ಬಾಳೆಹೊನ್ನೂರು: ಮಾಹಿತಿ ಹಕ್ಕು ಅಡಿ ಸಲ್ಲಿಸಿದ ಅರ್ಜಿ, ಮೇಲ್ಮನವಿಗಳನ್ನು ಜಿಲ್ಲಾಧಿಕಾರಿ ಕಚೇರಿ ಹಾಗೂ ಉಪ ವಿಭಾಗಾಧಿಕಾರಿಗಳ ಕಚೇರಿ ಸಿಬ್ಬಂದಿ ಕಡೆಗಣಿಸುತ್ತಿದ್ದಾರೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಸುರೇಶ್ ಹುಲ್ಸೆ ಆರೋಪಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿಗೆ ಮಾಹಿತಿ ಹಕ್ಕು ಅಡಿ ಅರ್ಜಿ ಸಲ್ಲಿಸಿದಾಗ ನಿರ್ದಿಷ್ಟ ಪುಟಗಳಿಗೆ ಖುದ್ದಾಗಿ ಕಚೇರಿಗೆ ಬಂದು ಹಣ ಕಟ್ಟುವಂತೆ ಸೂಚಿಸಿ ಹಿಂಬರಹ ನೀಡಲಾಗುತ್ತದೆ. ಆದರೆ ಮಾಹಿತಿ ಹಕ್ಕು ಕಾಯ್ದೆ ಅಡಿ ಈ ರೀತಿ ತಿಳಿಸಲು ಅವಕಾಶವಿಲ್ಲ. ಮಾಹಿತಿಗೆ ಸಂಬಂಧ ಜ.8ರಂದು ಪೋಸ್ಟಲ್ ಆರ್ಡರ್ ಪಡೆದು ಕಚೇರಿಗೆ ಖುದ್ದಾಗಿ ನೀಡಿದರೂ ಸಿಬ್ಬಂದಿಗಳು ಸ್ವೀಕೃತಿ ಪತ್ರವನ್ನೂ ನೀಡದೆ, ಮಾಹಿತಿಯನ್ನು ಇದೂವರೆಗೂ ಒದಗಿಸಿಲ್ಲ ಎಂದು ಪತ್ರಿಕಾ ಹೇಳಿಕೆಯಲ್ಲಿ ದೂರಿದ್ದಾರೆ.

ಉಪ ವಿಭಾಗಾಧಿಕಾರಿಗೆ ಸಲ್ಲಿಸಿದ ಮೇಲ್ಮನವಿಗಳನ್ನು ತಿಂಗಳು ಕಳೆದರೂ ಪರಿಗಣಿಸುತ್ತಿಲ್ಲ. ಎರಡು ಮೂರು ತಿಂಗಳ ನಂತರ ಒಂದು ದಿನದ ಅಂತರದಲ್ಲಿ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗಲು ತಿಳಿಸುತ್ತಿದ್ದಾರೆ. ಅಧಿಕಾರಿಗಳ ವರ್ತನೆ ಕುರಿತು ಮಾಹಿತಿ ಹಕ್ಕು ಆಯೋಗಕ್ಕೆ ದೂರು ನೀಡಲಾಗುವುದು ಎಂದು ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260324-126-1951114372

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.