ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮತಾಂತರ ನಿಲ್ಲಿಸಿ ನರಸಿಂಹರಾಜಪುರ ಉಳಿಸಿ’ ಆಂದೋಲನ

ಎನ್‌.ಆರ್‌.ಪುರದಲ್ಲಿ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್
Last Updated 17 ಸೆಪ್ಟೆಂಬರ್ 2022, 5:35 IST
ಅಕ್ಷರ ಗಾತ್ರ

ನರಸಿಂಹರಾಜಪುರ: ‘ಮುಂದಿನ ತಿಂಗಳು ಎಲ್ಲ ಹಿಂದುತ್ವಪರ ಸಂಘಟನೆ ಗಳ ಸಹಕಾರದಿಂದ ‘ಮತಾಂತರ ನಿಲ್ಲಿಸಿ ನರಸಿಂಹರಾಜಪುರ ಉಳಿಸಿ’ ಆಂದೋಲನ ಹಮ್ಮಿಕೊಳ್ಳಲಾಗುವುದು’ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತಿಳಿಸಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ‘ನರಸಿಂಹರಾಜ ಪುರದಲ್ಲಿ 60ಕ್ಕೂ ಹೆಚ್ಚು ಚರ್ಚ್‌ಗಳು ಇವೆ. ದೇವಸ್ಥಾನಗಳ ಸಂಖ್ಯೆ ಕಡಿಮೆಯಾಗಿದೆ. ವೇಗವಾಗಿ ಚರ್ಚ್‌ಗಳ ಸಂಖ್ಯೆ ಬೆಳೆಯುತ್ತಿದೆ. ಪೆಂಟೋಕಾಸ್ಟ್, ಕಥೋಲಿಕ್, ಪ್ರೋಟೆಸ್ಟಂಟ್ ಎಂಬ ಕ್ರಿಶ್ಚಿಯನ್ ಸಂಘಟನೆಗಳು ಉತ್ತರ ಕರ್ನಾಟಕ, ಬಯಲು ಸೀಮೆ
ಯಿಂದ ಕೂಲಿಗಾಗಿ ಬಂದ ಜನರನ್ನು ಗುರಿಯಾಗಿಸಿ ಮತಾಂತರ ಮಾಡಿಸು ತ್ತಿವೆ ಎಂಬ ಮಾಹಿತಿ ಲಭ್ಯವಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಿಂದುಳಿ ದವರಿಗಾಗಿ ತಂದ ಯೋಜನೆಗಳ ಟೆಂಡರ್ ಪಡೆದು ಕೆಲವು ಚರ್ಚ್‌ಗಳು ಜಾರಿಗೆ ತರುತ್ತಿವೆ’ ಎಂದರು.

‘ಎಲ್ಲಾ ಹಿಂದುತ್ವಪರ ಸಂಘಟನೆಗಳ ಪರಿಶ್ರಮದಿಂದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದ್ದರೂ ಈ ಸರ್ಕಾರದಿಂದ ಬಜರಂಗದಳ, ಶ್ರೀರಾಮಸೇನೆ, ವಿಶ್ವಹಿಂದೂ ಪರಿಷತ್‌ಗೆ ನಿರೀಕ್ಷಿತ ಬೆಂಬಲ ಸಿಕ್ಕಿಲ್ಲ. ರೌಡಿ ಶೀಟ್, ಗೂಂಡಾ ಕಾಯ್ದೆಯ ಮೊಕದ್ದಮೆ ಹಿಂಪಡೆದಿಲ್ಲ. ಹಿಂದೂಗಳ ಮೇಲೆ ದೌರ್ಜನ್ಯವಾದರೆ ಮೊದಲು ಧ್ವನಿ ಎತ್ತುವುದು ಶ್ರೀರಾಮ ಸೇನೆ. ಹಿಂದೂಗಳ ಯಾವುದೇ ಸಂಘಟನೆಗೆ ಬೆದರಿಕೆ ಹಾಕಿದರೂ ಹೆದರಬೇಕಾಗಿಲ್ಲ. ಜೈಲಿಗೆ ಹಾಕಿದರೂ ಭಯ ಪಡಬೇಡಿ. ನಿಮ್ಮನ್ನು ನಾವು ಜೈಲಿನಿಂದ ಬಿಡಿಸುತ್ತೇವೆ, ಹಿಂದೇಟು ಹಾಕದೆ ಹಿಂದೂಗಳ ಸಂಘಟನೆಗಾಗಿ ಮುನ್ನುಗ್ಗಬೇಕು’ ಎಂದರು.

ಬಿಜೆಪಿಯನ್ನು ನಾವು ತಿದ್ದುತ್ತೇವೆ. ಹಿಂದೂ ಸಂಘಟನೆಗಳ ಸಮಸ್ಯೆಗೆ ಬಿಜೆಪಿ ಸ್ಪಂದಿಸುವಂತೆ ಮಾಡುತ್ತೇವೆ. ಬಿಜೆಪಿ ಸರ್ಕಾರವನ್ನು ಹತೋಟಿಗೆ ತರುತ್ತೇವೆ. ಶ್ರೀರಾಮ ಸೇನೆ ಹಿಂದೂಗಳ ಸಂಘಟನೆಗಾಗಿ ಜನ್ಮ ತಾಳಿದೆ. ಯಾವುದೇ ಸಂದರ್ಭದಲ್ಲೂ ನೇರವಾಗಿ ಚುನಾವಣೆಗೆ ಸ್ಪರ್ಧಿಸುವ ಬಯಕೆ ಹೊಂದಿಲ್ಲ ಎಂದರು.

ಶ್ರೀರಾಮ ಸೇನೆಯ ವಿಭಾಗೀಯ ಪ್ರಮುಖ ವರಗಲ್ ಸುಂದರೇಶ್, ತಾಲ್ಲೂಕು ಶ್ರೀರಾಮ ಸೇನೆಯ ಮುಖಂಡ ಅಕ್ಷತ್, ಬಿಜೆಪಿ ಮುಖಂಡ ರಾದ ಎಚ್.ಎಂ.ಅರುಣ್ ಕುಮಾರ್, ಎಚ್.ಡಿ.ಲೋಕೇಶ್, ಬಿ.ಎಸ್.ಆಶೀಶ್ ಕುಮಾರ್, ಎಂ.ಎನ್.ನಾಗೇಶ್, ಅಶ್ವನ್, ಎ.ಬಿ.ಮಂಜುನಾಥ್, ಬಿ.ಎಸ್.ಆಶೀಶ್ ಕುಮಾರ್, ಮಂಜುನಾಥ್, ಸಚ್ಚಿನ್, ಮುರಳಿ, ಅರುಣ್ ಕುಮಾರ್ ಜೈನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT