ತಗ್ಗಿದ ಮಳೆ; 3 ಮನೆ ಗೋಡೆ ಕುಸಿತ

7

ತಗ್ಗಿದ ಮಳೆ; 3 ಮನೆ ಗೋಡೆ ಕುಸಿತ

Published:
Updated:
Deccan Herald

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಳೆಯ ಅಬ್ಬರ ತಗ್ಗಿದೆ. ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿ ಅಂಬಳೆ ಗ್ರಾಮದಲ್ಲಿ ಒಂದು ಮತ್ತು ತೇಗೂರಿನಲ್ಲಿ ಎರಡು ಮನೆಗಳ ಗೋಡೆಗಳು ಕುಸಿದು ಹಾನಿಯಾಗದೆ.

ಅಂಬಳೆ ಗ್ರಾಮದ ಕೂಲಿ ಕಾರ್ಮಿಕರಾದ ಜಯಮ್ಮ ಅವರ ಮನೆಯ ಗೋಡೆ ಕುಸಿದಿದೆ. ಅವಘಡದಿಂದ ಮನೆಯಲ್ಲಿದ್ದ ವಸ್ತುಗಳು ಹಾನಿಯಾಗಿವೆ. ತೇಗೂರಿನಲ್ಲಿ ಚಂದ್ರರಾಜು ಅವರ ಕೊಟ್ಟಿಗೆಯ ಗೋಡೆ, ವಸಂತರಾಜು ಅವರ ಮನೆಯ ಗೋಡೆ ಕುಸಿದು ಹಾನಿಯಾಗಿದೆ.

ಮಳೆ ಅಬ್ಬರ ತಗ್ಗಿದೆ. ಶುಕ್ರವಾರ ಬೆಳಿಗ್ಗೆಯಿಂದ ಸಂಜೆವರೆಗೆ ತುಂತುರು ಮಳೆ ಇತ್ತು. ಮಧ್ಯಾಹ್ನ ಒಂದೆರಡು ಬಾರಿ ಸೂರ್ಯ ದರ್ಶನವಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !