ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ: ನೀರಿನ ಮಟ್ಟ ಏರಿಕೆ

Last Updated 4 ಜುಲೈ 2022, 7:17 IST
ಅಕ್ಷರ ಗಾತ್ರ

ಶೃಂಗೇರಿ: ತಾಲ್ಲೂಕಿನಾದ್ಯಾಂತ ಮುಂಗಾರು ಮಳೆ ಚುರುಕಾಗಿದ್ದು, ಭಾನುವಾರ ಆರಿದ್ರಾ ಮಳೆ ಆರ್ಭಟ ಹೆಚ್ಚಾಗಿದೆ. ಕಿಗ್ಗಾ ಮತ್ತು ಕೆರೆಕಟ್ಟೆಯಲ್ಲಿ ಉತ್ತಮ ಮಳೆಯಾಗಿದೆ.

ತಾಲ್ಲೂಕಿನ ಕಿಗ್ಗಾದಲ್ಲಿ 174.6 ಮಿ,ಮೀ, ಶೃಂಗೇರಿಯಲ್ಲಿ 136.2 ಮಿ.ಮೀ, ಕೆರೆಕಟ್ಟೆಯಲ್ಲಿ 129.2 ಮಿ.ಮೀ ಮಳೆಯಾಗಿದೆ.

ಸತತವಾಗಿ ಮಳೆ ಸುರಿಯುತ್ತಿರುವ ಪರಿಣಾಮ ಜನ ಜೀವನಕ್ಕೆ ಸ್ವಲ್ಪ ಮಟ್ಟಿನ ತೊಂದರೆಯಾಗಿದೆ. ತುಂಗಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಮಳೆಯಿಂದ ಹೊಳೆ ಕೊಪ್ಪದಲ್ಲಿ ವಿದ್ಯುತ್ ಕಂಬದ ಮೇಲೆ ಮರ ಉರುಳಿ ಬಿದ್ದು ಕಂಬ ತುಂಡಾಗಿದೆ. ಮೆಣಸೆ ಗ್ರಾಮ ಪಂಚಾಯಿತಿಯ ಕಿಕ್ರೆ ಹಳ್ಳ ಉಕ್ಕಿ ರಸ್ತೆಯ ಮೇಲೆ ಹರಿದು ಜನರು ಓಡಾಡಕ್ಕೆ ತೊಂದರೆ ಉಂಟಾಗಿದೆ.

ಕೃಷಿ ಚಟುವಟಿಕೆ ಎಂದಿನಂತೆ ಇದ್ದರೂ, ಅಡಿಕೆ ತೋಟಕ್ಕೆ ಬೋರ್ಡೋ ಸಿಂಪಡಣೆ ಸಾಧ್ಯವಾಗಲಿಲ್ಲ. ಜೂನ್‍ನಲ್ಲಿ ಮೊದಲ ಬಾರಿ ಬೋರ್ಡೋ ಸಿಂಪಡಣೆ ಮಾಡಿದ್ದ ರೈತರಿಗೆ, ಈಗ ಎರಡನೆಯ ಅವಧಿಯ ಬೋರ್ಡೋ ಸಿಂಪಡಣೆಗೆ ಮಳೆ ಅಡ್ಡಿಯಾಗಿದೆ. ಭತ್ತದ ಬಿತ್ತನೆ ಕಾರ್ಯವೂ ಆರಂಭವಾಗಿದ್ದು, ಜುಲೈ ಅಂತ್ಯದ ವೇಳೆಗೆ ನಾಟಿ ಕಾರ್ಯ ಆರಂಭವಾಗುತ್ತದೆ.ಹೈಬ್ರಿಡ್ ತಳಿ ಬಿತ್ತನೆ ಮಾಡಲು ಇನ್ನೂ ಅವಕಾಶವಿದೆ. ಯಾಂತ್ರೀಕೃತ ನಾಟಿ ಕಾರ್ಯವನ್ನು ಕೆಲ ರೈತರು ಮಾಡುತ್ತಿದ್ದು, ಬಹುತೇಕ ರೈತರು ಸಾಂಪ್ರಾದಾಯಿಕ ನಾಟಿ ಕಾರ್ಯ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT