ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಘವೇಂದ್ರ ಔರಾದ್ಕರ್‌ ವರದಿ ಪರಿಶೀಲನೆ’

Last Updated 23 ಜೂನ್ 2022, 4:24 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ಪೊಲೀಸ್‌ ವ್ಯವಸ್ಥೆ ಸುಧಾರಣೆ ನಿಟ್ಟಿನಲ್ಲಿ ರಾಘವೇಂದ್ರ ಔರಾದ್ಕರ್‌ ಸಮಿತಿ ನೀಡಿರುವ ವರದಿ ಪರಿಶೀಲನೆ ಮಾಡುತ್ತೇವೆ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ‘ವರದಿಯಿಂದ ಶೇ 20 ರಷ್ಟು ಮಂದಿಗೆ ಸಮಸ್ಯೆಯಾಗುತ್ತದೆ ಎಂಬ ಮಾತುಗಳು ಇವೆ. ಈ ಬಗ್ಗೆ ಪರಿಶೀಲಿಸಿ ಸರಿಪಡಿಸಲು ಕ್ರಮ ವಹಿಸುತ್ತೇವೆ’ ಎಂದರು.

‘ಕಂಪ್ಯೂಟರ್‌, ಅಂತರ್ಜಾಲದ ಮೂಲಕ ಬಹಳಷ್ಟು ಪ್ರಕ್ರಿಯೆಗಳು ನಡೆಯುತ್ತವೆ. ಹೀಗಾಗಿ ಪೊಲೀಸರಿಗೆ ಕಂಪ್ಯೂಟರ್‌ ತರಬೇತಿ ಕಡ್ಡಾಯಗೊಳಿಸಲಾಗಿದೆ‘ ಎಂದರು.

‘ನಕ್ಸಲ್‌ ಚಟುವಟಿಕೆ ಸಂಪೂರ್ಣ ನಿಗ್ರಹ ಆಗುವವರೆಗೆ ನಕ್ಸಲ್‌ ನಿಗ್ರಹ ಪಡೆ ವಿಭಾಗಗಳನ್ನು ವಾಪಸ್‌ ಪಡೆಯಲ್ಲ. ಅಂತರರಾಜ್ಯ ಮಟ್ಟದಲ್ಲಿ ನಕ್ಸಲ್‌ ಚಲನವಲನಗಳು ಇರುತ್ತವೆ. ಈ ರಾಜ್ಯದಲ್ಲಿ ಕ್ರಮ ವಹಿಸಿದರೆ ಬೇರೆ ರಾಜ್ಯಕ್ಕೆ ಹೋಗುತ್ತಾರೆ. ಎಲ್ಲವನ್ನು ಕಾದು ನೋಡುತ್ತಿದ್ದೇವೆ. ನಕ್ಸಲ್‌ ಚಟುವಟಿಕೆ ಬೆಂಬಲಿಸುವ ಮಾನಸಿಕತೆ ಇರುವವರ ಮೇಲೂ ಕಣ್ಣು ಇಟ್ಟಿದ್ದೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT