ಥಳಿತದಿಂದ ಹಾವಿಗೆ ಗಾಯ; ಚಿಕಿತ್ಸೆ

6
ಕಡವೆ ನುಂಗಲು ಹೆಬ್ಬಾವು ಯತ್ನ

ಥಳಿತದಿಂದ ಹಾವಿಗೆ ಗಾಯ; ಚಿಕಿತ್ಸೆ

Published:
Updated:
Deccan Herald

ಚಿಕ್ಕಮಗಳೂರು: ತಾಲ್ಲೂಕಿನ ಭಕ್ತರಹಳ್ಳಿಯ ಜಮೀನೊಂದರಲ್ಲಿ ಗುರುವಾರ ಬೆಳಿಗ್ಗೆ ಕಡವೆಯೊಂದನ್ನು ನುಂಗಲು ಯತ್ನಿಸುತ್ತಿದ್ದ ಹೆಬ್ಬಾವನ್ನು ಕೆಲವರು ಥಳಿಸಿ ಗಾಯಗೊಳಿಸಿದ್ದಾರೆ.

ಥಳಿತದಿಂದ ಗಾಯಗೊಂಡಿದ್ದ ಹೆಬ್ಬಾವನ್ನು ಚಿಕಿತ್ಸೆಗೆ ಹಾಸನಕ್ಕೆ ಒಯ್ಯಲಾಗಿದೆ.

ವಲಯ ಅರಣ್ಯ ಅಧಿಕಾರಿ ಶಿಲ್ಪಾ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ಬೆಳಿಗ್ಗೆ 11 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಹಾವಿನ ಬೆನ್ನುಹುರಿ ಮುರಿದಿದೆ. ಗಾಯಗಳಾಗಿವೆ. ಸುಮಾರು 10 ವರ್ಷದ ಹೆಬ್ಬಾವು, 12 ಅಡಿಯಷ್ಟು ಉದ್ದ ಇದೆ. ಹಾಸನದ ಪಶುವೈದ್ಯಕೀಯವಿ ಜ್ಞಾನ ವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರಕ್ಕೆ ಒಯ್ದು ಚಿಕಿತ್ಸೆ ಕೊಡಿಸಲಾಗಿದೆ’ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !