ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರೀಕೆರೆ: ಪುನೀತ್ ಪ್ರತಿಮೆಅನಾವರಣಗೊಳಿಸಿದ ಅಶ್ವಿನಿ

ನಾಗರಿಕ ವೇದಿಕೆಯಿಂದ ಆಯೋಜನೆ
Last Updated 28 ನವೆಂಬರ್ 2022, 6:50 IST
ಅಕ್ಷರ ಗಾತ್ರ

ತರೀಕೆರೆ: ಪುನೀತ್ ಆದರ್ಶಗಳನ್ನು ಇಂದಿನ ಯುವಕರು ಅನುಸರಿಸಬೇಕು ಎಂದು ಮಾಜಿ ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.

ಅವರು ಪಟ್ಟಣದ ರಂಗಮಂದಿರದಲ್ಲಿ ನಾಗರಿಕ ವೇದಿಕೆ ಆಯೋಜಿಸಿದ್ದ ಪುನೀತ್ ರಾಜ್‌ಕುಮಾರ್ ಪುತ್ಥಳಿ ಅನಾವರಣ ಹಾಗೂ ಅಪ್ಪು ನೆನಪಿನಂಗಳ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪುನೀತ್ ಸಮಾಜಮುಖಿ ಕಾರ್ಯಗಳನ್ನ ಮಾಡಿದ್ದಾರೆ. ಅವರು ಸರಳ ಜೀವನ, ಸಜ್ಜನಿಕೆ ವ್ಯಕ್ತಿತ್ವವನ್ನು ನಾವೆಲ್ಲರೂ ಅನುಸರಿಸಬೇಕು.
ಪುರಸಭೆಯ ಮಾಜಿ ಅಧ್ಯಕ್ಷ ಎಂ. ನರೇಂದ್ರ ಮಾತನಾಡಿ, ‘ಪುನೀತ್ ಅವರು ಬುದ್ಧನ ಕಾರುಣ್ಯ, ಬಸವ, ಅಂಬೇಡ್ಕರ್ ಅವರ ಚಿಂತನೆಗಳನ್ನು ಅಳವಡಿಸಿಕೊಂಡು ಸಮಾಜದಲ್ಲಿ ಹಲವಾರು ಜನಪರ ಕಾರ್ಯಗಳನ್ನು ಮಾಡಿದ್ದಾರೆ’ ಎಂದರು.

ಪುರಸಭೆಯ ಮಾಜಿ ಅಧ್ಯಕ್ಷ ವರ್ಮ ಪ್ರಕಾಶ್, ಟಿ.ಎಸ್.ಧರ್ಮರಾಜ್, ಗೋಪಿಕುಮಾರ್, ದೋರನಾಳ ಪರಮೇಶ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಧ್ರುವಕುಮಾರ್, ಪುರಸಭೆಯ ಉಪಾಧ್ಯಕ್ಷೆ ರಿಹಾನ ಫರ್ವೀನ್, ಪುರಸಭೆಯ ಸದಸ್ಯರಾದ ಪವಿತ್ರ, ಲೋಕೇಶ್, ಪರಮೇಶ್, ಹಳಿಯೂರು ಕುಮಾರ್, ಆರುಂಧುತಿ ಹೆಗಡೆ, ಗಿರಿಜಾ ವರ್ಮಪ್ರಕಾಶ, ಯಶೋದಮ್ಮ, ರೋಟರಿ ಸದಸ್ಯೆ ವಾಣಿಶ್ರೀ, ಸರ್ಪರಾಜ್, ಬಿಜೆಪಿ ಯುವ ಮುಖಂಡರಾದ ಸಂಕೇತ, ದೋರನಾಳು ಶಿವು, ಶ್ರೇಯಸ್, ಜಯಕರ್ನಾಟಕ ಜಗದೀಶ್, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನವೀನ್ ಪೆನ್ನಯ್ಯ ಇಮ್ರಾನ್ ಅಹಮದ್ ಬೇಗ್, ಕೆಪಿಸಿಸಿ ಸದಸ್ಯ ವಿಶ್ವನಾಥ, ಮಿಲ್ಟ್ರಿ ಶ್ರೀನಿವಾಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT