ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಯೋಧ್ಯೆ ತೀರ್ಪು ಸ್ವಾಗತಾರ್ಹ. ಆದರೆ, ಜಾಗ ನೀಡಿದ್ದು ತಪ್ಪು: ಮುತಾಲಿಕ್‌

Last Updated 10 ನವೆಂಬರ್ 2019, 20:43 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ಅಯೋಧ್ಯೆ ತೀರ್ಪು ಸ್ವಾಗತಾರ್ಹ. ಆದರೆ, ಸುನ್ನಿ ವಕ್ಫ್‌ ಮಂಡಳಿಗೆ ಐದು ಎಕರೆ ಜಾಗ ನೀಡಬೇಕೆಂದು ಸೂಚಿಸಿರುವುದು ಸರಿಯಲ್ಲ’ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌ ಇಲ್ಲಿ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಅವರಿಗೆ ಜಾಗ ಕೊಟ್ಟಿದ್ದು ಸರಿ ಎನಿಸುತ್ತಿಲ್ಲ. ಇದರಿಂದ ಅವರ ಹೋರಾಟವನ್ನೂ ಒಪ್ಪಿದಂತಾಯಿತು’ ಎಂದರು.

‘ಮಂದಿರ ನಿರ್ಮಾಣಕ್ಕೆ ಕೇಂದ್ರ ಸರ್ಕಾರವು ಕೂಡಲೇ ಅವಕಾಶ ಮಾಡಿಕೊಡಬೇಕು. ಮಂದಿರ ರಚನೆ ಟ್ರಸ್ಟ್‌ಗೆ ಎಲ್‌.ಕೆ.ಅಡ್ವಾಣಿ ಅವರನ್ನು ತೆಗೆದುಕೊಳ್ಳುವುದರಲ್ಲಿ ಅರ್ಥವಿಲ್ಲ, ಅವರಿಗೆ ವಯಸ್ಸೂ ಆಗಿದೆ. ಅವರನ್ನು ಮಾರ್ಗದರ್ಶಕರಾಗಿ ಮಾತ್ರ ಪರಿಗಣಿಸಬಹುದು. ವಿಶ್ವ ಹಿಂದೂ ಪರಿಷತ್ತಿನ ಹೋರಾಟಗಾರರಿಗೆ ಆದ್ಯತೆ ನೀಡಬೇಕು’ ಎಂದು ಒತ್ತಾಯಿಸಿದರು.

‘ಶ್ರೀ ಗುರುದತ್ತಾತ್ರೇಯ ಬಾಬಾಬುಡನ್‌ಸ್ವಾಮಿ ದರ್ಗಾ ವಿವಾದ ಪರಿಹಾರ ನಿಟ್ಟಿನಲ್ಲಿ ಧ್ವನಿ ಎತ್ತುವಂತೆ ಎಲ್ಲ ಶಾಸಕರನ್ನು ಕೋರಲು ನಿರ್ಧರಿಸಲಾಗಿದೆ. ದತ್ತ ಜಯಂತಿಯಂದು ಎಲ್ಲ ಶಾಸಕರಿಗೆ ಈ ನಿಟ್ಟಿನಲ್ಲಿ ಮನವಿ ನೀಡುತ್ತೇವೆ’ ಎಂದು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT