ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೋದ್ಯೋಗ- ಪುನಶ್ಚೇತನವಾಗಲಿ

ಕಡೂರಿನಲ್ಲಿ ಬೀದಿನಾಟಕ ಪ್ರದರ್ಶನ: ಹಿರಿಯ ರಂಗಕರ್ಮಿ ಪ್ರಸನ್ನ
Last Updated 8 ನವೆಂಬರ್ 2020, 6:18 IST
ಅಕ್ಷರ ಗಾತ್ರ

ಕಡೂರು: ‘ಗ್ರಾಮೋದ್ಯೋಗ ಮತ್ತು ಸಣ್ಣ ಕೈಗಾರಿಕೆಗಳ ಪುನರುತ್ಥಾನವಾಗದಿದ್ದರೆ ದೇಶದ ಆರ್ಥಿಕ ಪುನಶ್ಚೇತನ ಸಾಧ್ಯವಿಲ್ಲ’ ಎಂದು ಹಿರಿಯ ರಂಗಕರ್ಮಿ ಪ್ರಸನ್ನ ಅಭಿಪ್ರಾಯಪಟ್ಟರು.

ಕಡೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೋವಿಡ್ ಮತ್ತಿತರ ಕಾರಣದಿಂದ ದೇಶದ ಆರ್ಥಿಕ ಪರಿಸ್ಥಿತಿ ಬಹುತೇಕ ಹದಗೆಟ್ಟಿದೆ. ಇದರಿಂದ ತೀವ್ರ ತೊಂದರೆಗೊಳಗಾಗಿರುವುದು ಮಧ್ಯಮ ವರ್ಗದ ಜನತೆ ಮತ್ತು ಗ್ರಾಮೀಣ ರೈತಾಪಿ ವರ್ಗದವರು. ಸಾಂಪ್ರದಾಯಿಕ ಗುಡಿ ಕೈಗಾರಿಕೆಗಳು ಮತ್ತು ಸಣ್ಣ ಉದ್ಯಮಗಳು ಬಹಳಷ್ಟು ನಷ್ಟ ಅನುಭವಿಸಿವೆ. ಅವುಗಳ ಪುನಶ್ಚೇತನಕ್ಕೆ ಚಿಂತನೆ ನಡೆಯಬೇಕಿದೆ’ ಎಂದರು.

‘ಸಣ್ಣ ಕೈಗಾರಿಕೆಗಳು ಮತ್ತು ಸಣ್ಣ ಉದ್ಯಮಗಳು ಸ್ಥಳೀಯ ಸಂಪ ನ್ಮೂಲಗಳನ್ನು ಬಯಸುತ್ತದೆ. ಅದರಲ್ಲಿ ಉತ್ಪಾದನಾ ವೆಚ್ಚ ಕಡಿಮೆ ಇರುತ್ತದೆ. ಶೇ 70ರಷ್ಟು ಜನರಿಗೆ ಉದ್ಯೋಗ ನೀಡಬಹುದಾಗಿದೆ. ಗ್ರಾಮೀಣ ಭಾಗ ಗಳಲ್ಲಿ ಗುಡಿ ಕೈಗಾರಿಕೆಗಳು ಮೇಲ್ದರ್ಜೆ ಗೇರಿದರೆ ದೇಶದ ಆರ್ಥಿಕ ಪರಿಸ್ಥಿತಿ ಎತ್ತರಿಸಿಕೊಳ್ಳಲು ಗಣನೀಯ ಪ್ರಮಾ ಣದ ಕೊಡುಗೆ ಸಲ್ಲಿಸಬಹುದಾಗಿದೆ. ಇದರ ಬಗ್ಗೆ ಪ್ರತಿಯೊಬ್ಬರಲ್ಲೂ ಆಸಕ್ತಿ ಮತ್ತು ಅರಿವು ಮೂಡಬೇಕು’ ಎಂದರು.

‘ಗಾಂಧೀಜಿಯವರ ತತ್ವಗಳು ಇಂದಿಗೂ ಪ್ರಸ್ತುತವಾಗಿವೆ. ಪಟ್ಟಣದ ಯುವಕರು ಗ್ರಾಮೀಣ ಬದುಕನ್ನು ಅರ್ಥ ಮಾಡಿಕೊಳ್ಳಬೇಕು. ಹಳ್ಳಿಗಳ ಪರಿಸ್ಥಿತಿಯ ಬಗ್ಗೆ ಕನಿಷ್ಠ ಜ್ಞಾನ ಇರಬೇಕು. ಆಗ ನಮ್ಮ ದೇಶದ ಪ್ರಸ್ತುತ ಪರಿಸ್ಥಿತಿ ಹೇಗಿರುತ್ತದೆ ಎಂಬ ಬಗ್ಗೆ ಜ್ಞಾನ ಇರುತ್ತದೆ ಎಂಬುದು ಗಾಂಧೀಜಿಯವರ ಸ್ಪಷ್ಟ ಅಭಿಪ್ರಾಯವಾಗಿತ್ತು. ಇತ್ತೀಚೆಗೆ ಅವರ ಅಭಿಪ್ರಾಯಕ್ಕೆ ಮನ್ನಣೆ ದೊರೆಯುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ’ ಎಂದರು.

ಗಮನ ಸೆಳೆದ ನಾಟಕ

ಕಡೂರು: ಕೋವಿಡ್ ಬಗ್ಗೆ ಅರಿವು ಮೂಡಿಸಲು ಶನಿವಾರ ಕಡೂರಿನ ಪ್ರಥಮ ದರ್ಜೆ ಕಾಲೇಜು ಮುಂಭಾಗ ಬೀದಿನಾಟಕ ಪ್ರದರ್ಶನ ಏರ್ಪಡಿಸಿತ್ತು.

ಹಿರಿಯ ರಂಗಕರ್ಮಿ ಪ್ರಸನ್ನ ಮಾರ್ಗದರ್ಶನದಲ್ಲಿ ಕಲಾವಿದರು ‘ಒಳಿತು ಮಾಡು ಮನುಸಾ’ ಎಂಬ ನಾಟಕ ಪ್ರದರ್ಶಿಸಿದರು. ಕೊರೊನಾ ಸಮಯದಲ್ಲಿ ಜನರಿಗಾದ ತೊಂದರೆ ಗಳು, ಲಾಕ್‌ಡೌನ್ ಸಮಯದಲ್ಲಿ ಬಡ ಮಧ್ಯಮ ವರ್ಗದ ಜನರ ಬವಣೆ ಮತ್ತು ನಂತರದ ತಲ್ಲಣಗಳು ಮುಂತಾದ ಕಥಾ ವಸ್ತುವನ್ನಿಟ್ಟುಕೊಂಡು ರಚಿತವಾದ ನಾಟಕ ಜನರ ಗಮನ ಸೆಳೆಯಿತು.

ರಂಗಕಲಾವಿದ ಮಾಲತೇಶ್ ನಿರ್ದೇಶನ ನೀಡಿದ ಈ ನಾಟಕ ಪ್ರದ ರ್ಶನ ನೀಡಿದ್ದು, ಬೆಂಗಳೂರಿನಲ್ಲಿರುವ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಮತ್ತು ಉನ್ನತ ಉದ್ಯೋಗದಲ್ಲಿರುವವರು ಎಂಬುದು ವಿಶೇಷ. ಕಾಲೇಜು ಪ್ರಾಚಾರ್ಯ ಶ್ರೀಧರ ಬಾಬು, ಕನ್ನಡ ವಿಭಾಗದ ಮುಖ್ಯಸ್ಥ ಡಾ.ದೊರೇಶ್, ಅಜ್ಜಂಪುರ ಪ್ರತಿಷ್ಠಾನದ ಅಧ್ಯಕ್ಷ ಸೂರಿ ಶ್ರೀನಿವಾಸ್ ಇದ್ದರು.

ಹೆಗ್ಗೋಡಿನವರೆಗೆ ಜಾಥಾ: ‘ಬೆಂಗಳೂರಿ ನಿಂದ ಹೆಗ್ಗೋಡಿನವರೆಗೆ ಈ ಜಾಥಾ ನಡೆಯುತ್ತಿದ್ದು, ಈ ಹಾದಿಯಲ್ಲಿ ಇರುವ ಪ್ರಮುಖ ನಗರಗಳಲ್ಲಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಮತ್ತು ಗುಡಿ ಕೈಗಾರಿಕೆ ಉಳಿಸುವ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಬೀದಿ ನಾಟಕ ಪ್ರದರ್ಶನ ಮಾಡಲಾಗುತ್ತಿದೆ’ ಎಂದು ರಂಗಕರ್ಮಿ ಪ್ರಸನ್ನ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT