ಕಾಫಿನಾಡು: ಜಿಲ್ಲೆಯ ವಿವಿಧೆಡೆ ಮಳೆ, 22ರವರೆಗೆ ಮುಂದುವರಿಯುವ ಮುನ್ಸೂಚನೆ

ಚಿಕ್ಕಮಗಳೂರು: ಜಿಲ್ಲೆಯ ವಿವಿಧೆಡೆ ಶುಕ್ರವಾರ ಗುಡುಗುಸಹಿತ ಮಳೆಯಾಗಿದ್ದು, ಮಲೆನಾಡು ಭಾಗದ ಕೆಲವೆಡೆ ಒಣ ಹಾಕಿದ್ದ ಕಾಫಿ ತೊಯ್ದಿದೆ.
ತಡರಾತ್ರಿಯಿಂದ ಶುರುವಾದ ಮಳೆ ಬಿಟ್ಟುಬಿಟ್ಟು ಸುರಿದಿದೆ. ಎಲ್ಲ ತಾಲ್ಲೂಕುಗಳಲ್ಲಿ ಮಳೆಯಾಗಿದೆ.
ನಗರ, ಗಿರಿ ಶ್ರೇಣಿ , ಸುತ್ತಲಿನ ಪ್ರದೇಶದಲ್ಲಿ ಮಳೆಯಾಗಿದೆ. ನಸುಕಿನಲ್ಲಿ ಸುಮಾರು ಮುಕ್ಕಾಲು ಗಂಟೆ ಸಾಧಾರಣವಾಗಿ ಸುರಿದಿದೆಇ.
ಸಿಂಗಟಿಗೆರೆ– 4.6, ಬಸ್ರಿಕಟ್ಟೆ– 3.6, ಹುಣಸಘಟ್ಟ– 2.2, ಬಾಳೆಹೊನ್ನೂರು, ಬುಕ್ಕಾಂಬೂದಿ– 2, ಅತ್ತಿಗುಂಡಿ– 1.6, ಮೂಡಿಗೆರೆ– 1.2, ಅಜ್ಜಂಪುರ– 1.1 ಮಳೆಯಾಗಿದೆ.
ಮಳೆ ಮುನ್ಸೂಚನೆ: ಇದೇ 22ರವರೆಗೆ ಜಿಲ್ಲೆಯಾದ್ಯಂತ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ. ಗಾಳಿಯ ವೇಗವು ಹೆಚ್ಚು ಇರುವ ಸಂಭವ ಇದೆ ಎಂದು ಮೂಡಿಗೆರೆಯ ಕೃಷಿ ವಿಜ್ಞಾನ ಕೇಂದ್ರದ ಜಿಲ್ಲಾ ಕೃಷಿ ಹವಾಮಾನ ಘಟಕ ವಿಜ್ಞಾನಿ ಪ್ರವೀಣ್ ತಿಳಿಸಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.