ಕೆಂಪೇಗೌಡ ಪ್ರಾಧಿಕಾರ ರಚನೆ: ಆರ್‌.ವಿ.ದೇಶಪಾಂಡೆ

7

ಕೆಂಪೇಗೌಡ ಪ್ರಾಧಿಕಾರ ರಚನೆ: ಆರ್‌.ವಿ.ದೇಶಪಾಂಡೆ

Published:
Updated:
ಆರ್‌.ವಿ.ದೇಶಪಾಂಡೆ

ಚಿಕ್ಕಮಗಳೂರು: ನಾಡಪ್ರಭು ಕೆಂಪೇಗೌಡ ಪ್ರಾಧಿಕಾರ ರಚನೆ ಮಾಡಿ ಜೂನ್‌ 26ರಂದು ಆದೇಶ ಹೊರಡಿಸಲಾಗಿದೆ ಎಂದು ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪ್ರಾಧಿಕಾರ ರಚಿಸಲು ಹಿಂದಿನ ಸರ್ಕಾರ ನಿರ್ಣಯ ಕೈಗೊಂಡಿತ್ತು. ಈಗ ರಚನೆ ಮಾಡಲಾಗಿದೆ. ಕೆಂಪೇಗೌಡ ಜಯ್ಯಂತ್ಯುತ್ಸವ ಆಚರಣೆಗೆ 2017ರಲ್ಲಿ ಕ್ರಮ ವಹಿಸಲಾಗಿತ್ತು’ ಎಂದು ತಿಳಿಸಿದರು.

‘ಬೆಂಗಳೂರಿನ ಅಭಿವೃದ್ಧಿಗಾಗಿ ಕೆಂಪೇಗೌಡ ಅವರು ಮಾಡಿದ ಕೆಲಸಗಳನ್ನು ಸ್ಮರಿಸುವುದು ಆದ್ಯ ಕರ್ತವ್ಯ. ಅವರ ಇತಿಹಾಸ ಪರಿಚಯ, ಪರಂಪರೆ ರಕ್ಷಣೆಯಂಥ ಕಾರ್ಯಕ್ರಮಗಳನ್ನು ಪ್ರಾಧಿಕಾರ ನಿರ್ವಹಿಸಲಿದೆ’ ಎಂದರು.

‘ಸರ್ಕಾರ ‘ಟೇಕ್‌ ಆಫ್‌’ ಆಗಿಲ್ಲ ಎಂಬ ಹೇಳಿಕೆಯಲ್ಲಿ ಹುರುಳಿಲ್ಲ. ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿಯ ಸಮ್ಮಿಶ್ರ ಸರ್ಕಾರ ಸದೃಢವಾಗಿದ್ದು, ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸುತ್ತಿದೆ. ಐದು ವರ್ಷ ಪೂರ್ಣಗೊಳಿಸಲಿದೆ’ ಎಂದು ಪ್ರತಿಕ್ರಿಯಿಸಿದರು.

‘ಬಜೆಟ್‌ ಮಂಡಿಸುವುದಾಗಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ದಿನವನ್ನೂ ನಿಗದಿಪಡಿಸಿದ್ದಾರೆ. ಸಿದ್ದರಾಮಯ್ಯ ಮಂಡಿಸಿದ್ದ ಬಜೆಟ್‌ನಲ್ಲಿನ ಯಾವುದೇ ಕಾರ್ಯಕ್ರಮಗಳನ್ನು ಬದಲಿಸುವುದಿಲ್ಲ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದ್ದಾರೆ. ಬಜೆಟ್‌ಗೆ ಹೊಸ ಅಂಶಗಳನ್ನು ಸೇರಿಸಲು ಸಾಮಾನ್ಯ ಕನಿಷ್ಠ ಕಾರ್ಯಕ್ರಮ (ಸಿಎಂಪಿ) ಸಿದ್ಧಪಡಿಸಲು ಸಮಿತಿ ನೇಮಿಸಲಾಗಿದೆ. ಸಮಿತಿಯು ಇದೇ 29ರಂದು ಮೂರನೇ ಸುತ್ತಿನ ಸಭೆ ನಡೆಸಿ ಅಂತಿಮಗೊಳಿಸಲಿದೆ’ ಎಂದು ಉತ್ತರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !