ನರಸಿಂಹರಾಜಪುರ: ಪಟ್ಟಣ ಪಂಚಾಯಿತಿಯಿಂದ 2026–27ನೇ ಸಾಲಿಗೆ ₹57 ಲಕ್ಷ ಉಳಿತಾಯ ಆಯವ್ಯಯವನ್ನು ಮಂಡಿಸಲಾಯಿತು.

ಪಟ್ಟಣ ಪಂಚಾಯಿತಿಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಆಡಳಿತಾಧಿಕಾರಿ ತಹಶೀಲ್ದಾರ್ ನೂರುಲ್ ಆಯವ್ಯಯ ಮಂಡಿಸಿದರು.

ಪ್ರಸಕ್ತ ಸಾಲಿನಲ್ಲಿ ಪ್ರಾರಂಭಿಕ ಶಿಲ್ಕು ಸೇರಿದಂತೆ ₹7.17 ಕೋಟಿ ಆದಾಯ ನಿರೀಕ್ಷಿಸಲಾಗಿದ್ದು, ₹6.60 ಕೋಟಿ ವೆಚ್ಚ ಅಂದಾಜಿಸಲಾಗಿದೆ. ಪಟ್ಟಣ ಪಂಚಾಯಿತಿಗೆ ನಿರೀಕ್ಷಿಸಲಾದ ಆದಾಯ ಬರುವ ಮೂಲಗಳೆಂದರೆ ವಾಣಿಜ್ಯ ಮಳಿಗೆಗಳು ಹಾಗೂ ನೆಲ ಬಾಡಿಗೆಯಿಂದ ₹72.26 ಲಕ್ಷ, ಇತರೆ ಜಮೆ ₹41.03 ಲಕ್ಷ, ನೀರಿನ ತೆರಿನ ತೆರಿಗೆ ₹20.20 ಲಕ್ಷ, ಸರ್ಕಾರದ ಅನುದಾನಗಳಾದ ಎಸ್.ಎಫ್.ಸಿ ಮುಕ್ತನಿಧಿ ಅನುದಾನ ₹2 ಲಕ್ಷ, ಎಸ್.ಎಫ್.ಸಿ ವಿಶೇಷ ಅನುದಾನ ₹10 ಲಕ್ಷ, 16ನೇ ಹಣಕಾಸು ಯೋಜನೆ ಅನುದಾನ ₹90 ಲಕ್ಷ, ಸಲ್ಮ್ ಯೋಜನೆ ಅನುದಾನ ₹3 ಲಕ್ಷ, ಆಶ್ರಯ ಯೋಜನೆ ಅನುದಾನ ₹5 ಲಕ್ಷ, ಕುಡಿಯುವ ನೀರಿನ ಅನುದಾನ ₹5 ಲಕ್ಷ, ವಿಧಾನಸಭಾ ಸದಸ್ಯರು, ವಿಧಾನಪರಿಷತ್ ಸದಸ್ಯರು ಹಾಗೂ ಲೋಕಸಭಾ ಸದಸ್ಯರ ವಿಶೇಷ ಅನುದಾನ ಮತ್ತು ಅತಿವೃಷ್ಟಿ ಪರಿಹಾರ ಅನುದಾನ ₹5 ಲಕ್ಷ, ವೇತನ ಅನುದಾನ ₹1.45 ಕೋಟಿ, ವಿದ್ಯುತ್ ಶಕ್ತಿ ಅನುದಾನ ₹66 ಲಕ್ಷ, ಸ್ವಚ್ಛ್ ಭಾರತ್ ಯೋಜನೆಯ ಅನುದಾನ ₹20 ಲಕ್ಷ, ಒಟ್ಟು ₹5.29 ಕೋಟಿ ಅನುದಾನ ನಿರೀಕ್ಷಿಸಲಾಗಿದೆ ಎಂದರು.

ಪ್ರಸಕ್ತ ಸಾಲಿನ ನಿರೀಕ್ಷಿತ ಅಂದಾಜು ವೆಚ್ಚದ ಮೂಲಗಳು ಯಾವುದೆಂದರೆ ಕಚೇರಿ ಆಡಳಿತಾತ್ಮಕ ವೆಚ್ಚಗಳು, ನೌಕರರ ವೇತನ ₹2.47 ಕೋಟಿ, ಕಚೇರಿ ಉಪಕರಣಗಳು ಹಾಗೂ ಪೀಠೋಪಕರಣಗಳು ₹20 ಲಕ್ಷ, ವಂತಿಕೆಗಳು ಮತ್ತು ಸಹಾಯಧನ ₹13 ಲಕ್ಷ, ರಸ್ತೆಗಳ ಅಭಿವೃದ್ಧಿ ಮತ್ತು ನಿರ್ಮಾಣ ₹22.20 ಲಕ್ಷ, ಚರಂಡಿಗಳ ಅಭಿವೃದ್ಧಿ ಮತ್ತು ನಿರ್ಮಾಣ ₹60 ಲಕ್ಷ, ನೀರು ವಿತರಣಾ ವ್ಯವಸ್ಥೆ ₹25 ಲಕ್ಷ, ಬೀದಿ ದೀಪಗಳ ವ್ಯವಸ್ಥೆ ₹10 ಲಕ್ಷ, ಮಾರುಕಟ್ಟೆ, ಬಸ್ ನಿಲ್ದಾಣ ಹಾಗೂ ಸಮುದಾಯ ಭವನಗಳ ಅಭಿವೃದ್ಧಿ ₹31 ಲಕ್ಷ, ಸ್ಮಶಾನ, ಉದ್ಯಾನಗಳ ಅಭಿವೃದ್ಧಿ ಹಾಗೂ ನಾಗರಿಕ ವಿನ್ಯಾಸಗಳಿಗೆ ₹55 ಲಕ್ಷ, ಘನತ್ಯಾಜ್ಯ ವಸ್ತು ನಿರ್ವಹಣಾ ಘಟಕದ ಅಭಿವೃದ್ಧಿ ₹55 ಲಕ್ಷ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಕಲ್ಯಾಣ ಕಾರ್ಯಕ್ರಮಕ್ಕೆ ₹1.88 ಲಕ್ಷ ಹಾಗೂ ಅಂಗವಿಕಲರ ಕಲ್ಯಾಣ ಕಾರ್ಯಕ್ರಮಕ್ಕೆ ₹98 ಸಾವಿರ ವೆಚ್ಚವಾಗಬಹುದೆಂದು ನಿರೀಕ್ಷಿಸಲಾಗಿದೆ ಎಂದು ಅವರು ವಿವರಿಸಿದರು.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಆರ್.ವಿ. ಮಂಜುನಾಥ್, ಎಂಜಿನಿಯರ್ ಅಶ್ವಿನಿ, ಲೆಕ್ಕಾಧಿಕಾರಿ ಉಷಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.