ಚಿಕ್ಕಮಗಳೂರು: ಕಚೇರಿಗಳಲ್ಲಿ ಸರ್ಕಾರಿ ನೌಕರರಿಗಿಂತ ಅತಿಹೆಚ್ಚು ಕೆಲಸ ಮಾಡುತ್ತಿರುವುದು ಹೊರಗುತ್ತಿಗೆ ನೌಕರರು. ಕೆಲವು ದಿನಗಳು ಹೊರಗುತ್ತಿಗೆ ನೌಕರರು ವೃತ್ತಿ ಬದಿಗಿಸಿದರೆ ಸರ್ಕಾರ ಮುನ್ನಡೆಸುವುದು ಕಷ್ಟ ಎಂದು ಸರ್ಕಾರಿ ಹೊರಗುತ್ತಿಗೆ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸುಧಾಕರ ಹೇಳಿದರು.

ನಗರದ ಕುವೆಂಪು ಕಲಾಮಂದಿರದಲ್ಲಿ ಜಿಲ್ಲಾ ಸರ್ಕಾರಿ ಹೊರಗುತ್ತಿಗೆ ನೌಕರರ ಸಂಘದ ವತಿಯಿಂದ ಭಾನುವಾರ ಆಯೋಜಿಸಿದ್ದ ನೂತನ ಜಿಲ್ಲಾ ಘಟಕ ಸ್ಥಾಪನೆ ಹಾಗೂ ಜಾಗೃತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಬಹುತೇಕ ಸರ್ಕಾರಿ ಕಚೇರಿಗಳಲ್ಲಿ ದಾಖಲಾತಿ ನಿರ್ವಹಣೆ ಸೇರಿ ಪ್ರತಿಯೊಂದು ಕಾರ್ಯವನ್ನು ಹೊರಗುತ್ತಿಗೆ ನೌಕರರೇ ನಿರ್ವಹಿಸುತ್ತಿದ್ದಾರೆ. ಸರ್ಕಾರಿ ಅಧಿಕಾರಿಗಳು ಕೇವಲ ಸಹಿಗಷ್ಟೇ ಸೀಮಿತರಾಗಿದ್ದಾರೆ. ಹೀಗಾಗಿ ಬಹುತೇಕ ಕೆಲಸ ನಿರ್ವಹಿಸುವ ಗುತ್ತಿಗೆ ನೌಕರರಿಗೆ ಕನಿಷ್ಠ ವೇತನ ಒದಗಿಸುವುದು ಸರ್ಕಾರದ ಕರ್ತವ್ಯ ಎಂದರು.

ರಾಜ್ಯದಾದ್ಯಂತ ಅನೇಕ ಜಿಲ್ಲೆಗಳಲ್ಲಿ ಹೊರಗುತ್ತಿಗೆ ನೌಕರರಿಗೆ ಸೇವಾ ಭದ್ರತೆ, ಕನಿಷ್ಠ ವೇತನ, ಪಿಎಫ್ ಹಾಗೂ ಇಎಸ್ಐ ಸೌಲಭ್ಯವಿಲ್ಲ. ಕೆಲವು ಏಜೆನ್ಸಿಗಳಿಂದ ನೇಮಕಗೊಳ್ಳುವ ಸಿಬ್ಬಂದಿಗಳಿಗೆ ಪ್ರತಿ ತಿಂಗಳು ವೇತನ ದೊರಕುತ್ತಿಲ್ಲ. ಇದರಿಂದ ದಿನದ ಕೂಲಿಗಾಗಿ ನೌಕರರು ಇಂದು ಹೋರಾಟದ ಹಾದಿ ಹಿಡಿಯಬೇಕಾಗಿದೆ ಎಂದು ತಿಳಿಸಿದರು.

ಕಟ್ಟಡ ಕಾರ್ಮಿಕರ ಮಕ್ಕಳ ಮದುವೆ, ವಿದ್ಯಾಭ್ಯಾಸ ಹಾಗೂ ವಿಮೆ ಸೌಲಭ್ಯವನ್ನು ಕಾರ್ಮಿಕ ಕಲ್ಪಿಸುತ್ತಿದೆ. ಆದರೆ, ಹೊರಗುತ್ತಿಗೆ ನೌಕರರ ಮಕ್ಕಳಿಗೆ ಯಾವುದೇ ಸೌಲಭ್ಯ ಇಲ್ಲ. ಮುಂದೆ ಕಾರ್ಮಿಕ ಇಲಾಖೆಯಡಿ ಲಭ್ಯವಾಗುವ ಎಲ್ಲಾ ಸೌಲಭ್ಯವು ಗುತ್ತಿಗೆ ನೌಕರರಿಗೆ ಒದಗಿಸಿಕೊಡಬೇಕು. ಮಹಿಳಾ ನೌಕರರಿಗೆ ಋತುಚಕ್ರ ಸಮಯದಲ್ಲಿ ರಜೆ ಹಾಗೂ ರಕ್ಷಣೆಗಾಗಿ ಸಮಿತಿ ರಚಿಸಬೇಕು ಎಂದು ಅವರು ಹೇಳಿದರು.

ಶಾಸಕ ಎಚ್.ಡಿ. ತಮ್ಮಯ್ಯ ಮಾತನಾಡಿ, ‘ಹೊರಗುತ್ತಿಗೆ ನೌಕರರ ಸಮಸ್ಯೆ ಕಳೆದ ಮೂರು–ನಾಲ್ಕು ದಶಕಗಳಿಂದ ಇದೆ. ಈ ಸಮಸ್ಯೆಗಳಿಗೆ ಅಧಿಕಾರಿ, ಜನಪ್ರತಿನಿಧಿಗಳು ಸ್ಪಂದಿಸುವುದು ಕರ್ತವ್ಯ. ನೌಕರರು ಆತ್ಮಶಕ್ತಿ ಕಳೆದುಕೊಳ್ಳಬಾರದು. ಸಂಬಂಧಿಸಿದ ಸಚಿವರೊಂದಿಗೆ ಚರ್ಚಿಸಿ ಸಮಸ್ಯೆಗೆ ಪರಿಹಾರ ಕಲ್ಪಿಸಲಾಗುವುದು’ ಎಂದು ಹೇಳಿದರು.

ಸಂಘದ ಜಿಲ್ಲಾ ಸಂಘಟನಾ ಸಂಚಾಲಕ ಎಂ.ಜೆ. ಪ್ರದೀಪ್ ಮಾತನಾಡಿ, ‘ಜಿಲ್ಲೆಯಲ್ಲಿ ಸುಮಾರು 4,500ಕ್ಕೂ ಹೆಚ್ಚು ಹೊರಗುತ್ತಿಗೆ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಈವರೆಗೆ ಸರ್ಕಾರದ ಸವಲತ್ತು ಪಡೆಯದಿರುವುದು ನೋವಿನ ಸಂಗತಿ. ₹14 ಸಾವಿರ ವೇತನದಲ್ಲಿ ನೌಕರರು ಜೀವನ ನಡೆಸುವುದು ಕಷ್ಟ’ ಎಂದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಲ್.ಮಂಜು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಹೊರಗುತ್ತಿಗೆ ನೌಕರರು ಸಂಘಟನೆಯಿಂದ ಪ್ರಶ್ನಿಸಿದರೆ ಯಾವುದೇ ಏಜೆನ್ಸಿಗಳು ವೃತ್ತಿಯಿಂದ ವಜಾಗೊಳಿಸಲು ಸಾಧ್ಯವಿಲ್ಲ. ಅಲ್ಲದೇ ಸರ್ಕಾರದ ಪ್ರತಿಯೊಂದು ಸೌಲಭ್ಯವನ್ನು ನ್ಯಾಯಬದ್ಧವಾಗಿ ಪಡೆದುಕೊಳ್ಳಲು ಸಾಧ್ಯ. ಇದೇ ತಿಂಗಳು 31ರೊಳಗೆ ನೌಕರರ ಸಮಸ್ಯೆ ಬಗೆಹರಿಸುವುದಾಗಿ ಸರ್ಕಾರ ತಿಳಿಸಿದ್ದು ಎಲ್ಲರಲ್ಲೂ ಒಗ್ಗಟ್ಟಿನಿಂದ ಇರಬೇಕು’ಎಂದರು.

ಕಾರ್ಯಕ್ರಮದಲ್ಲಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಡಿ.ಡಮರುಗೇಶ್, ಸಂಚಾಲಕ ಎನ್. ಗಂಗಾಧರ್, ಕಾಂಗ್ರೆಸ್ ಮುಖಂಡ ಜಯರಾಜ್ ಅರಸ್, ಹಾಸನ ಘಟಕದ ಅಧ್ಯಕ್ಷ ರಂಗನಾಥ್, ಶಿವಮೊಗ್ಗ ಘಟಕದ ಅಧ್ಯಕ್ಷ ಆರ್.ಪ್ರಮೋದ್ ಇದ್ದರು.

ಜಿಲ್ಲಾ ನೂತನ ಪದಾಧಿಕಾರಿಗಳು

ಎಲ್.ಮಂಜು(ಅಧ್ಯಕ್ಷ) ಎನ್.ಗಿರೀಶ್ (ಉಪಾಧ್ಯಕ್ಷ) ಸುಬ್ರಹ್ಮಣ್ಯ (ಪ್ರ.ಕಾರ್ಯದರ್ಶಿ) ಮಣಿಕುಮಾರ್ (ಕಾರ್ಯದರ್ಶಿ) ಟಿ.ಈ.ತಮ್ಮಯ್ಯ (ಸಹ ಕಾರ್ಯದಶಿ) ಎಂ.ಜೆ. ಪ್ರದೀಫ್ (ಸಂ.ಕಾರ್ಯದರ್ಶಿ) ಕೆ.ಎಸ್.ಮಂಜುಳಾ (ಖಜಾಂಚಿ) ಹೆಚ್.ಡ.ದರ್ಶನ್ (ನಿರ್ದೇಶಕರು).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.