ಮಂಗಳವಾರ, ಜನವರಿ 28, 2020
17 °C

ಬಾಲಕಿ ಅತ್ಯಾಚಾರ ಪ್ರಕರಣ: 10 ವರ್ಷ ಕಠಿಣ ಸಜೆ, ದಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ಬಾಲಕಿ ಅತ್ಯಾಚಾರ ಪ್ರಕರಣದಲ್ಲಿ ಲೋಕವಳ್ಳಿಯ ಕುಮಾರ್‌ ಎಂಬಾತಗೆ ನಗರದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ಕೋರ್ಟ್‌ 10 ವರ್ಷ ಕಠಿಣ ಸಜೆ, ₹ 10,000ದಂಡ ವಿಧಿಸಿದೆ.

ನ್ಯಾಯಾಧೀಶರಾದ ಕೆ.ಎಲ್.ಅಶೋಕ್ ಅವರು ಈ ಆದೇಶ ನೀಡಿದ್ದಾರೆ.

ಏನಿದು ಪ್ರಕರಣ: ಮದುವೆಯಾಗುವುದಾಗಿ ನಂಬಿಸಿ ಬಾಲಕಿಯನ್ನು ಕರೆದೊಯ್ದು ಕುಮಾರ್‌ ಅತ್ಯಾಚಾರ ಎಸಗಿದ್ದ. ಮೂಡಿಗೆರೆ ತಾಲ್ಲೂಕಿನಲ್ಲಿ 2018 ಮಾರ್ಚ್‌ 13ರಂದು ಈ ಪ್ರಕರಣ ನಡೆದಿತ್ತು.

ಮನೆಯಿಂದ ಬಾಲಕಿಯನ್ನು ಬೈಕಿನಲ್ಲಿ ಕರೆದೊಯ್ದು ಕೃತ್ಯ ಎಸಗಿದ್ದ. ಬಾಲಕಿಯನ್ನು ಮನೆಗೆ ಹೋಗಲು ಬಿಡದೆ ಶೃಂಗೇರಿ, ಹೊರನಾಡು, ಮಂಗಳೂರು, ಉಡುಪಿಗೆ ಕರೆದೊಯ್ದು ಕೃತ್ಯ ಎಸಗಿದ್ದ.

ಮೂಡಿಗೆರೆ ಠಾಣೆ ಪೊಲೀಸರು ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು. ಇನ್‌ಸ್ಪೆಕ್ಟರ್‌ಎಚ್.ಎಂ.ಜಗದೀಶ್ ಕೋರ್ಟ್‌ಗೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯುಟರ್‌ ಬಿ.ಎಚ್.ಶ್ರೀಹರ್ಷ ವಾದ ಮಂಡಿಸಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು