ಗುರುವಾರ , ಸೆಪ್ಟೆಂಬರ್ 19, 2019
22 °C
ಕ್ರಿಕೆಟ್ ತಾರೆ ವಿರಾಟ್ ಕೊಯ್ಲಿ ಫೌಂಡೇಷನ್

ಅಂಧ ಕ್ರೀಡಾಪಟು ರಕ್ಷಿತಾ ರಾಜುಗೆ ಕ್ರೀಡಾ ಪ್ರಶಸ್ತಿ

Published:
Updated:
Prajavani

ಕೊಟ್ಟಿಗೆಹಾರ: ಆಗಸ್ಟ್‌ನಲ್ಲಿ ಪ್ಯಾರಿಸ್‍ನಲ್ಲಿ ನಡೆದ ಪ್ಯಾರಾಲಂಪಿಕ್ಸ್‌ ಜೂನಿಯರ್ ಅಥ್ಲೆಟಿಕ್ಸ್‌ ಕ್ರೀಡಾಕೂಟದ 1500 ಮೀ. ಓಟದಲ್ಲಿ ರಕ್ಷಿತಾರಾಜು ತೃತೀಯ ಸ್ಥಾನ ಪಡೆದು, ಕಂಚಿನ ಪದಕ ಗೆದ್ದುಕೊಂಡಿದ್ದಾರೆ.

ರಕ್ಷಿತಾರಾಜು ಚಿಕ್ಕಮಗಳೂರಿನ ಕೆಂಪನಹಳ್ಳಿಯ ಆಶಾಕಿರಣ ಅಂಧ ಶಾಲೆಯ ವಿದ್ಯಾರ್ಥಿನಿ.

ಅಂತರರಾಷ್ಟ್ರೀಯ ಮಟ್ಟದ ಜೂನಿಯರ್ ಪ್ಯಾರಾಲಂಪಿಕ್ಸ್‌ನ ಅಥ್ಲೆಟಿಕ್ಸ್‌ನಲ್ಲಿ ಕಳೆದ ಬಾರಿ 1500 ಮೀ. ಓಟದಲ್ಲಿ ಚಿನ್ನ ಪಡೆದು ಗಮನ ಸೆಳೆದಿದ್ದರು. ಇವರ ಈ ಸಾಧನೆಗೆ ಕ್ರಿಕೆಟ್ ತಾರೆ ವಿರಾಟ್ ಕೊಯ್ಲಿ ಫೌಂಡೇಷನ್ ವತಿಯಿಂದ ನೀಡುವ ‘ಭಾರತೀಯ ಕ್ರೀಡಾ ಪುರಸ್ಕಾರ’ವನ್ನು ಇದೇ 27ರಂದು ಮುಂಬೈನಲ್ಲಿ ನಡೆಯುವ ಸಮಾರಂಭದಲ್ಲಿ ವಿರಾಟ್ ಕೊಯ್ಲಿ ಅವರೇ ಪ್ರದಾನ ಮಾಡಲಿದ್ದಾರೆ ಎಂದು ಕೋಚ್‌ಗಳಾದ ರಾಹುಲ್‌, ಗೋವಿಂದ್ ಹಾಗೂ ಸೌಮ್ಯ ತಿಳಿಸಿದ್ದಾರೆ.

ರಕ್ಷಿತಾ ಅವರು ಮೂಡಿಗೆರೆ ತಾಲ್ಲೂಕಿನ ಬಾಳೂರಿನ ಗುಡ್ನಹಳ್ಳಿ ಗ್ರಾಮದವರಾಗಿದ್ದು, ಇವರ ಸಾಧನೆಗೆ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಜೆ.ಪಿ.ಕೃಷ್ಣೇಗೌಡ ಹಾಗೂ ಶಿಕ್ಷಕವರ್ಗ, ಪೋಷಕರು ಹಾಗೂ ಬಾಳೂರು ಗ್ರಾಮಸ್ಥರು ಅಭಿನಂದಿಸಿದ್ದಾರೆ.

Post Comments (+)