ಶನಿವಾರ, ಡಿಸೆಂಬರ್ 3, 2022
21 °C
ಇಂದು ಪತ್ರಿಕಾ ವಿತರಕರ ದಿನಾಚರಣೆ– ನಸುಕಿನಲ್ಲಿ ಚಾಚೂ ತಪ್ಪದೆ ಕಾರ್ಯ ನಿರ್ವಹಿಸುವ ವಿತರಕರಿಗೆ ಸಲಾಂ

ಚಿಕ್ಕಮಗಳೂರು: ಪತ್ರಿಕೆ ವಿತರಣೆ: ನಲಿವು– ನೋವಿನ ಬಂಡಿ

ಧನ್ಯಪ್ರಸಾದ್‌ ಬಿ.ಜೆ. Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ಪತ್ರಿಕೆ ಮತ್ತು ಓದು ಗರ ನಡುವಿನ ಕೊಂಡಿ ಪತ್ರಿಕಾ ವಿತರಕರು. ನಿದ್ರೆಯ ಸುಖ ವನ್ನು ಬದಿಗಿರಿಸಿ ನಸುಕಿನಲ್ಲೇ ಎದ್ದು ಮನೆ ಮನೆಗೆ ದಿನಪತ್ರಿಕೆ ತಲುಪಿಸುವುದು ಅವರ ನಿತ್ಯ ಕಾಯಕ. ಚುರುಕು, ತಾಳ್ಮೆ, ಶ್ರಮ ಬೇಡುವ ಸವಾಲಿನ ಕೆಲಸ ಇದು.

ಈ ವರ್ಷ ಕೋವಿಡ್‌ ಸದ್ದಿನ ನಡು ವೆಯೂ ಜಗ್ಗದೆ, ಕುಗ್ಗದೆ ಗ್ರಾಹಕರಿಗೆ ಸುದ್ದಿ ಪತ್ರಿಕೆ ನಿತ್ಯ ತಲುಪಿಸಿದ್ದೂ ಒಂದು ಸಾಧನೆ. ನಸುಗತ್ತಲಿನಲ್ಲಿ ಊರಿನ ರಸ್ತೆ, ವೃತ್ತ, ಪಾದಚಾರಿ ಮಾರ್ಗಗಳಲ್ಲಿ ಇಳಿಸಿದ ಪೇಪರ್‌ ಬಂಡಲ್‌ಗಳನ್ನು ಬಿಚ್ಚಿ, ವಿಂಗಡಿಸಿ ಚಕಚಕ ಜೋಡಿಸಿಕೊಳ್ಳಬೇಕು. ಪತ್ರಿಕೆಗಳನ್ನು ಸೈಕಲ್‌ಗೇರಿಸಿಕೊಂಡು ನಿಗದಿಯಾದ ಬಡವಾಣೆಗಳಲ್ಲಿ ಹಂಚಬೇಕು.

ಬೆಳಗಿನ 4 ಗಂಟೆ ಹೊತ್ತಿಗೆ ಶುರುವಾಗುವ ಈ ದಿನಪತ್ರಿಕೆ ಸಂತೆ ಮುಗಿಯುವ ಹೊತ್ತಿಗೆ 8 ಗಂಟೆ ದಾಟಿರುತ್ತದೆ. ಪೇಪರ್‌ ಮಡಚಿ, ಕಟ್ಟಿ ಗಮ್ಯಕ್ಕೆ ಎಸೆಯುವುದೂ ಒಂದು ಕಲೆ. ಪತ್ರಿಕೆ ಹಂಚುವ ಹುಡುಗರು ಅದನ್ನು ಸಿದ್ಧಿಸಿಕೊಂಡಿರುತ್ತಾರೆ.

ಬಡಾವಣೆಯ ರಸ್ತೆ, ಮನೆ, ಗ್ರಾಹಕರ ಅವರ ಮನದಾಳದಲ್ಲಿ ಅಚ್ಚಾಗಿರುತ್ತವೆ. ಮುಂಜಾನೆ ಕಾಫಿ ಕುಡಿಯುವ ಹೊತ್ತಿಗೆ ಪತ್ರಿಕೆಯನ್ನು ಗ್ರಾಹಕರಿಗೆ ತಲುಪಿಸುವ ಹೊಣೆ ನಿರ್ವಹಿಸುತ್ತಾರೆ. ಮಳೆ, ಚಳಿ, ಮಂಜು ಮುಸುಕು, ಬೀದಿ ನಾಯಿ ಇದಾವು ದಕ್ಕೂ ಅಂಜದೆ–ಜಗ್ಗದೆ ಚಾಚೂ ತಪ್ಪದೆ ಕಾರ್ಯನಿರ್ವಹಿಸುವ ಪತ್ರಿಕಾ ವಿತರಕರಿಗೆ ಸಲಾಂ ಹೇಳಲೇಬೇಕು.

ಬೆಳಿಗ್ಗೆ ಪತ್ರಿಕೆ ಬರುವುದು ಸ್ವಲ್ಪ ತಡವಾದರೆ ವಿತರಕರಿಗೆ ಜೋರು ಮಾಡುವುದು ಸಾಮಾನ್ಯ. ಗ್ರಾಹಕರನ್ನು ಸಂತೈಸುವುದು ವಿತರಿಕರಿಗೆ ಸವಾಲು. ನೋವು–ನಲಿವಿನ ಅನುಭವಗಳ ಮೂಟೆ ಈ ಜೀವನ.

ನಿಗದಿತ ಸಮಯದಲ್ಲಿ ಪತ್ರಿಕೆ: ‘ಕೋವಿಡ್‌ ಕಾಲಘಟ್ಟದಲ್ಲಿ ಜನರು ಪತ್ರಿಕೆಯನ್ನು ಹೆಚ್ಚು ಓದಲು ಬಯಸಿದ್ದರು. ನಿಗದಿತ ಸಮಯದಲ್ಲಿ ಪತ್ರಿಕೆ ಬರುತ್ತಿತ್ತು. ಆ ಸಂದರ್ಭ ಕೆಲವೇ ಓದುಗರು ಪತ್ರಿಕೆ ಬೇಡ ಎಂದಿದ್ದರೂ ಹೆಚ್ಚಿನ ಮಂದಿ ಪತ್ರಿಕೆಯ ಸುದ್ದಿಗಾಗಿ ಕಾತುರರಾಗಿದ್ದರು’ ಎಂದು ಹೇಳುತ್ತಾರೆ ಕೊಪ್ಪದ ಪತ್ರಿಕಾ ವಿತರಕ ಕೆ.ಎಂ.ನಾಗರಾಜ್.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು