ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಟರಿಯಿಂದ ಅಂಗಾಂಗ ದಾನ ಜಾಗೃತಿ

ರೋಟರಿ ಕ್ಲಬ್ ಮತ್ತು ಇನ್ನರ್ ವೀಲ್ ಕ್ಲಬ್ ನೂತನ ಪದಾಧಿಕಾರಿಗಳ ಪದವಿ ಸ್ವೀಕಾರ ಸಮಾರಂಭ
Last Updated 26 ಜುಲೈ 2022, 6:31 IST
ಅಕ್ಷರ ಗಾತ್ರ

ನರಸಿಂಹರಾಜಪುರ: ರೋಟರಿ ಸಂಸ್ಥೆಯಿಂದ ಸಾರ್ವಜನಿಕರಲ್ಲಿ ಅಂಗಾಂಗ ದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ರೋಟರಿ ವಲಯ 6ರ ಲೆಫ್ಟಿನೆಂಟ್ ಎಂ.ಆರ್.ರಮೇಶ್ ತಿಳಿಸಿದರು.

ಇಲ್ಲಿನ ಸಹರಾ ಸಮುದಾಯ ಭವನದಲ್ಲಿ ಶನಿವಾರ ನಡೆದ ರೋಟರಿ ಕ್ಲಬ್ ಮತ್ತು ಇನ್ನರ್‌ವೀಲ್ ಕ್ಲಬ್ ನೂತನ ಪದಾಧಿಕಾರಿಗಳ ಪದವಿ ಸ್ವೀಕಾರ ಸಮಾರಂಭದಲ್ಲಿ ಅವರು ಮಾತನಾಡಿದರು. ದೇಶದಲ್ಲಿ ಕೇವಲ ಶೇ 1ರಷ್ಟು ಅಂಗಾಗ ದಾನ ಆಗುತ್ತಿದೆ ಎಂದರು. ಮಕ್ಕಳಲ್ಲಿ ಕಲಿಕಾ ನ್ಯೂನತೆ ಪತ್ತೆ ಹಚ್ಚಿ ಶಿಕ್ಷಕರಿಗೆ ಹಾಗೂ ಮಕ್ಕಳಿಗೆ ತರಬೇತಿ, ಜಲಸಂಪನ್ಮೂಲ ಭವಿಷ್ಯದ ಪೀಳಿಗೆ ಉಳಿಸುವ ನಿಟ್ಟಿನಲ್ಲಿ ನೀರನ್ನು ಸದ್ಬಳಕೆ ಮಾಡಿಕೊಳ್ಳುವ ಬಗ್ಗೆ, ಮಹಿಳಾ ಸಬಲೀಕರಣ ಕಾರ್ಯಕ್ರಮದಲ್ಲಿ ಅಶಕ್ತ ಮಹಿಳೆಯರಿಗೆ ಹೊಲಿಗೆ ತರಬೇತಿ ಮತ್ತು ಹೊಲಿಗೆ ಯಂತ್ರ ವಿತರಣೆ, ಪ್ಲಾಸ್ಟಿಕ್ ತ್ಯಾಜ್ಯ ಮರುಬಳಕೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.

ಪದವಿ ಸ್ವೀಕಾರ ಕಾರ್ಯಕ್ರಮ ನಡೆಸಿಕೊಟ್ಟು ಶಿವಮೊಗ್ಗ ಈಸ್ಟ್ ಕ್ಲಬ್‌ನ ಶಬರಿ ಕಡಿದಾಳ್ ಮಾತನಾಡಿ, ‘ಎಲ್ಲಾ ಮಹಿಳೆಯರಲ್ಲೂ ಸಾಮರ್ಥ್ಯವಿದ್ದು ಅದನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು. ಸಂಘ–ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವಾಗ ಅಡೆತಡೆಗಳು ಬಂದರೆ ಅದನ್ನು ಮೀರಿ ಮುನ್ನಡೆಯಬೇಕು’ ಎಂದರು.

ರೋಟರಿ ಸಂಸ್ಥೆಯ ನೂತನ ಅಧ್ಯಕ್ಷ ಈ.ಸಿ.ಜೋಯಿ ಅವರಿಗೆ ಮಾಜಿ ಜಿಲ್ಲಾ ಗವರ್ನರ್ ಡಿ.ಎಸ್.ರವಿ ಪದವಿ ಪ್ರದಾನ ಮಾಡಿ ಮಾತನಾಡಿದರು.

ಶಾಸಕ ಟಿ.ಡಿ. ರಾಜೇಗೌಡ, ಅಸಿಸ್ಟೆಂಟ್ ಗವರ್ನರ್ ಕೆ.ಟಿ.ವೆಂಕಟೇಶ್, ರೋಟರಿ ಸಂಸ್ಥೆಯ ನಿರ್ಗಮಿತ ಅಧ್ಯಕ್ಷ ಪಿ.ಪ್ರಭಾಕರ್, ನಿರ್ಗಮಿತ ಕಾರ್ಯದರ್ಶಿ ಕೆ.ಎಸ್.ರಾಜ್ ಕುಮಾರ್, ನೂತನ ಕಾರ್ಯದರ್ಶಿ ಜಿ.ಎ.ಶ್ರೀಕಾಂತ್, ಇನ್ನರ್ ವೀಲ್ ಕ್ಲಬ್ ನೂತನ ಅಧ್ಯಕ್ಷೆ ಡಾ.ಸ್ವಪ್ನಾಲಿ ಮಹೇಶ್, ನಿರ್ಗಮಿತ ಅಧ್ಯಕ್ಷೆ ಸೀಮಾ ಸದಾನಂದ, ನೂತನ ಕಾರ್ಯದರ್ಶಿ ಭವ್ಯಾ ಸಂತೋಷ್, ನಿರ್ಗಮಿತ ಕಾರ್ಯದರ್ಶಿ ಪೂರ್ಣಿಮಾ ಕಿರಣ್, ನವ್ಯ ವರ್ಗೀಸ್, ರಾಧಿಕಾ ಅರ್ಜುನ್, ಶೇಷಾಚಲ, ಜಗದೀಶ್, ಕಿರಣ್, ಎಸ್.ಎಸ್.ಶಾಂತಕುಮಾರ್, ವಿದ್ಯಾನಂದ, ರಮ್ಯಾ ಕೇಶವ್ ಇದ್ದರು. ಸಹಕಾರ ರತ್ನ ಪ್ರಶಸ್ತಿ ಪಡೆದ ವೈ.ಎಸ್.ಸುಬ್ರಹ್ಮಣ್ಯ, ರೋಟರಿ ಸಂಸ್ಥೆಯ ನೂತನ ಜಿಲ್ಲಾ ಗೌವರ್ನರ್ ಆಗಿ ಆಯ್ಕೆಯಾದ ಬಿ.ಸಿ.ಗೀತಾ ಅವರನ್ನು ಅಭಿನಂದಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT