ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಲಿನ ಬೇಗೆಗೆ ಬೇಕು ಸಲಾಡ್‌...

Last Updated 27 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಮೂಲಂಗಿ ಸೊಪ್ಪಿನ ಸಲಾಡ್

ಬೇಕಾಗುವ ಸಾಮಗ್ರಿಗಳು: ಕತ್ತರಿಸಿದ ಮೂಲಂಗಿ ಸೊಪ್ಪು – 2ಕಪ್, ಕತ್ತರಿಸಿದ ಹಸಿಮೆಣಸಿನಕಾಯಿ – 5ರಿಂದ6, ಕಡಲೆಕಾಯಿಬೀಜದ ಪುಡಿ – 4ಚಮಚ, ಉಪ್ಪು – ರುಚಿಗೆ ತಕ್ಕಷ್ಟು, ನಿಂಬೆರಸ – 2ಚಮಚ, ತೆಂಗಿನಕಾಯಿತುರಿ – 1/4ಕಪ್, ಎಣ್ಣೆ – 2ಚಮಚ, ಹೆಚ್ಚಿದ ಕೊತ್ತಂಬರಿ ಸೊಪ್ಪು – 3ಚಮಚ.

ತಯಾರಿಸುವ ವಿಧಾನ: ಕಾಯಿಸಿದ ಎಣ್ಣೆಯಲ್ಲಿ ಮೂಲಂಗಿ ಸೊಪ್ಪನ್ನು ಹಾಕಿ ಬಾಡಿಸಿ. ಬಾಡಿಸಿದ ಸೊಪ್ಪಿಗೆ, ಹಸಿಮೆಣಸಿನಕಾಯಿ, ಉಪ್ಪು, ಕಡಲೆಕಾಯಿಬೀಜದ ಪುಡಿ, ನಿಂಬೆರಸವನ್ನು ಹಾಕಿ ಚೆನ್ನಾಗಿ ಕಲಕಿ. ಸರ್ವಿಂಗ್ ಬೌಲ್‍ಗೆ ವರ್ಗಾಯಿಸಿ, ಕೊತ್ತಂಬರಿಸೊಪ್ಪು, ತೆಂಗಿನಕಾಯಿ ತುರಿಯಿಂದ ಅಲಂಕರಿಸಿದರೆ ಮೂಲಂಗಿ ಸೊಪ್ಪಿನ ಸಲಾಡ್ ರೆಡಿ.

**

ಬಾಳೆಹಣ್ಣಿನ ಸಲಾಡ್

ಬೇಕಾಗುವ ಸಾಮಗ್ರಿಗಳು: ಬಾಳೆಣ್ಣಿನ ತುಂಡು – 2ಕಪ್, ಕತ್ತರಿಸಿದ ಏಪ್ರಿಕಾಟ್(ಜರದಾಳು ಹಣ್ಣು) – 1ಕಪ್, ಕತ್ತರಿಸಿದ ಹಸಿಮೆಣಸಿನಕಾಯಿ – 5ರಿಂದ6, ಚೆಕ್ಕೆ(ದಾಲ್ಚಿನ್ನಿ) ತುಂಡುಗಳು – 4ರಿಂದ5, ಕಡಲೆಕಾಯಿಬೀಜದ ಪುಡಿ – 3ಚಮಚ, ಕಾಳುಮೆಣಸಿನ ಪುಡಿ – 1/4ಚಮಚ, ತೆಂಗಿನಕಾಯಿ ತುರಿ – 1/4ಕಪ್, ಹೆಚ್ಚಿದ ಕೊತ್ತಂಬರಿ ಸೊಪ್ಪು – 3ಚಮಚ, ಉಪ್ಪು – ಚಿಟಿಕೆ

ತಯಾರಿಸುವ ವಿಧಾನ: ಬಾಳೆಹಣ್ಣಿನ ತುಂಡು ಹಾಗೂ ಏ‍‍‍ಪ್ರಿಕಾಟ್ ತುಂಡುಗಳನ್ನು ಸೇರಿಸಿಡಿ. ಈ ಮಿಶ್ರಣಕ್ಕೆ ಹಸಿಮೆಣಸಿನಕಾಯಿ, ಚಕ್ಕೆ, ಕಡಲೆಕಾಯಿ ಬೀಜದ ಪುಡಿ, ಕಾಳುಮೆಣಸಿನ ಪುಡಿ, ಉಪ್ಪು ಸೇರಿಸಿ ಕಲೆಸಿ. ತೆಂಗಿನಕಾಯಿ ತುರಿ, ಕೊತ್ತಂಬರಿಸೊಪ್ಪುಗಳಿಂದ ಅಲಂಕರಿಸಿ, ಸರ್ವಿಂಗ್ ಬೌಲ್‍ಗೆ ವರ್ಗಾಯಿಸಿ.

ಮಾವಿನ ಹಣ್ಣಿನ ಸಲಾಡ್‌

ಬೇಕಾಗುವ ಸಾಮಗ್ರಿಗಳು: ಮಾವಿನಹಣ್ಣಿನ ತುಂಡುಗಳು – 3ಕಪ್, ಕತ್ತರಿಸಿದ ಕಪ್ಪುದ್ರಾಕ್ಷಿ – 1ಕಪ್, ಕ್ಯಾರೆಟ್ ತುರಿ – 1/2ಕಪ್, ಕಡಲೆಕಾಯಿ ಬೀಜದಪುಡಿ – 3ಚಮಚ, ನಿಂಬೆರಸ – 1ಚಮಚ, ಕತ್ತರಿಸಿದ ಪುದಿನಾ – 3ಚಮಚ, ಉಪ್ಪು– ಚಿಟಿಕೆ, ಲವಂಗದ ಪುಡಿ – 1/2 ಚಮಚ

ತಯಾರಿಸುವ ವಿಧಾನ: ಮಾವಿನ ಹಣ್ಣಿನ ತುಂಡುಗಳು, ಕಪ್ಪುದ್ರಾಕ್ಷಿ ಹಾಗೂ ಕ್ಯಾರೆಟ್ ತುರಿಗಳನ್ನು ಸೇರಿಸಿಡಿ. ಈ ಮಿಶ್ರಣಕ್ಕೆ ಉಪ್ಪು, ಕಡಲೆಕಾಯಿ ಬೀಜದ ಪುಡಿ, ನಿಂಬೆರಸ, ಪುದಿನಾಗಳನ್ನು ಸೇರಿಸಿ ಕಲಕಿ. ಸರ್ವ್ ಮಾಡುವಾಗ ಲವಂಗದ ಪುಡಿ ಉದುರಿಸಿ.

**

ಹಣ್ಣು-ತರಕಾರಿಗಳ ಮಿಶ್ರ ಸಲಾಡ್‌

ಬೇಕಾಗುವ ಸಾಮಗ್ರಿಗಳು: ಕರಬೂಜ ಹಣ್ಣಿನ ತುಂಡುಗಳು – 1ಕಪ್, ಮಾವಿನಹಣ್ಣಿನ ತುಂಡುಗಳು – 1/2ಕಪ್, ಸೇಬಿನ ತುಂಡುಗಳು – 1/2ಕಪ್, ಬಾಳೆಹಣ್ಣಿನ ಸ್ಲೈಸ್‍ಗಳು – 1/2ಕಪ್, ಕ್ಯಾರೆಟ್ ತುರಿ – 1/2ಕಪ್, ಕತ್ತರಿಸಿದ ದೊಣ್ಣೆಮೆಣಸಿನಕಾಯಿ – 1/4ಕಪ್, ಕತ್ತರಿಸಿದ ಸೌತೆಕಾಯಿಯ ತುಂಡುಗಳು – 1/4ಕಪ್, ಕತ್ತರಿಸಿದ ಟೊಮೆಟೊ  – 1/4ಕಪ್, ಚಾಟ್ ಮಸಾಲೆ – 2ಚಮಚ, ಕಾಳುಮೆಣಸಿನ ಪುಡಿ – 1/2ಚಮಚ, ತುಪ್ಪ – 3ಚಮಚ, ಉಪ್ಪು – ಚಿಟಿಕೆ

ತಯಾರಿಸುವ ವಿಧಾನ: ತರಕಾರಿ ಹಾಗೂ ಹಣ್ಣುಗಳನ್ನು ಬೇರೆಬೇರೆಯಾಗಿ ತುಪ್ಪದಲ್ಲಿ ಹುರಿದು ಸೇರಿಸಿಡಿ. ಈ ಮಿಶ್ರಣಕ್ಕೆ, ಚಾಟ್ ಮಸಾಲೆ, ಉಪ್ಪು, ಕಾಳುಮೆಣಸಿನ ಪುಡಿ ಉದುರಿಸಿದರೆ, ಪೌಷ್ಟಿಕವಾದ ಹಣ್ಣು–ತರಕಾರಿಗಳ ಸಲಾಡ್ ರೆಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT