿ, ಪ್ರತಿನಿತ್ಯ ಮುಂಚಿತವಾಗಿ ಏಳುವ (ಈಗ ಏಳುವುದಕ್ಕಿಂತ ಒಂದು ಗಂಟೆ ಮುಂಚೆ) ರೂಢಿಸಿಕೊಂಡು ಆ ಸಮಯವನ್ನು ಕ್ರಿಯಾತ್ಮಕವಾಗಿ ಬಳಸಿಕೊಳ್ಳುವ ಅಭ್ಯಾಸ ಮೈಗೂಡಿಸಿಕೊಳ್ಳಬೇಕು. ಪುಸ್ತಕ ಓದುವ ಅಭ್ಯಾಸ ರೂಢಿಸಿಕೊಳ್ಳಬೇಕು. ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಸಂಪರ್ಕದಲ್ಲಿರಬೇಕು ಎಂದು ಸಲಹೆ ನೀಡಿದರು. .

ಎಐಟಿ ಪ್ರಾಚಾರ್ಯ ಪ್ರೊ.ಸಿ.ಟಿ.ಜಯದೇವ ಇದ್ದರು.

***
ಜೀವನದ ಪ್ರತಿ ಕ್ಷಣವೂ ಅಮೂಲ್ಯವಾದದು. ಈಗ ಮಾಡಬೇಕಿರುವ ಕೆಲಸ ಬಿಟ್ಟು ಮತ್ತೊಂದು ಕೆಲಸ ಮಾಡುವುದೂ ಸೋಮಾರಿತನ. ನಮ್ಮ ಜೀವನಕ್ಕೆ ನಾವೇ ದಾರಿದೀಪ ಎಂಬುದನ್ನು ತಿಳಿದುಕೊಳ್ಳಬೇಕು.
–ನಿರ್ಮಲಾನಂದನಾಥ ಸ್ವಾಮೀಜಿ, ಆದಿಚುಂಚನಗಿರಿ ಸಂಸ್ಥಾನ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !