ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಲ್ಲಿಬೀಡು: ಗದ್ದೆಯಲ್ಲಿ ಕಂದಕ

Last Updated 7 ಆಗಸ್ಟ್ 2022, 7:37 IST
ಅಕ್ಷರ ಗಾತ್ರ

ಕಳಸ: ತಾಲ್ಲೂಕಿನ ನೆಲ್ಲಿಬೀಡು ಗ್ರಾಮ ಭತ್ತದ ಗದ್ದೆಯೊಂದರಲ್ಲಿ ಭೂ ಕುಸಿತವಾಗಿದ್ದು, ಕಂದಕ ಬಿದ್ದಿದೆ.

ಜಯಂತ್ ಗೌಡ ಎಂಬುವರ ಗದ್ದೆಯಲ್ಲಿ ಶುಕ್ರವಾರ ಸಂಜೆ ಭಾರಿ ಸದ್ದಿನೊಂದಿಗೆ ಭೂಕುಸಿತವಾಗಿದ್ದು, ಸುಮಾರು60 ಅಡಿ ಅಗಲ ವ್ಯಾಪ್ತಿಯಲ್ಲಿ 40 ಅಡಿ ಆಳದ ಕಂದಕ ನಿರ್ಮಾಣಗೊಂಡಿದೆ. ಗದ್ದೆಯಲ್ಲಿ ನಾಟಿಗೆ ಸಜ್ಜು ಮಾಡಲಾಗಿತ್ತು.

‘ಕಂದಕ ನೋಡಿದ ಮೇಲೆ ಗದ್ದೆಗೆ ಹೋಗಲು ಎಲ್ಲರೂ ಹೆದರುತ್ತಿದ್ದಾರೆ’ ಎಂದು ಜಯಂತ್ ಗೌಡ ಅವರ ಮಗ ಮನೋಜ್ ತಿಳಿಸಿದರು.

ಕುದುರೆಮುಖ ಸಮೀಪ ಇರುವ ನೆಲ್ಲಿಬೀಡು ಗ್ರಾಮದಲ್ಲಿ 3 ದಿನಗಳಿಂದ ಭಾರಿ ಮಳೆಯಾಗುತ್ತಿದೆ.

‘ಕುಸಿದಿರುವ ಗದ್ದೆಯ ಪಕ್ಕದ ಗದ್ದೆ ನಮ್ಮದು. ಗದ್ದೆಯ ಗುಂಡಿ ನೋಡಿ ನಮಗೂ ಹೆದರಿಕೆ ಆಗಿದೆ. ನಮಗೂ ಈಗ ಗದ್ದೆ ನಾಟಿ ಮಾಡಲು ಧೈರ್ಯ ಇಲ್ಲ. ಗದ್ದೆ ಅಂಚಿನಲ್ಲಿ ಶಾಲೆಗೆ ನಡೆದುಕೊಂಡು ಹೋಗಲು ಮಕ್ಕಳಿಗೂ ಭಯ ಶುರುವಾಗಿದೆ. ಗುಂಡಿ ಬೀಳಲು ಕಾರಣ ಏನು ಎಂದು ವಿಜ್ಞಾನಿಗಳು ನಮಗೆ ಹೇಳಬೇಕು’ ಎಂದು ಸಮೀಪದ ಗದ್ದೆಯ ನಾಗೇಶ್ ಗೌಡ ಮನವಿ ಮಾಡಿದ್ದಾರೆ.

‘ಜೀವನದಲ್ಲಿ ಇಂತಹ ಘಟನೆ ನೋಡಿಲ್ಲ. ಗ್ರಾಮದ ಕೃಷಿಕರಿಗೆ ಆತಂಕ ಆಗಿದೆ. ಅನಾಹುತದ ಬಗ್ಗೆ ಹೆದರಿಕೆ ಹೆಚ್ಚಿದೆ. ಮಳೆ ಮುಂದುವರಿದಿದ್ದು, ಭೂಮಿ ಹೀಗೆಯೇ ಕುಸಿದರೆ ಏನು ಮಾಡುವುದು? ಎಂಬ ಚಿಂತೆ ಕಾಡಿದೆ. ಭೂ ವಿಜ್ಞಾನಿಗಳೇ ಉತ್ತರಿಸಬೇಕು’ ಎಂದು ಜಯಂತ್ ಗೌಡ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT