ಚಿಕ್ಕಮಗಳೂರು: ರಂಜಾನ್ ಮಾಸದ ಉಪವಾಸ ವ್ರತಾಚರಣೆ ಜತೆಗೆ ಈದ್ ಉಲ್ ಫಿತ್ರ್ ಆಚರಣೆಗೆ ಖರೀದಿ ಭರಾಟೆ ಜೋರಾಗಿದೆ.

ನಗರದ ಎಂ.ಜಿ. ರಸ್ತೆ, ಐ.ಜಿ. ರಸ್ತೆ, ಮಾರ್ಕೆಟ್ ರಸ್ತೆಗಳಲ್ಲಿ ಹಬ್ಬದ ವ್ಯಾಪಾರ ಭರಾಟೆಯಿಂದ ಸಾಗಿದೆ. ರಂಜಾನ್ ಹಾಗೂ ಯುಗಾದಿಗೆ ಶುಭಕೋರುವ ದೀಪಾಲಂಕಾರದಲ್ಲಿ ಗಮನ ಸೆಳೆಯುತ್ತಿದೆ. ಸಂಜೆಯ ಇಫ್ತಾರ್ ಪ್ರಾರ್ಥನೆ ಬಳಿಕವಂತೂ ರಸ್ತೆಯ ಅಂಗಡಿಗಳು ಜನ ಜಂಗುಳಿ ಕೂಡಿವೆ.

ಹಬ್ಬಕ್ಕಾಗಿ ಅಂಗಡಿಗಳಲ್ಲೂ ವಿಶೇಷ ವಿನ್ಯಾಸದ ಬಟ್ಟೆಗಳು ಬಂದಿವೆ. ವಿನೂತನ ಫ್ಯಾಷನ್ನ ಬಟ್ಟೆಗಳ ಪ್ರದರ್ಶನ, ಮಾರಾಟ ಭರ್ಜರಿಯಾಗಿ ನಡೆಯುತ್ತಿದೆ. ಮಹಿಳೆಯರ ಬಟ್ಟೆಗಳು, ಬಗೆಬಗೆಯ ಫ್ಯಾಷನ್ ಉತ್ಪನ್ನಗಳು, ದೇಶ ವಿದೇಶದ ಸುಗಂಧ ದ್ರವ್ಯಗಳು, ಚಪ್ಪಲಿಗಳು, ಫ್ಯಾನ್ಸಿ ಆಭರಣಗಳು, ಗೃಹೋಪಯೋಗಿ ವಸ್ತುಗಳು, ಸಿಹಿ ತಿಂಡಿಗಳು, ಮಕ್ಕಳ ಆಟಿಕೆಗಳು ಅಂಗಡಿಗಳಲ್ಲಿ ಜಗಮಗಿಸುತ್ತಿದೆ. ಮನೆಮಂದಿಗೆಲ್ಲ ಬಟ್ಟೆ, ಪ್ರೀತಿ ಪಾತ್ರರಿಗೆ ಉಡುಗೊರೆ ಕೊಳ್ಳಲು ಶುರು ಮಾಡಿದ್ದಾರೆ.

ಹಬ್ಬವು ಸುಗಂಧ ದ್ರವ್ಯದ ಮಾರಾಟವನ್ನು ಚುರುಕುಗೊಳಿಸಿದೆ. ಜನ್ನತ್ ಉಲ್ ಫಿರ್ದೋಸ್ ಸುಗಂಧವು ಜನರಿಗೆ ಅಚ್ಚುಮೆಚ್ಚು ಎನ್ನುವ ಅಂಗಡಿಗಳಲ್ಲಿ ಖರೀದಿ ಜೋರಾಗಿ ನಡೆಯುತ್ತಿದೆ. ಅಂಗಡಿಗಳಲ್ಲೂ ಸಹ ವಿಶೇಷ ಸುಗಂಧ ದ್ರವ್ಯಗಳನ್ನು ತರಿಸಿ ಮಾರಾಟಕ್ಕೆ ಇಡಲಾಗಿದೆ.

ಪೂರಕ ಮಾಹಿತಿ: ಕೆ.ವಿ.ನಾಗರಾಜ್, ರವಿಕುಮಾರ್ ಶೆಟ್ಟಿಹಡ್ಲು, ಕೆ.ನಾಗರಾಜ್, ಎನ್. ಸೋಮಶೇಖರ್

ಹಬ್ಬ ಆಚರಣೆಗೆ ಅಣಿ

ಕೊಪ್ಪ: ರಂಜಾನ್ ಹಬ್ಬದ ಆಚರಣೆಗೆ ತಾಲ್ಲೂಕಿನಲ್ಲಿ ಮುಸ್ಲಿಂ ಸಮುದಾಯ ಸಂಭ್ರಮದಿಂದ ಸಿದ್ಧತೆ ನಡೆಸಿದೆ. ಉಪವಾಸ ವ್ರತಾಚರಣೆ ಮುಕ್ತಾಯಗೊಳಿಸಲು ಅಣಿಯಾಗಿದೆ. ಪ್ರತಿ ವರ್ಷದಂತೆ ಈ ಬಾರಿಯೂ ವಿಶೇಷ ಪ್ರಾರ್ಥನೆ ಪರಸ್ಪರ ಶುಭಾಶಯ ಕೋರುವ ಹಾಗೂ ಮನೆಯಲ್ಲಿ ಹಬ್ಬ ಆಚರಿಸಲು ತಯಾರಿ ನಡೆಸಲಾಗಿದೆ. ಉಪವಾಸ ಆರಂಭದಿಂದಲೂ ಹಬ್ಬಕ್ಕಾಗಿ ವಸ್ತುಗಳನ್ನು ಖರೀದಿಸಿದ್ದಾರೆ. ಪಟ್ಟಣ ಸುತ್ತಮುತ್ತ ಒಟ್ಟು 9 ಮಸೀದಿಗಳಿದ್ದು ಬಹುತೇಕ ಮಂದಿ ಮಸೀದಿಯಲ್ಲೇ ಪ್ರಾರ್ಥನೆ ನಡೆಸಲಿದ್ದಾರೆ. ಗುಣವಂತೆಯಲ್ಲಿನ ಇದ್ಗಾ ಮೈದಾನಲ್ಲಿಯೂ ಸಮುದಾಯ ಒಗ್ಗೂಡಿ ಪ್ರಾರ್ಥನೆ ನಡೆಸಲಿದೆ. ತಾಲ್ಲೂಕಿನ ಕುದುರೆಗುಂಡಿ ನಾರ್ವೆ ಜಯಪುರ ಶಾಂತಿಪುರ ಹರಿಹರಪುರ ಕಾಳನಾಯಕನಕಟ್ಟೆ ದೇವರಮನೆ ಬಂಡಿಗಡಿ ಕಮ್ಮರಡಿಯಲ್ಲಿ ಮಸೀದಿಗಳಿದ್ದು ಹಬ್ಬಕ್ಕಾಗಿ ತಯಾರಿ ನಡೆಸಲಾಗಿದೆ.

ಆನ್ಲೈನ್ನಲ್ಲೂ ಖರೀದಿ

ನರಸಿಂಹರಾಜಪುರ: ರಂಜಾನ್ ಹಬ್ಬದ ಪ್ರಯುಕ್ತ ಮುಸ್ಲಿಮರು ಉಪವಾಸ ಆರಂಭವಾದ ಮೊದಲ ದಿನದಿಂದಲೂ ಕಟ್ಟುನಿಟ್ಟಾಗಿ ಆಚರಿಸುತ್ತಿದ್ದು ರಂಜಾನ್ ಆಚರಣೆಗೆ ಸಿದ್ಧತೆ ನಡೆಸುತ್ತಿದ್ದಾರೆ. ರಂಜಾನ್ ಪ್ರಯುಕ್ತ ಮಸೀದಿಗಳಲ್ಲಿ ಪ್ರತಿ ನಿತ್ಯ 5 ಹೊತ್ತು ನಮಾಜ್ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ಮಸೀದಿಗಳಲ್ಲಿ ನಿತ್ಯ ಲಘು ಉಪಹಾರದ ವ್ಯವಸ್ಥೆ ಮಾಡಲಾಗಿದೆ. ರಾತ್ರಿ 9ರಿಂದ 10ರವರೆಗೆ ಮಸೀದಿಗಳಲ್ಲಿ ವಿಶೇಷವಾಗಿ ಕರಾವಿ ನಮಾಜ್ ಮಾಡಲಾಗುತ್ತಿದೆ. ಮನೆಗಳಲ್ಲೂ ಮಹಿಳೆಯರು 9 ವರ್ಷ ಮೇಲ್ಪಟ್ಟ ಮಕ್ಕಳು ಬೆಳಿಗ್ಗೆ 7ರಿಂದ ಉಪವಾಸ ಆಚರಿಸುತ್ತಾರೆ. ಸಣ್ಣ ಮಕ್ಕಳು ವಯಸ್ಕರರು ಹಾಗೂ ಅನಾರೋಗ್ಯ ಪೀಡಿತರನ್ನು ಹೋರತು ಪಡಿಸಿ ಉಳಿದವರೆಲ್ಲರೂ ರಂಜಾನ್ನಲ್ಲಿ ಕಟ್ಟುನಿಟ್ಟಾಗಿ ಉಪವಾಸ ಆಚರಿಸುತ್ತಿದ್ದಾರೆ. ರಂಜಾನ್ ಹಬ್ಬ ಆರಂಭದಿಂದ ಪಟ್ಟಣದ ವ್ಯಾಪ್ತಿಯ ಮಾರುಕಟ್ಟೆಯಲ್ಲಿ ಹಣ್ಣು ತರಕಾರಿ ಬಟ್ಟೆ ಖರೀದಿ ಜೋರಾಗಿದೆ. ಆನ್ಲೈನ್ ಬಟ್ಟೆ ಖರೀದಿಯಿಂದ ವ್ಯಾಪಾರ ಕಡಿಮೆ ಎಂಬುದು ಕೆಲವು ಬಟ್ಟೆ ವ್ಯಾಪಾರಿಗಳು ಅಭಿಪ್ರಾಯ. ರಂಜಾನ್ ಎಂಬುದು ಆ ಸಮುದಾಯದ ಪಾಲಿಗೆ ಸುಗ್ಗಿ ಇದ್ದಂತೆ. ಬಡವ ಶ್ರೀಮಂತ ಎಂಬ ವ್ಯತ್ಯಾಸವಿಲ್ಲದೆ ಪ್ರತಿಯೊಬ್ಬರು ಹಬ್ಬಕ್ಕೆ ಹೊಸ ಬಟ್ಟೆ ಧರಿಸುತ್ತಾರೆ. ಬಟ್ಟೆ ಖರೀದಿ ಹಣ್ಣು ಹಂಪಲುಗಳ ಖರೀದಿ ಜೋರಾಗಿದೆ.

ಇಡೀ ತಿಂಗಳು ಶ್ರದ್ಧೆ

ತರೀಕೆರೆ: ಪಟ್ಟಣದ ಎಲ್ಲಾ ಮಸೀದಿಗಳಲ್ಲಿ ಈದುಲ್ ಫಿತರ್ ಹಬ್ಬದ ಅಂಗವಾಗಿ ರಂಜಾನ್ ತಿಂಗಳ ಪೂರ್ತಿ ಶ್ರದ್ಧೆ ಭಕ್ತಿಯಿಂದ ಮುಸ್ಲಿಂ ಬಾಂಧವರು ಆಚರಿಸುತ್ತಿದ್ದಾರೆ. ಹಲವು ಮಸೀದಿಗಳಲ್ಲಿ ಬೆಳಿಗ್ಗೆ ಸೆಹ್ರಿ(ಉಪಹಾರ) ಹಾಗೂ ಉಪವಾಸ ತೊರೆಯುವ ಸಮಯದಲ್ಲಿ(ಇಫ್ತಿಹಾರ್) ಗಂಜಿ ಶರಬತ್ ಸಮೋಸ ಸೇರಿ ಇತರ ಪದರ್ಥಗಳನ್ನು ಸೇವಿಸುತ್ತಿದ್ದಾರೆ. ಎಲ್ಲಾ ಮಸೀದಿಗಳು ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದ್ದು ನೋಡುಗರನ್ನು ಆಕರ್ಷಿಸುತ್ತಿವೆ. ದಾನಕ್ಕೆ(ಝಕಾತ್) ಹೆಚ್ಚು ಮಹತ್ವ ಇರುವ ರಂಜಾನ್ ಮಾಸದಲ್ಲಿ ಬಡವರಿಗೆ ಸ್ಥಿತಿವಂತರು ಆರ್ಥಿಕ ಸಹಕಾರ ಮಾಡುವುದು ಕೂಡ ಪ್ರತೀತಿ. ಪಟ್ಟಣದಲ್ಲಿ ಬಟ್ಟೆ ಅತ್ತರ್ ಬುರ್ಕಾ ಜುಬ್ಬ ರೀತಿಯ ಪಾರಂಪರಿಕ ವಸ್ತ್ರಗಳ ಜತೆ ಸಸ್ಯಾಹಾರಿ ಮತ್ತು ಮಾಂಸಾಹಾರಿ ಸಮೋಸಗಳ ಮಾರಾಟ ಜೋರಾಗಿ ನಡೆಯುತ್ತಿದೆ.

ಒಡವೆ ವಸ್ತ್ರ ಖರೀದಿ ಜೋರು

ಕಡೂರು: ತಾಲ್ಲೂಕಿನಾದ್ಯಂತ ರಂಜಾನ್ ಹಬ್ಬದ ಕಳೆಗಟ್ಟುತ್ತಿದೆ. ರಂಜಾನ್ ಮಾಸದ 26ನೇ ದಿವಸ ಮುಸ್ಲಿಮರಿಗೆ ಅತ್ಯಂತ ಪ್ರಮುಖ ದಿನವಾಗಿದ್ದು ಅಂದು ಮಸೀದಿಗಳಲ್ಲಿ ನಡೆಯುತ್ತಿದ್ದ ಕುರಾನ್ ಪಠಣ ಮುಕ್ತಾಯವಾಗುತ್ತದೆ. ಈ ಸಂದರ್ಭದಲ್ಲಿ ಅಂದು ದಿನವಿಡೀ ವಿಶೇಷ ಪ್ರಾರ್ಥನೆ ಹೊಸಬಟ್ಟೆ ಧರಿಸುವುದು ಮಸೀದಿಯಲ್ಲಿ ಜಾಗರಣೆ ಮರುದಿನದ ಮುಂಜಾನೆಯ ‘ಸಹೆರಿ’ ಸಲುವಾಗಿ ಭೋಜನ ತಯಾರಿ ಮಸೀದಿಗಳಲ್ಲಿ ನಡೆಯಲಿದೆ. ಮನೆಯಲ್ಲಿ ಹೆಣ್ಣುಮಕ್ಕಳು 26ನೇ ದಿನದ ಒಳಗೆ ಹೊಸ ಒಡವೆ ವಸ್ತ್ರ ಖರೀದಿಸುವುದು ವಾಡಿಕೆ. ಕೆಲವೆಡೆ ಇಫ್ತಿಯಾರ್ ಕೂಟಗಳು ದೊಡ್ಡಮಟ್ಟದಲ್ಲಿ ಆಯೋಜನೆಗೊಳ್ಳುತ್ತವೆ. 27ನೇ ದಿನವಾದ ಮಂಗಳವಾರ ಮಸೀದಿಗಳಿಂದ ಸಿಹಿ ಬೂಂದಿ ವಿತರಣೆ ವಿದ್ಯುದ್ದೀಪಗಳಿಂದ ಅಲಂಕರಿಸುವುದು ಸ್ವಚ್ಛತೆ ಹಳೆಯ ದೀಪಗಳ ಬದಲಾವಣೆ ಸಿದ್ಧತೆಗಳು ನಡೆದಿದೆ. ನಿತ್ಯವೂ ದಾನಗಳನ್ನು ನೀಡುವುದು ತಿಂಗಳಿಡೀ ನಡೆದರೂ ಬಹುತೇಕ ಅಂದಿನ ದಿನ ದೊಡ್ಡಮಟ್ಟದ ದಾನ ಕಾರ್ಯಗಳೂ ನಡೆಯುತ್ತವೆ. ಈಗಾಗಲೇ ಅಂಗಡಿಗಳಲ್ಲಿ ಹೆಣ್ಣುಮಕ್ಕಳು ಒಡವೆ ವಸ್ತ್ರ ಖರೀದಿ ಮಾಡುತ್ತಿದ್ದಾರೆ ಎನ್ನುತ್ತಾರೆ ಕಡೂರಿನ ಜಮೀರ್ ಮತ್ತು ಬೀರೂರಿನ ಖಲೀಲ್ ಅಹಮದ್ ಖಾನ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.