ಆಲ್ದೂರು: ಸಮೀಪದ ಮಾಚಗೊಂಡನಹಳ್ಳಿ ಬೇರುಗಂಡಿ ಬೃಹನ್ಮಠದ ನಾಗಶ್ರೀ ಸಭಾ ಮಂಟಪದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಶ್ರೀ ರೇಣುಕಾ ಜಯಂತಿ, ಬಸವೇಶ್ವರ ಜಯಂತಿ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿದ ಪೀಠಾಧ್ಯಕ್ಷ ರೇಣುಕಾ ಮಹಾಂತ ಶಿವಾಚಾರ್ಯ ಸ್ವಾಮೀಜಿ, ರೇಣುಕಾ ಮತ್ತು ಜಗಜ್ಯೋತಿ ಬಸವೇಶ್ವರರು ವೀರಶೈವ ಲಿಂಗಾಯತ ಸಮಾಜದ ಎರಡು ನಯನಗಳಿದ್ದಂತೆ. ವಿದ್ಯಾರ್ಥಿಗಳು ವಿಧಿಯೊಂದಿಗೆ ಸಂಸ್ಕಾರ, ಸದ್ವಿಚಾರ ಧರ್ಮ ಮತ್ತು ಸತ್ಯದ ಮಾರ್ಗವನ್ನು ಅಳವಡಿಸಿಕೊಂಡಾಗ ಮಾತ್ರ ಯಶಸ್ಸು ಪ್ರಾಪ್ತಿಯಾಗುತ್ತದೆ ಎಂದರು.

ವೈದ್ಯ ಮೋಹನ್ ರಾಜಣ್ಣ ಮಾತನಾಡಿ, ಮಾನವನ ಜನ್ಮ ಶ್ರೇಷ್ಠವಾದದ್ದು. ಕಾಯಕವನ್ನು ನಿಷ್ಠೆಯಿಂದ ಕಾನೂನು ಚೌಕಟ್ಟಿನೊಳಗೆ ನಿರ್ವಹಿಸಿದಾಗ ನಾವು ಇತರರಿಗೆ ಮಾದರಿಯಾಗುತ್ತೇವೆ ಎಂದರು.

ಕೆ.ಸಿ. ನಿಶಾಂತ್ ಅಖಂಡ ವೀರಶೈವ ಲಿಂಗಾಯತ ಸಮಾಜ ಒಗ್ಗಟ್ಟಾಗಿ ಶ್ರಮಿಸಿದಾಗ ಸಮುದಾಯವು ಸಾಮಾಜಿಕ, ಆರ್ಥಿಕವಾಗಿ ಅಭಿವೃದ್ಧಿ ಹೊಂದಬಹುದು ಎಂದರು.

ಆಲ್ದೂರು ಹೋಬಳಿ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಕೆ.ಎಸ್. ಮಹೇಶ್ ಅಧ್ಯಕ್ಷತೆ ವಹಿಸಿದ್ದರು.

ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಸೈನಿಕರಿಗಾಗಿ ಮತ್ತು ಪ್ರಸ್ತುತ ಸೇವೆಯಲ್ಲಿರುವ ಯೋಧರ ಕುಟುಂಬಗಳ ಶ್ರೇಯೋಭಿವೃದ್ಧಿಗಾಗಿ ಸಿದ್ದೇಶ್ವರ ಸ್ವಾಮಿ ಸಂಕಲ್ಪ ರುದ್ರಾಭಿಷೇಕ ವಿಶೇಷ ಪೂಜೆ ನೆರವೇರಿಸಲಾಯಿತು. ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕ ಮೋಹನ್, ರಾಜಣ್ಣ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲ್ಲೂಕು ಅಧ್ಯಕ್ಷ ದೇವಾನಂದನ್, ಯಲಗುಡಿಗೆ ಹರೀಶ್, ಪುಷ್ಪಗಿರಿ ರಾಜೀವ್, ಪತ್ರಕರ್ತರಾದ ವಿ ಜೆ ರಾಜೇಶ್, ತನುಜ ರಾಜೇಶ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.