ಪೊಲೀಸ್ ಇಲಾಖೆ ಆಧುನಿಕರಣ ಅಗತ್ಯ: ಬಗಾದಿಗೌತಮ್

ಬುಧವಾರ, ಏಪ್ರಿಲ್ 24, 2019
32 °C
ಪೊಲೀಸ್ ಧ್ವಜ ದಿನಾಚರಣೆ

ಪೊಲೀಸ್ ಇಲಾಖೆ ಆಧುನಿಕರಣ ಅಗತ್ಯ: ಬಗಾದಿಗೌತಮ್

Published:
Updated:
Prajavani

ಚಿಕ್ಕಮಗಳೂರು: ಪೊಲೀಸ್ ಇಲಾಖೆ ಆಧುನಿಕರಣಗೊಳ್ಳಬೇಕು. ಸಿಬ್ಬಂದಿಗೆ ಪ್ರಥಮ ದರ್ಜೆ ಸೌಲಭ್ಯ ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಬಗಾದಿಗೌತಮ್ ಅಭಿಪ್ರಾಯಪಟ್ಟರು.

ಪೊಲೀಸ್ ಇಲಾಖೆ ವತಿಯಿಂದ ನಗರದ ರಾಮನಹಳ್ಳಿ ಡಿಎಆರ್‌ ಮೈದಾನದಲ್ಲಿ ಮಂಗಳವಾರ ಏರ್ಪಡಿಸಿದ್ದ ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ನಕ್ಸಲ್ ಅಡಗು ತಾಣಗಳಿವೆ. ಪೊಲೀಸ್ ಇಲಾಖೆ ನೂತನ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು. ಆಧುನಿಕ ಆಯುಧಗಳನ್ನು ಸಿಬ್ಬಂದಿಗೆ ನೀಡಬೇಕು. ಸಿಬ್ಬಂದಿಗೆ ಉತ್ತಮ ಸವಲತ್ತು ನೀಡುವುದರಿಂದ ಅವರು ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.

ಪೊಲೀಸರು ಕರ್ತವ್ಯದಲ್ಲಿಯೇ ದಿನದ ಹೆಚ್ಚುಭಾಗ ಕಳೆಯುತ್ತಾರೆ. ಅವರು ಕಟುಂಬಗಳಿಗೆಸಾಕಷ್ಟು ಸಮಯ ನೀಡಿರುವುದಿಲ್ಲ. ಪೊಲೀಸರಿಗೆ ಸರಿಯಾಗಿ ಸೌಲಭ್ಯಗಳನ್ನು ನೀಡಿದರೆ ಅವರಿಂದ ಸಮಪರ್ಕವಾಗಿ ಕೆಲಸ ಪಡೆಯಲು ಸಾಧ್ಯವಾಗುತ್ತದೆ ಎಂದರು.
ನಿವೃತ್ತ ಎಎಸ್‌ಐ ಬಿ.ಎಚ್.ವಿಜಯಕುಮಾರ್‌ಸ್ವಾಮಿ ಮಾತನಾಡಿ, ಪೊಲೀಸ್ ಸಿಬ್ಬಂದಿ ಈ ಹಿಂದೆ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ, ಪಿಎಸ್ಐ ಅವರನ್ನು ನೇರವಾಗಿ ಭೇಟಿ ಮಾಡುವಂತಿರಲಿಲ್ಲ. ಆದರೆ ಈಗ ಪರಿಸ್ಥಿ ಬದಲಾಗಿದೆ. ಪೊಲೀಸ್ ಇಲಾಖೆ ಒಂದು ಕುಟುಂಬದಂತಾಗಿದೆ. ನೂತನವಾಗಿ ಇಲಾಖೆ ಸೇರಿರುವವರು ಎಲ್ಲಿಯೂ ಠಾಣೆ ಗುಟ್ಟುಗಳನ್ನು ಬಿಟ್ಟುಕೊಡಬಾರದು ಎಂದು ಕಿವಿಮಾತು ಹೇಳಿದರು.

ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಹರೀಶ್‌ಪಾಂಡೆ ಮಾತನಾಡಿ, ನಿವೃತ್ತ ಪೊಲೀಸ್ ಕಲ್ಯಾಣ ನಿಧಿಯ ಉಳಿತಾಯ ಖಾತೆಯಲ್ಲಿ ₹7.95 ಲಕ್ಷ ಇತ್ತು. ಅದಕ್ಕೆ ₹11.6 ಸಾವಿರ ಬಡ್ಡಿ ಬಂದಿದೆ. ಪೊಲೀಸ್ ಧ್ವಜ ಮಾರಾಟದಿಂದ ₹3.88 ಲಕ್ಷ ಸಂಗ್ರಹವಾಗಿದೆ. 2018–19ನೇ ಸಾಲಿನಲ್ಲಿ ಒಟ್ಟು ₹11.95 ಲಕ್ಷ ಸಂಗ್ರಹವಾಗಿತ್ತು ಎಂದರು.

ಈ ಅನುದಾನದಲ್ಲಿ 114 ನಿವೃತ್ತ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ವೈದ್ಯಕೀಯ ವೆಚ್ಚಕ್ಕಾಗಿ ₹5.58 ಲಕ್ಷ ವ್ಯಯಿಸಲಾಗಿದೆ. ನಿವೃತ್ತಿ ನಂತರ ಮೃತಪಟ್ಟ ಇಬ್ಬರು ಸಿಬ್ಬಂದಿ ಅಂತ್ಯಕ್ರಿಯೆಗೆ ಅವರ ಕುಟುಂಬಕ್ಕೆ ಒಟ್ಟು ₹10 ಸಾವಿರ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಪೊಲೀಸ್ ಮಾಹಿತಿದಾರರಾದ ಡಿ.ರವಿ, ಮನ್ಸೂರ್ ಅಹಮದ್, ಗೋವಿಂದಸ್ವಾಮಿ, ಎಂ.ಹರೀಶ್, ಪೀಟರ್ ಅಬ್ರಾಹಂ, ನಾಗೇಶ್ ಅಂಗೀರಸ ಅವರನ್ನು ಸನ್ಮಾನಿಸಲಾಯಿತು.

ಭಾರತೀಯ ವೈದ್ಯಕೀಯ ಸಂಘ(ಐಎಂಎ)ದ ವತಿಯಿಂದ ನಿವೃತ್ತ ಪೊಲೀಸರ ಆರೋಗ್ಯ ತಪಾಸಣೆ ನಡೆಸಲಾಯಿತು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಸವರಾಜ್ ಚೇಂಗಟಿ, ಐಎಂಎ ಜಿಲ್ಲಾಘಟಕದ ಅಧ್ಯಕ್ಷ ಡಾ.ಮೋಹನ್, ಜಂಟಿ ಕಾರ್ಯದರ್ಶಿ ಡಾ.ಸಂತೋಷ್, ಗೃಹ ರಕ್ಷಕ ದಳದ ಜಿಲ್ಲಾ ಕಮಾಂಡಂಟ್ ಅನಿಲ್‌ಕುಮಾರ್ ಇದ್ದರು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !