ದ್ವಿತೀಯ ಪಿಯು ಫಲಿತಾಂಶ: ಚಿಕ್ಕಮಗಳೂರು ಜಿಲ್ಲೆಗೆ 5ನೇ ಸ್ಥಾನ

ಶುಕ್ರವಾರ, ಏಪ್ರಿಲ್ 26, 2019
24 °C

ದ್ವಿತೀಯ ಪಿಯು ಫಲಿತಾಂಶ: ಚಿಕ್ಕಮಗಳೂರು ಜಿಲ್ಲೆಗೆ 5ನೇ ಸ್ಥಾನ

Published:
Updated:

ಚಿಕ್ಕಮಗಳೂರು: ದ್ವಿತೀಯ ಪಿಯು ಫಲಿತಾಂಶವು ಸೋಮವಾರ ಪ್ರಕಟವಾಗಿದ್ದು, ಜಿಲ್ಲೆಯು ರಾಜ್ಯದಲ್ಲಿ ಈ ಬಾರಿ ಶೇ 76.42 ಫಲಿತಾಂಶದೊಂದಿಗೆ ಐದನೇ ಸ್ಥಾನ ಪಡೆದುಕೊಂಡಿದೆ. ಕಳೆದ ಬಾರಿ ಶೇ 74.39 ಫಲಿತಾಂಶ ದಾಖಲಿಸಿ 7ನೇ ಸ್ಥಾನ ಗಳಿಸಿತ್ತು. ಈ ಬಾರಿ ಎರಡು ಸ್ಥಾನ ಏರಿಕೆ ಕಂಡಿದೆ.

ಜಿಲ್ಲೆಯಲ್ಲಿ ಪರೀಕ್ಷೆ ಬರೆದಿದ್ದ ಹೊಸಬರು 8,154ಮಂದಿ ಪೈಕಿ 6,231 ಮಂದಿ, 895 ಪುನರಾವರ್ತಿತರ ಪೈಕಿ 294 ಹಾಗೂ 483 ಖಾಸಗಿ ವಿದ್ಯಾರ್ಥಿಗಳ ಪೈಕಿ183 ಮಂದಿ ತೇರ್ಗಡೆಯಾಗಿದ್ದಾರೆ.

5,046 ವಿದ್ಯಾರ್ಥಿನಿಯರ ಪೈಕಿ 3796 (ಶೇ 75.23) ಹಾಗೂ 4,486 ಬಾಲಕರ ಪೈಕಿ 2,912 (ಶೇ 64.91) ಮಂದಿ ಉತ್ತೀರ್ಣರಾಗಿದ್ದಾರೆ. ಈ ಬಾರಿಯೂ ವಿದ್ಯಾರ್ಥಿನಿಯರು ಮೇಲುಗೈ ಸಾಧಿಸಿದ್ದಾರೆ.

ಆಂಗ್ಲ ಮಾದ್ಯಮದ 4,861 ವಿದ್ಯಾರ್ಥಿಗಳಲ್ಲಿ 3,594(ಶೇ 73.94), ಕನ್ನಡ ಮಾದ್ಯಮದ 4671ವಿದ್ಯಾರ್ಥಿಗಳಲ್ಲಿ 3,114 (ಶೇ 66.67) ಮಂದಿ, ನಗರ ಪ್ರದೇಶದ 6,201 ವಿದ್ಯಾರ್ಥಿಗಳಲ್ಲಿ 4,695(ಶೇ75.7), ಗ್ರಾಮೀಣ ಪ್ರದೇಶದ 1,953 ವಿದ್ಯಾರ್ಥಿಗಳ ಪೈಕಿ 1,536(ಶೇ 78.65) ಮಂದಿ ಪಾಸಾಗಿದ್ದಾರೆ.

ಕಲಾ ವಿಭಾಗದ 2,645 ವಿದ್ಯಾರ್ಥಿಗಳಲ್ಲಿ 1,961 (ಶೇ 74.14), ವಾಣಿಜ್ಯ ವಿಭಾಗದ 3,260 ವಿದ್ಯಾರ್ಥಿಗಳ ಪೈಕಿ 2,550 (ಶೇ 78.22) ಹಾಗೂ ವಿಜ್ಞಾನ ವಿಭಾಗದಲ್ಲಿ 22.490 ವಿದ್ಯಾರ್ಥಿಗಳಲ್ಲಿ 1,720 (ಶೇ 76.48) ಮಂದಿ ಉತ್ತೀರ್ಣರಾಗಿದ್ದಾರೆ.

ಎಸ್.ಸ್ನೇಹಶ್ರೀ, ಅನುಶಾ ಎಸ್ ರಾವ್‌ಗೆ 583 ಅಂಕ
ನಗರದ ಸಾಯಿ ಏಂಜಲ್ಸ್ ಕಾಲೇಜಿನ ಎಸ್.ಸ್ನೇಹಶ್ರೀ ಮತ್ತು ಅನುಶಾ ಎಸ್ ರಾವ್ ಅವರು 583(ಶೇ 97.17) ಅಂಕ ಗಳಿಸಿ ಸಾಧನೆ ತೋರಿದ್ದಾರೆ.

ಎಸ್.ಸ್ನೇಹಶ್ರೀ ಅವರು ರಸಾಯನಶಾಸ್ತ್ರದಲ್ಲಿ 100, ಗಣಿತ 100, ಜೀವಶಾಸ್ತ್ರ 99, ಕನ್ನಡ 98, ಭೌತಶಾಸ್ತ್ರ 98, ಇಂಗ್ಲೀಷ್88ಅಂಕ ಗಳಿಸಿದ್ದಾರೆ. ಅನುಶಾ ಎಸ್ ರಾವ್ ಅವರು ಜೀವಶಾಸ್ತ್ರದಲ್ಲಿ 100, ಗಣಿತ 99, ರಸಾಯನಶಾಸ್ತ್ರ 98, ಭೌತಶಾಸ್ತ್ರ 97, ಕನ್ನಡ 95, ಇಂಗ್ಲೀಷ್94 ಅಂಕಗಳನ್ನು ಪಡೆದಿದ್ದಾರೆ.

ಸ್ನೇಹಶ್ರೀ ಅವರು ಆರ್.ಸತೀಶ್ ಮತ್ತು ಅರುಣಾಕುಮಾರಿ ದಂಪತಿ ಪುತ್ರಿಯಾಗಿದ್ದಾರೆ. ಅನುಶಾ ಎಸ್ ರಾವ್ ಅವರು ಎಂ.ಕೆ.ಶ್ರೀನಿವಾಸ್‌ರಾವ್ ಮತ್ತು ಬಿ.ಎಸ್.ಹೇಮಾ ಅವರ ಪುತ್ರಿಯಾಗಿದ್ದಾರೆ.

ಕಾಲೇಜಿನ 263 ವಿದ್ಯಾರ್ಥಿಗಳು ಪರೀಕ್ಷೆಗೆ ಎದುರಿಸಿದ್ದು, 118 ಮಂದಿ ಅತ್ಯುನ್ನತ ಶ್ರೇಣಿ, 141 ಪ್ರಥಮ ಶ್ರೇಣಿ, 2 ಮಂದಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಸೆಂಟ್ ಮೇರೀಸ್ ಕಾಲೇಜಿನ ಎಸ್.ಸಿ.ಕವನಗೆ 570 ಅಂಕ
ಸೆಂಟ್ ಮೇರೀಸ್ ಕಾಲೇಜಿನ ವಿದ್ಯಾರ್ಥಿನಿ ಎಸ್.ಸಿ.ಕವನ ಅವರು ವಿಜ್ಞಾನ ವಿಭಾಗದಲ್ಲಿ 570(ಶೇ 95) ಅಂಕ ಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ರಸಾಯನಶಾಸ್ತ್ರದಲ್ಲಿ 97, ಭೌತಶಾಸ್ತ್ರದಲ್ಲಿ 99, ಗಣಿತ 99, ಜೀವಶಾಸ್ತ್ರ 93, ಕನ್ನಡ 90, ಇಂಗ್ಲೀಷ್‌ನಲ್ಲಿ 92 ಅಂಕ ಪಡೆದಿದ್ದಾರೆ. ಎಂ.ಪೂಜಾ ಅವರು ಕನ್ನಡ ವಿಷಯದಲ್ಲಿ 100 ಅಂಕ ಗಳಿಸಿದ್ದಾರೆ.

ಕಾಲೇಜಿನ 59 ವಿದ್ಯಾರ್ಥಿಗಳ ಪೈಕಿ, 16 ಮಂದಿ ಅತ್ಯುನ್ನತ ಶ್ರೇಣಿ, 40 ಮಂದಿ ಪ್ರಥಮ, ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ ಎಂದು ಕಾಲೇಜಿನ ಸಂಸ್ಥಾಪಕ ಗ್ರೆಗರಿ ಲೋಬೊ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಸವನಹಳ್ಳಿ ಬಾಲಕಿಯರ ಕಾಲೇಜಿಗೆ ಶೇ84.30 ಫಲಿತಾಂಶ
ನಗರದ ಬಸವನಹಳ್ಳಿ ಬಾಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ 191 ವಿದ್ಯಾರ್ಥಿಗಳ ಪೈಕಿ, 161 ಮಂದಿ ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗದಲ್ಲಿ ಕೆ.ರಕ್ಷಿತಾ ಅವರು 564(ಶೇ 94) ಅಂಕ ಪಡೆದಿದ್ದಾರೆ.

ಬಿಜಿಎಸ್ ಕಾಲೇಜಿಗೆ ಶೇ 92 ಫಲಿತಾಂಶ
ನಗರದ ಬಿಜಿಎಸ್ ಪದವಿ ಪೂರ್ವ ಕಾಲೇಜಿನ 142 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅದರಲ್ಲಿ 130 ಮಂದಿ ತೇರ್ಗಡೆಯಾಗಿದ್ದಾರೆ. ಈ ಪೈಕಿ ಅತ್ಯುನ್ನತ ಶ್ರೇಣಿಯಲ್ಲಿ 16, ಪ್ರಥಮ ದರ್ಜೆಯಲ್ಲಿ 96, ದ್ವಿತೀಯ ದರ್ಜೆ 14, ತೃತೀಯ ದರ್ಜೆಯಲ್ಲಿ 4 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಬಿ.ರುಖಯ್ಯಾ 561, ಎಚ್.ಎಲ್.ಲೋಹಿತ್ 553, ವಾಣಿಜ್ಯ ವಿಭಾಗದಲ್ಲಿ ಎನ್.ಎಚ್.ಯಶವಂತ್‌ಕುಮಾರ್ 544 ಅಂಕ ಗಳಿಸಿದ್ದಾರೆ ಎಂದು ಪ್ರಾಚಾರ್ಯ ಜೆ.ಜಿ.ಸುರೇಂದ್ರ ತಿಳಿಸಿದ್ದಾರೆ.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !