ಸೋಮವಾರ, ನವೆಂಬರ್ 28, 2022
20 °C
ಕೊಪ್ಪ ಪಟ್ಟಣ ಪಂಚಾಯಿತಿ ತುರ್ತು ಸಭೆಯಲ್ಲಿ ನಿರ್ಧಾರ

‘ರಸ್ತೆ ದುರಸ್ತಿ ಕಾಮಗಾರಿಗೆ ಕ್ರಮ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪ: ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಗುಂಡಿಬಿದ್ದ ರಸ್ತೆಗಳ ದುರಸ್ತಿ ಕಾರ್ಯ ಕೈಗೊಳ್ಳುವ ಬಗ್ಗೆ ಸೋಮವಾರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಇಸ್ಮಾಯಿಲ್ ಅಧ್ಯಕ್ಷತೆಯಲ್ಲಿ ತುರ್ತು ಸಭೆ ನಡೆಸಿ ಸದಸ್ಯರಿಂದ ಒಪ್ಪಿಗೆ ಪಡೆಯಲಾಯಿತು.

ಎಸ್.ಎಫ್.ಸಿ ವಿಶೇಷ ಅನುದಾನ ₹2 ಕೋಟಿ ವೆಚ್ಚದ ಕಾಮಗಾರಿಗಳ ಪೈಕಿ ₹13 ಲಕ್ಷ ಮೊತ್ತವನ್ನು ರಸ್ತೆ ದುರಸ್ತಿಗೊಳಿಸುವ ತುರ್ತಾಗಿ ಮುಂಗಡ ಕಾಮಗಾರಿ ಕೈಗೊಳ್ಳಲು ಸದಸ್ಯರಿಂದ ಒಪ್ಪಿಗೆ ಪಡೆಯಲಾಯಿತು. ಇ-ಪೋರ್ಟಲ್ ನಲ್ಲಿ ಟೆಂಡರ್ ಲಭ್ಯವಿಲ್ಲದಿದ್ದಲ್ಲಿ ಪಟ್ಟಣ ಪಂಚಾಯಿತಿ ನಿಧಿಯಿಂದ ಕಾಮಗಾರಿ ವೆಚ್ಚ ಭರಿಸಲು ನಿರ್ಧರಿಸಲಾಯಿತು.

ನಾಮ ನಿರ್ದೇಶಿತ ಸದಸ್ಯ ಕೆ.ವೈ.ರಮೇಶ್ ಮಾತನಾಡಿ, ‘ಅನಧಿಕೃತ ಮಳಿಗೆ ಬಾಡಿಗೆದಾರರಿಂದ ಪಟ್ಟಣ ಪಂಚಾಯಿತಿಗೆ ಆದಾಯ ನಷ್ಟವಾಗು
ತ್ತಿದೆ. ಪತ್ತೆಹಚ್ಚಿ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಅಧ್ಯಕ್ಷ ಇಸ್ಮಾಯಿಲ್ ಅವರು, ‘ಬೇಡಿಕೆ ಪುಸ್ತಕದಲ್ಲಿ ಹೆಸರಿಲ್ಲದ ನೆಲ ಮಳಿಗೆ ಬಾಡಿಗೆದಾರರನ್ನು ಸ್ಥಳ ಪರಿಶೀಲಿಸಿ, ಅಂಥವರ ಹೆಸರನ್ನು ಪಟ್ಟಿ ಮಾಡಿ, ಈ ಬಗ್ಗೆ ಶೀಘ್ರವೇ ಕ್ರಮ ಕೈಗೊಳ್ಳಬೇಕು’ ಎಂದು ಪಟ್ಟಣ ಪಂಚಾಯಿತಿ ಎಂಜಿನಿಯರ್ ಹಾಗೂ ಸಿಬ್ಬಂದಿಗೆ ಸೂಚಿಸಿದರು.

‘ನ.27ಕ್ಕೆ ಮುಖ್ಯಮಂತ್ರಿ ಕೊಪ್ಪಕ್ಕೆ ಬರುತ್ತಿದ್ದಾರೆ. ಪಟ್ಟಣ ಪಂಚಾಯಿತಿ ವತಿಯಿಂದ ಅವರನ್ನು ಸನ್ಮಾನಿಸ ಲಾಗುವುದು’ ಎಂದರು.

ಉಪಾಧ್ಯಕ್ಷೆ ಗಾಯತ್ರಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಎಚ್.ಆರ್.ರೇಖಾ, ಪ್ರಭಾರಿ ಮುಖ್ಯಾಧಿಕಾರಿ ರಶ್ಮಿ, ಸದಸ್ಯರಾದ ಸುಜಾತಾ, ಗಾಯತ್ರಿ ಶೆಟ್ಟಿ, ಹೇಮಾವತಿ, ಮೈತ್ರಿ, ಸುಮಾ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.