ಮೂಡಿಗೆರೆ: ಪಟ್ಟಣದಲ್ಲಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಕಾನೂನು ಸಂಘರ್ಷಕ್ಕೆ ಒಳಪಟ್ಟ ಬಾಲಕನ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಸಂತ್ರಸ್ತೆಯ ಪೋಷಕರು ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿ ಬಾಲಕನನ್ನು ವಶಕ್ಕೆ ಪಡೆದಿದ್ದಾರೆ. ಬಾಲಕಿ ಹಾಗೂ ಬಾಲಕ ಪ್ರತ್ಯೇಕ ಧರ್ಮಕ್ಕೆ ಸೇರಿದವರಾಗಿದ್ದಾರೆ. ಪ್ರಕರಣ ಹಿನ್ನಲೆಯಲ್ಲಿ ಮುಂಜಾಗ್ರತೆಯಾಗಿ ಪಟ್ಟಣದ ವಿವಿಧೆಡೆ ಪೊಲೀಸ್ ಬಿಗಿ ಕಾವಲು ಹಾಕಲಾಗಿದೆ.

ಬಾಲಕನ ಪೋಷಕರೂ ದೂರು ನೀಡಿದ್ದು, ಪೋಕ್ಸೊ ಅನ್ವಯ ಹಾಗೂ ಹಲ್ಲೆ ಪ್ರಕರಣ ದಾಖಲಿಸಿದ್ದಾರೆ.

ವಿವರ: ಒಂದೇ ಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಲಕಿ– ಬಾಲಕ ಪ್ರೀತಿಸಿದ್ದರು. ಪಿ.ಯು ವ್ಯಾಸಂಗಕ್ಕೆ ಭಿನ್ನ ಕಾಲೇಜು ಸೇರಿದ್ದರೂ ಪ್ರೀತಿ ಮುಂದುವರಿದಿತ್ತು. ಪ್ರೀತಿ ವಿಚಾರ ಆರು ತಿಂಗಳ ಹಿಂದೆಯೇ ಪೋಷಕರಿಗೆ ತಿಳಿದಿದೆ. ಇಬ್ಬರೂ ಅನ್ಯ ಧರ್ಮಕ್ಕೆ ಸೇರಿದ್ದರಿಂದ ಪೋಷಕರು ಶಾಂತಿಯುತವಾಗಿ ಮಾತುಕತೆ ನಡೆಸಿ ಬಾಲಕ– ಬಾಲಕಿಗೆ ತಿಳಿವಳಿಕೆ ನೀಡಿದ್ದರು.

ಆದರೂ ಇಬ್ಬರೂ ಮೊಬೈಲ್ನಲ್ಲಿ ಸಂಪರ್ಕ ಇಟ್ಟುಕೊಂಡಿದ್ದರು. ಈ ಕುರಿತು ಸೋಮವಾರ ರಾತ್ರಿ ಎರಡೂ ಕುಟುಂಬಗಳ ಪೋಷಕರ ನಡುವೆ ವಾಕ್ಸಮರ, ಘರ್ಷಣೆ ನಡೆದಿದೆ ಎಂದು ಹೇಳಲಾಗಿದೆ.

ಈ ಸಂದರ್ಭದಲ್ಲಿ ಹಿಂದುತ್ವವಾದಿ ಸಂಘಟನೆ ಮುಖಂಡರು ಬಾಲಕನ ಮೊಬೈಲ್ ಅನ್ನು ಕಸಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಬಳಿಕ ಬಾಲಕ ಹಾಗೂ ಆತನ ಪೋಷಕರ ವಿರುದ್ಧ ಬಾಲಕಿಯ ಪೋಷಕರು ದೂರು ನೀಡಿದ್ದಾರೆ. ಬಾಲಕಿ ಪೋಷಕರು, ಸಂಬಂಧಿಕರು, ಹಿಂದುತ್ವವಾದಿ ಸಂಘಟನೆಯ ಮುಖಂಡರ ವಿರುದ್ಧ ಬಾಲಕನ ಪೋಷಕರು ದೂರು ನೀಡಿದ್ದರು. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.