ಚಿಕ್ಕಮಗಳೂರು: ನಗರದ 35ನೇ ವಾರ್ಡ್ನ ಕೆಂಪನಹಳ್ಳಿ ರಸ್ತೆಯ ಜಾಮಿಯಾ ಬಡಾ ಈದ್ಗಾ ಮೈದಾನದ ಕಾಂಪೌಂಡ್ ಪಕ್ಕದ ಆಟೊ ನಿಲ್ದಾಣದ ಬದಿಯಲ್ಲಿನ ಪೈಪು ಹಾಳಾಗಿ ನೀರು ಸೋರಿಕೆಯಾಗುತ್ತಿದೆ. ಕಾಳಿದಾಸ ನಗರದ ಕಡೆಗಿನ ಸಂಪರ್ಕ ರಸ್ತೆ ಮೇಲೆ ನೀರು ಹರಿಯುತ್ತದೆ.

ಕಾಳಿದಾಸ ನಗರದ ಕಡೆಗಿನ ಸಂಪರ್ಕ ರಸ್ತೆಯನ್ನು ಕಾಮಗಾರಿಗೆ ಅಗೆದು ಮುಚ್ಚಲಾಗಿದೆ. ಪಕ್ಕದಲ್ಲೇ ಅಳಗುಂಡಿ (ಮ್ಯಾನ್ಹೋಲ್) ದುರಸ್ತಿಗೆ ಅಗೆದು ಮುಚ್ಚಲಾಗಿದೆ. ಕೆಂಪನಹಳ್ಳಿ ರಸ್ತೆಯ ಒಂದು ಬದಿಯಲ್ಲಿ ಚರಂಡಿ ಅಧ್ವಾನ ಸ್ಥಿತಿಯಲ್ಲಿದೆ. ಒಂದು ಭಾಗದಲ್ಲಿ ಕಲ್ಲು, ಮಣ್ಣು, ಕಸ ತುಂಬಿಕೊಂಡು ಮುಚ್ಚಿದ ಸ್ಥಿತಿಗೆ ತಲುಪಿದೆ.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಭವನ (ಆಶಾಕಿರಣ ಅಂಧ ಮಕ್ಕಳ ಪಾಠಶಾಲೆ ಸಮೀಪ) ಇದೇ ವಾರ್ಡ್ನಲ್ಲಿ ಇದೆ. ಕನ್ನಡ ಭವನ ಹಾದಿ ದುಃಸ್ಥಿತಿಯಲ್ಲಿದೆ. ಕಲ್ಲುಮಣ್ಣಿನ ಈ ಹಾದಿ ಬದಿಯಲ್ಲಿ ಗಿಡಗಂಟಿಗಳು ಬೆಳೆದಿವೆ. ಭವನ ನಿರ್ಮಾಣವಾಗಿ ಹಲವು ವರ್ಷಗಳಾಗಿವೆ. ಆದರೆ, ಈವರೆಗೆ ಭವನದ ಹಾದಿ ಡಾಂಬರೀಕಣ ಮಾಡಿಲ್ಲ. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದವರು ರಸ್ತೆ ಅಭಿವೃದ್ಧಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.

ಕೆಂಪನಹಳ್ಳಿಯ ಕಾವೇರಿ ಸಾಮಿಲ್ ಸಮೀಪ ಪುನೀತ್ರಾಜಕುಮಾರ್ ರಸ್ತೆ (3ನೇ ಕ್ರಾಸ್) ಬಳಿ ಬಾಕ್ಸ್ ಚರಂಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ರಸ್ತೆ ಮಧ್ಯೆ ಬೆಡ್ ನಿರ್ಮಾಣ ಕಾಮಗಾರಿ ಅರ್ಧಂಬರ್ಧ ಆಗಿದೆ. ಇದು ರಸ್ತೆ ಮಟ್ಟದಿಂದ ಸುಮಾರು ಒಂದೂವರೆ ಅಡಿ ಎತ್ತರ ಇದೆ. ರಸ್ತೆ ಮಧ್ಯದ ಈ ಚರಂಡಿ ಭಾಗದಲ್ಲಿ ಒಂದು ಬದಿಯಿಂದ ಮತ್ತೊಂದು ಬದಿಗೆ ಸಾಗಲು ಪಡಿಪಾಟಲು ಪಡಬೇಕಾಗಿದೆ. ಮೂರನೇ ಕ್ರಾಸ್ನಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆ. ರಸ್ತೆ ಮಧ್ಯೆ ಇರುವ ಆಳಗುಂಡಿ ಛೇಂಬರ್ಗೆ ಮುಚ್ಚಳ ಅಳವಡಿಸಿಲ್ಲ. ಅಪಾಯಕ್ಕೆ ಛೇಂಬರ್ ಬಾಯಿ ತೆರೆದುಕೊಂಡಿದೆ.

ಮಕ್ಕಳು, ವೃದ್ಧರು, ರೋಗಿಗಳು, ಅಶಕ್ತರು ರಸ್ತೆಯಲ್ಲಿನ ಚರಂಡಿ ಭಾಗದಲ್ಲಿ ದಾಟಲು ಹರಸಾಹಸ ಪಡಬೇಕು. ಕೆಲವು ಬಿದ್ದು ಪೆಟ್ಟಾಗಿರುವ ನಿದರ್ಶನಗಳು ಇವೆ. ಕಾಮಗಾರಿ ತ್ವರಿತವಾಗಿ ಮುಗಿಸಿ, ಸಮತಟ್ಟು ವಾರ್ಡ್ನ ಬಹಳಷ್ಟು ನಿವೇಶನಗಳು ಕಸದ ತೊಟ್ಟಿಗಳಾಗಿವೆ. ರಸ್ತೆ ಬದಿಯಲ್ಲೂ ಕಸ ರಾಶಿ ಬಿದ್ದಿದೆ. ವಾರ್ಡ್ನ ಹಲವೆಡೆ ರಸ್ತೆ ಫಲಕಗಳು ಇಲ್ಲ.

‘ರಸ್ತೆ, ಚರಂಡಿ ಕಾಮಗಾರಿಗೆ ಅನುದಾನ ಮಂಜೂರು’
ನಗರೋತ್ಥಾನ 4ನೇ ಹಂತದಲ್ಲಿ 35 ನೇ ವಾರ್ಡ್ನ ರಸ್ತೆ, ಚರಂಡಿ ಕಾಮಗಾರಿಗೆ ಅನುದಾನ ಮಂಜೂರಾಗಿದೆ. ಶೀಘ್ರದಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದು ವಾರ್ಡ್ ಸದಸ್ಯೆ ಲಲತಾ ಬಾಯಿ ‘ಪ್ರಜಾವಾಣಿ’ಗೆ ತಿಳಿಸಿದರು.

ಪುನೀತ್ ರಾಜಕುಮಾರ್ ರಸ್ತೆ ಬದಿಯ ಚರಂಡಿ ಕಾಮಗಾರಿ ತ್ವರಿತವಾಗಿ ಮುಗಿಸಿ ರಸ್ತೆ ಸಮತಟ್ಟುಗೊಳಿಸಲಾಗುವುದು. ಕಾಳಿದಾಸ ನಗರ ಸಂಪರ್ಕ ರಸ್ತೆ (ಸೇತುವೆ ಬಳಿ) ಸೋಲಾರ್ ಲೈಟ್ ವ್ಯವಸ್ಥೆ ಮಾಡಲಾಗುವುದು. ಕನ್ನಡ ಭವನದ ಹಾದಿ ಡಾಂಬರೀಕರಣಕ್ಕೆ ಅನುದಾನ ಮಂಜೂರಾಗಿದೆ. ಕೆಂಪನಹಳ್ಳಿ ಮುಖ್ಯರಸ್ತೆ ವಿಸ್ತರಣೆ ನಂತರ, ರಸ್ತೆ ಬದಿ ಹೊಸದಾಗಿ ಚರಂಡಿ ನಿರ್ಮಿಸಲು ಉದ್ದೇಶಿಸಲಾಗಿದೆ’ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.