ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೊರಗುತ್ತಿಗೆ ನೌಕರರನ್ನು ಕಾಯಂಗೊಳಿಸದಂತೆ ಅಧಿಕಾರಿಗಳ ಹುನ್ನಾರ: ಆರೋಪ

Published : 17 ಸೆಪ್ಟೆಂಬರ್ 2024, 14:07 IST
Last Updated : 17 ಸೆಪ್ಟೆಂಬರ್ 2024, 14:07 IST
ಫಾಲೋ ಮಾಡಿ
Comments

ಮೂಡಿಗೆರೆ: ‘ಎರಡು ದಶಕಗಳಿಂದ ಕೆಪಿಟಿಸಿಎಲ್ ಹೊರಗುತ್ತಿಗೆ ನೌಕರರಾಗಿ ಕಾರ್ಯನಿರ್ವಹಿಸುತ್ತಿರುವವರನ್ನು ಕಾಯಂ ನೌಕರರನ್ನಾಗಿ ನೇಮಕ ಮಾಡಲು ಸರ್ಕಾರ ಸೂಚನೆ ನೀಡಿದೆ. ಆದರೆ, ಇದನ್ನು ತಡೆಯಲು ಅಧಿಕಾರಿಗಳು ಹುನ್ನಾರ ನಡೆಸುತ್ತಿದ್ದಾರೆ’ ಎಂದು ರಾಜ್ಯ ಕೆಪಿಟಿಸಿಎಲ್ ಹೊರ ಗುತ್ತಿಗೆ ನೌಕರರ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಕೆ. ಭರತ್ ದೂರಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ರಾಜ್ಯ ಕೆಪಿಟಿಸಿಎಲ್ ಹೊರಗುತ್ತಿಗೆ ನೌಕರರ ಒಕ್ಕೂಟದ ನೂತನ ತಾಲ್ಲೂಕು ಸಮಿತಿಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ರಾಜ್ಯ ಸರ್ಕಾರ ಈಗಾಗಲೇ ಹೊರಗುತ್ತಿಗೆ ನೌಕರರನ್ನು ಕಾಯಂ ಮಾಡುವಂತೆ ಪತ್ರ ಹೊರಡಿಸಿದೆ. ಆದರೆ, ಗುತ್ತಿಗೆದಾರರು ಹಾಗೂ ಕೆಲವು ಅಧಿಕಾರಿಗಳು ಕೆಲಸದ ಅನುಭವವಿರುವ ನೌಕರರನ್ನು ಹೊರಗಿಟ್ಟಿದ್ದಾರೆ. ಗುತ್ತಿಗೆ ಆಧಾರದಿಂದ ನೇಮಕಗೊಂಡವರನ್ನು 5 ವರ್ಷ ಮಾತ್ರ ದುಡಿಸಿಕೊಂಡು ನಂತರ ಅವರನ್ನು ಕೈಬಿಟ್ಟು ತಮಗೆ ಬೇಕಾದ ನೌಕರರಿಗೆ ಖಾಯಂ ಮಾಡಲು ಸಂಚು ರೂಪಿಸಲಾಗಿದೆ’ ಎಂದು ಆರೋಪಿಸಿದರು.

‘ನೈಜ ನೌಕರರಿಗೆ ಕೆಲಸ ಕಾಯಂಗೊಳಿಸುವ ಉದ್ದೇಶದಿಂದ ಮತ್ತು ಸರ್ಕಾರಕ್ಕೆ ಗುತ್ತಿಗೆದಾರರಿಂದಾಗುವ ಹೊರೆಯನ್ನು ತಪ್ಪಿಸುವ ಸಲುವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಪಿಟಿಸಿಎಲ್ ಗುತ್ತಿಗೆ ನೌಕರರನ್ನು ಕಾಯಂ ಮಾಡಲು ಹೊರಟಿರುವುದು ಉತ್ತಮ ನಡೆಯಾಗಿದೆ. ಅದರ ವಿರುದ್ಧ ಕೆಲಸ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಹೋರಾಟದ ಮೂಲಕ ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಈಗ ತಾಲ್ಲೂಕು ಸಮಿತಿ ರಚಿಸಲಾಗಿದೆ. ಕೆಪಿಟಿಸಿಎಲ್ ತಾಲ್ಲೂಕು ವ್ಯಾಪ್ತಿಯ 67 ನೌಕರರು ಕಾರ್ಯ ನಿರ್ವಹಿಸುತ್ತಿದ್ದು, ಎಲ್ಲರನ್ನೂ ಕಾಯಂಗೊಳಿಸಬೇಕಿದೆ’ ಎಂದರು.

ತಾಲ್ಲೂಕು ಸಮಿತಿ ನೂತನ ಅಧ್ಯಕ್ಷ ಕಿರುಗುಂದ ಕೆ.ಕೆ. ಚಂದ್ರಪ್ಪ, ಗೌರವ ಅಧ್ಯಕ್ಷ ಜಿ.ಸಿ.ಪ್ರವೀಣ್ ಕುಮಾರ್, ಉಪಾಧ್ಯಕ್ಷ ಎಚ್. ಅಶೋಕ್, ಬಿ.ಟಿ. ಶಂಕರ್, ಪ್ರಧಾನ ಕಾರ್ಯದರ್ಶಿ ಆರ್. ಆನಂದ್‍ರಾವ್, ಎಂ.ಎಚ್. ಶಶಿ, ಮರ್ಕಲ್ ಚಂದ್ರೇಶ್, ಸಹ ಕಾರ್ಯದರ್ಶಿ ಆರ್. ನಾಗೇಶ್, ಎಸ್.ಕೆ. ಮಹೇಶ್, ಸಂಘಟನಾ ಕಾರ್ಯದರ್ಶಿಯಾಗಿ ಎ.ಎನ್. ಸವಿನ್, ಕೆ.ಎಲ್. ಪಾಲಕ್ಷ, ರಜತ್, ಖಜಾಂಚಿ ಕೆ.ಎನ್. ಸತೀಶ್, ಪದಾಧಿಕಾರಿ ಎಸ್. ಇಂದ್ರೇಶ್, ಎಚ್.ಎಂ. ಆದರ್ಶ, ಪ್ರವೀಣ್ ಬಕ್ಕಿ, ಹೊನ್ನಯ್ಯ, ಸಂತೋಷ್, ಕೃಷ್ಣಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT