ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊರನಾಡು- ಬಲಿಗೆ ರಸ್ತೆ: ಚರಂಡಿ ಇಲ್ಲದೆ ರಸ್ತೆಗೆ ಹಾನಿ

Last Updated 22 ಜೂನ್ 2022, 19:30 IST
ಅಕ್ಷರ ಗಾತ್ರ

ಕಳಸ: ಹೊರನಾಡು-ಬಲಿಗೆ ರಸ್ತೆಯ ಕೆಲವೆಡೆ ಚರಂಡಿ ನಿರ್ಮಾಣ ಮಾಡದಿರುವುದರಿಂದ ರಸ್ತೆ ಕೊಚ್ಚಿ ಹೋಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಈ ರಸ್ತೆಯನ್ನುಕಳೆದ ಬೇಸಿಗೆಯಲ್ಲಿ ನಿರ್ಮಿಸಲಾಗಿತ್ತು.

₹6.5 ಕೋಟಿ ವೆಚ್ಚದ ಈ ರಸ್ತೆಯ ಬಹುತೇಕ ಕೆಲಸ ಕಳೆದ ವರ್ಷವೇ ಪೂರ್ಣಗೊಂಡಿದೆ. ಬಾಕಿ ಉಳಿದಿದ್ದ ರಸ್ತೆಯ ಒಂದು ಭಾಗದ ಡಾಂಬರೀಕರಣ ಈ ವರ್ಷ ನಡೆದಿತ್ತು. ಕಾಮಗಾರಿಯ ಸಂದರ್ಭದಲ್ಲಿ ಗುತ್ತಿಗೆದಾರ ರಸ್ತೆ ಪಕ್ಕದ ಚರಂಡಿ ಕೆಲಸ ಮಾಡಿರಲಿಲ್ಲ. ಇದೀಗ ಮಳೆ ಆರಂಭವಾಗಿದ್ದು ದೊಡ್ಡ ಪ್ರಮಾಣದಲ್ಲಿ ನೀರು ರಸ್ತೆ ಪಕ್ಕ ಹರಿಯುತ್ತಿದೆ. ಡಾಂಬರು ರಸ್ತೆಯ ಹಲವು ಭಾಗದಲ್ಲಿ ಈಗಾಗಲೇ ಹಾನಿ ಆಗಿದೆ.

'ಮಳೆಗಾಲಕ್ಕೂ ಮುನ್ನ ಚರಂಡಿ ನಿರ್ಮಾಣ ಮಾಡುವ ಬಗ್ಗೆ ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಮಂಜುನಾಥ್ ಅವರ ಗಮನ ಸೆಳೆದರೂ ಯಾವುದೇ ಉಪಯೋಗ ಆಗಿಲ್ಲ. ಕೋಟ್ಯಂತರ ರೂಪಾಯಿ ಸರ್ಕಾರಿ ಹಣವನ್ನು ಹೀಗೆ ಹಾಳು ಮಾಡಲಾಗುತ್ತಿದೆ. ಇನ್ನು ನಮ್ಮ ಊರಿನ ರಸ್ತೆಗೆ ಸದ್ಯಕ್ಕೆ ಹಣ ಸಿಗುವ ಸಾಧ್ಯತೆ ಇಲ್ಲ' ಎಂದು ರೈತ ಸಂಘದ ಮುಖಂಡ ಬಲಿಗೆಯ ಸವಿಂಜಯ ಹೇಳಿದರು.

'ಆಗಿನ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರ ಮನವೊಲಿಸಿ ನಾವು ಈ ರಸ್ತೆಗೆ ದುಡ್ಡು ಬಿಡುಗಡೆ ಮಾಡಿಸಿದ್ದೆವು. ಮೂರು ವರ್ಷ ರಸ್ತೆ ಕಾಮಗಾರಿ ನಡೆಯಿತು. ಆದರೆ, ಸರಿಯಾಗಿ ಕಾಮಗಾರಿ ಮಾಡಲಿಲ್ಲ. ಈ ವರ್ಷದ ಬೇಸಿಗೆಯಲ್ಲಿ ಮಾಡಿದ ಕಾಮಗಾರಿಯಲ್ಲಿ ರಸ್ತೆಯ ಅಗಲನ್ನು ಕೂಡ ಕಡಿಮೆ ಮಾಡಿದ್ದಾರೆ. ಚರಂಡಿ ನಿರ್ಮಿಸದೆ ರಸ್ತೆ ಹಾಳಾಗಲು ಅಧಿಕಾರಿಗಳು ಕಾರಣವಾಗಿದ್ದಾರೆ. ಇವರ ವಿರುದ್ಧ ಹೋರಾಟ ಮಾಡಲಾಗುವುದು’ ಎಂದು ಜೆಡಿಎಸ್ ಮುಖಂಡ ಪ್ರಸಾದ್ ಜೈನ್ ಬಲಿಗೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT