ಸರ್ಕಾರಿ ಶಾಲೆಗಳ ಪುನಃಶ್ಚೇತನ ಅಗತ್ಯ

7
ರೋಟರಿ ಕ್ಲಬ್ ಅಧ್ಯಕ್ಷ ಕೆ.ಎಸ್.ಸುಬ್ರಹ್ಮಣ್ಯ ಶೆಟ್ಟಿ ಅಭಿಮತ

ಸರ್ಕಾರಿ ಶಾಲೆಗಳ ಪುನಃಶ್ಚೇತನ ಅಗತ್ಯ

Published:
Updated:
Deccan Herald

ಕೊಪ್ಪ: ‘ಸರ್ಕಾರಿ ಶಾಲೆಗಳನ್ನು ಪುನಃಶ್ಚೇತನಗೊಳಿಸುವ ಅಗತ್ಯ ಇದೆ’ ಎಂದು ಕೊಪ್ಪ ರೋಟರಿ ಕ್ಲಬ್ ಅಧ್ಯಕ್ಷ ಕೆ.ಎಸ್.ಸುಬ್ರಹ್ಮಣ್ಯ ಶೆಟ್ಟಿ ತಿಳಿಸಿದರು.

ಪಟ್ಟಣದ ಮೇಲಿನಪೇಟೆಯ ಆರೂರು ಲಕ್ಷ್ಮೀನಾರಾಯಣರಾವ್ ಸ್ಮಾರಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿಗೆ ಗುರುವಾರ ರೋಟರಿ ಕ್ಲಬ್ ವತಿಯಿಂದ ಸಹಾಯಧನದ ಚೆಕ್ ವಿತರಿಸಿ ಅವರು ಮಾತನಾಡಿದರು.

‘ನೂರಾರು ವರ್ಷಗಳ ಇತಿಹಾಸ ಇರುವ ರೋಟರಿ ಸಂಸ್ಥೆ ಸಮಾಜಮುಖಿ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿಕೊಂಡಿದೆ. ಕೊಪ್ಪ ರೋಟರಿ ಸಂಸ್ಥೆಯಿಂದ ಪಟ್ಟಣದ ಹಿಂದೂ ಸ್ಮಶಾನದ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದ್ದು, ಈ ದಿನ ಶ್ರಮದಾನದ ಮೂಲಕ ಸ್ಮಶಾನದ ಆವರಣ ಸ್ವಚ್ಛಗೊಳಿಸಲಾಗಿದೆ. ಸರ್ಕಾರಿ ಶಾಲೆಗಳನ್ನು ಉಳಿಸುವ ಪ್ರಯತ್ನಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ಶಾಲೆಯ ಅಭಿವೃದ್ಧಿಗೆ ಸಹಾಯಧನ ನೀಡಲಾಗಿದೆ. ಮಕ್ಕಳಿಗೆ ಸ್ಮಾರ್ಟ್ ಕ್ಲಾಸ್ ಸೌಲಭ್ಯ ಕಲ್ಪಿಸಲು ಸಂಸ್ಥೆಯಿಂದ ನೆರವು ನೀಡಲಾಗುವುದು. ಮುಂದಿನ ಪ್ರತಿವರ್ಷದಿಂದ ಶಾಲೆಗೆ ₹5 ಸಾವಿರ ವೈಯಕ್ತಿಕ ನೆರವು ನೀಡುತ್ತೇನೆ’ ಎಂದರು.

ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅರುಣ್ ಸಾಗರ್ ಮಾತನಾಡಿ, ‘ನಾವು ವಿದ್ಯೆ ಕಲಿತ ಈ ಸರ್ಕಾರಿ ಶಾಲೆಯನ್ನು ಪುನಃಶ್ಚೇತನಗೊಳಿಸುವ ಸಲುವಾಗಿ ಹಳೆ ವಿದ್ಯಾರ್ಥಿಗಳ ಸಂಘ ಸ್ಥಾಪಿಸಿದ್ದು, ದಾನಿಗಳಾದ ಕೌರಿ ಪ್ರಕಾಶ್, ಡಾ. ಹರೀಶ್, ಮಹೇಂದ್ರಕುಮಾರ್, ಸುಬ್ರಹ್ಮಣ್ಯ ಶೆಟ್ಟಿ, ಕಿರಣ್ (ಆರ್ಟ್ಸ್), ಕಮಾಲಿಯಾ, ಎಚ್.ಕೆ. ಪ್ರಶಾಂತ್ ಹೊಸೂರು, ಭಾಸ್ಕರ್ ಕಮ್ಮರಡಿ, ಇದಿನಬ್ಬ, ಹರೀಶ್ ಶಟ್ಟಿ, ಇಬ್ರಾಹಿಂ, ರಾಘವೇಂದ್ರ ಕಾಮತ್, ಸರಸ್ವತಿ ಟೀಚರ್, ನಂದೀಶ್, ಶ್ರೀಶ, ರಕ್ಷಿತ್ (ಫೈನಾನ್ಸ್) ಮೊದಲಾದವರ ಸಹಕಾರದೊಂದಿಗೆ ಪ್ರಸಕ್ತ ಸಾಲಿನಿಂದ ಎಲ್.ಕೆ.ಜಿ. ತರಗತಿಗಳನ್ನು ಆರಂಭಿಸಲಾಗಿದೆ. ಇದರಿಂದಾಗಿ ಶಾಲೆಯ ಮಕ್ಕಳ ಸಂಖ್ಯೆ 28ರಿಂದ 52ಕ್ಕೆ ಏರಿಕೆಯಾಗಿದೆ’ ಎಂದರು.

ರೋಟರಿ ಕ್ಲಬ್ ಕಾರ್ಯದರ್ಶಿ ಜೆ.ಎಂ.ಶ್ರೀಹರ್ಷ, ಮಾಜಿ ಅಧ್ಯಕ್ಷರಾದ ಮಾಂಗಿಲಾಲ್, ಹರೀಶ್ ಭಂಡಾರಿ, ರವೀಂದ್ರ ಪೈ, ರಾಘವೇಂದ್ರ ಭಟ್, ಉದಯ ಕುಮಾರ್, ಆಕ್ಸಿಸ್ ಬ್ಯಾಂಕ್ ಮ್ಯಾನೇಜರ್ ಚಂದ್ರಕಾಂತ್, ಕೆ.ಡಿ.ಪಿ. ಮಾಜಿ ಸದಸ್ಯ ಕೆ. ಆನಂದ್, ಎಸ್.ಡಿ.ಎಂ.ಸಿ. ಅಧ್ಯಕ್ಷೆ ಶಬ್ರೀನ್, ಮುಖಂಡರಾದ ಹರೀಶ್ ಶೆಟ್ಟಿ, ಮಂಜುನಾಥ್, ದಾಮೋದರ ಕಾಮತ್, ಸಂದೇಶ್, ವಿಕ್ರಮ್ ಶೆಟ್ಟಿ, ಸಂದೀಪ್ ಇದ್ದರು.

ಮುಖ್ಯಶಿಕ್ಷಕಿ ರಾಧಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಹಶಿಕ್ಷಕಿ ಸವಿತಾ ವಂದಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !