ಮಂಗಳವಾರ, ಜನವರಿ 21, 2020
19 °C

ಅತ್ಯಾಚಾರ ಆರೋಪ: ಯುವಕನ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನರಸಿಂಹರಾಜಪುರ: ಬಾಲಕಿಯ ಅಪಹರಣ ಹಾಗೂ ಅತ್ಯಾಚಾರ ಮಾಡಿದ ಆರೋಪದ ಮೇಲೆ ಪೋಕ್ಸೊ ಕಾಯ್ದೆಯಡಿ ಯುವಕನನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಬಳ್ಳಾರಿ ಜಿಲ್ಲೆಯ ಹರಪನಹಳ್ಳಿಯ ಹನುಮಂತ (26) ಬಂಧಿತ ಆರೋಪಿ. ತಾಲ್ಲೂಕಿನ ಗ್ರಾಮವೊಂದರಲ್ಲಿ ಹಿಂದೆಗಾರೆ ಕೆಲಸಕ್ಕೆ ಹನುಮಂತ ಬಂದಿದ್ದನು.ಈ ಸಂದರ್ಭ ಗ್ರಾಮದ ಬಾಲಕಿಯೊಬ್ಬಳ ಪರಿಚಯವಾಗಿತ್ತು. ಡಿ.30 ರಂದು ಹನುಮಂತ ಹಾಗೂ ಬಾಲಕಿಯು ಪರಾರಿಯಾಗಿದ್ದರು. ಬಾಲಕಿಯ ತಂದೆ ಇದೇ 3 ರಂದು ಪೊಲೀಸರಿಗೆ ದೂರು ನೀಡಿದ್ದರು.

ತನಿಖೆ ನಡೆಸಿದ ಪೊಲೀಸರು ಗುರುವಾರ ಬೆಳಿಗ್ಗೆ ಅರಸಿಕೆರೆ ತಾಲ್ಲೂಕಿನ ಹರಪನಹಳ್ಳಿಯಲ್ಲಿ ಹನುಮಂತ ಹಾಗೂ ಬಾಲಕಿಯನ್ನು ಪತ್ತೆ ಹಚ್ಚಿ ನರಸಿಂಹರಾಜಪುರ ಪೊಲೀಸ್‍ ಠಾಣೆಗೆ ಕರೆತಂದಿದ್ದಾರೆ. ಬಾಲಕಿಯನ್ನು ವಿಚಾರಣೆ ನಡೆಸಿದಾಗ ಹನುಮಂತ ಪುಸಲಾಯಿಸಿ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಮಾಡಿರುವ ಬಗ್ಗೆ ಹೇಳಿಕೆ ನೀಡಿದ್ದಾಳೆ. ಇದರ ಆಧಾರದ ಮೇಲೆ ಬಾಲಕಿಯ ಅಪಹರಣ ಹಾಗೂ ಅತ್ಯಾಚಾರ ಆರೋಪದಡಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿದ್ದು, ಹನುಮಂತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು