ಮಕ್ಕಳಿಗೆ ಮೊಬೈಲ್ ಬದಲು ಪುಸ್ತಕ ನೀಡಿ: ಸುಧೀರ್ ಕುಮಾರ್ ಮುರೋಲಿ

7

ಮಕ್ಕಳಿಗೆ ಮೊಬೈಲ್ ಬದಲು ಪುಸ್ತಕ ನೀಡಿ: ಸುಧೀರ್ ಕುಮಾರ್ ಮುರೋಲಿ

Published:
Updated:
Prajavani

ಆಲ್ದೂರು: ಮಕ್ಕಳ ಕೈಗೆ ಮೊಬೈಲ್ ಬದಲು ಪುಸ್ತಕ ನೀಡಿ ಓದುವ ಅಭ್ಯಾಸ ರೂಢಿಸಬೇಕು ಎಂದು ವಕೀಲರಾದ ಸುಧೀರ್ ಕುಮಾರ್ ಮುರೋಲಿ ಪೋಷಕರಿಗೆ ಕಿವಿ ಮಾತು ಹೇಳಿದರು.

ಗುಲ್ಲನ್ ಪೇಟೆಯಲ್ಲಿರುವ ಆರ್.ಎಸ್.ಶಾಲೆಯ 20ನೇ ವಾರ್ಷಿಕ ಸಮಾರಂಭದಲ್ಲಿ ಮುಖ್ಯ ಅಥಿತಿಯಾಗಿ ಆಗಮಿಸಿದ್ದ ಅವರು ಮಾತನಾಡುತ್ತಾ, ಭಾರತೀಯ ಸಂಸ್ಕøತಿ ಇಡೀ ವಿಶ್ವದಲ್ಲಿ ಹೆಸರುವಾಸಿಯಾದ ಮತ್ತು ಬಳಕೆಗೆ ಯೋಗ್ಯವಾದ ಸಂಸ್ಕøತಿಯಾಗಿದ್ದು ನಮ್ಮ ಅಭಿಮಾನದ ಪ್ರತೀಕವಾಗಿದೆ. ಆದರೆ ನಾವುಗಳು ಪಾಶ್ಚಿಮಾತ್ಯ ಸಂಸ್ಕøತಿಗೆ ಮಾರುಹೋಗಿ ನಮ್ಮತನವನ್ನು ಕಳೆದುಕೊಳ್ಳುತ್ತಿದ್ದೇವೆ. ಇದೇ ಚಾಳಿಯನ್ನು ನಾವು ನಮ್ಮ ಮಕ್ಕಳಿಗೂ ಕೂಡ ಕಲಿಸುತ್ತಿದ್ದು ನಮ್ಮ ತಲೆಯ ಮೇಲೆ ನಾವೇ ಚಪ್ಪಡಿ ಎಳೆದುಕೊಳ್ಳುತ್ತಿದ್ದೇವೆ. ರಾಷ್ಟ್ರಕವಿ ಕವಿ ಕುವೆಂಪುರವರು ಹೇಳುವಂತೆ ‘ ಮಗು ಬೆಳೆಯುತ್ತ ವಿಶ್ವ ಮಾನವ ಬೆಳೆಯುತ್ತ ಅಲ್ಪ ಮಾನವ’ ಎಂಬಂತೆ ನಮ್ಮ ಜೀವನ ಸಾಗಿದೆ. ಇಂಥ ಗಂಭೀರವಾದ ವಿಚಾರಗಳ ಬಗ್ಗೆ ಎಲ್ಲರೂ ಗಮನ ಹರಿಸಬೇಕು.

ಇತ್ತ ಶಾಲೆಗಳಲ್ಲಿ ಕೂಡ ಪಾಠಗಳ ಜೊತೆಗೆ ಉತ್ತಮ ಸಂಸ್ಕøತಿ ಬೆಳೆಸುವ ಬಗ್ಗೆ ಇನ್ನೂ ಹೆಚ್ಚಿನ ಗಮನ ಹರಿಸಬೇಕು. ಬಹುತೇಕ ಶಾಲೆಗಳಲ್ಲಿ ಪೋಷಕರ ಒತ್ತಡಕ್ಕೆ ಮಣಿದು ಎಲ್ಲಾ ಮಕ್ಕಳನ್ನು ವೇದಿಕೆಗೆ ತರುವ ಪ್ರಯತ್ನದಲ್ಲಿ ಕೇವಲ ಗ್ರೂಪ್ ಡ್ಯಾನ್ಸ್‍ಗಳಿಗೆ ಒತ್ತು ನೀಡಲಾಗುತ್ತಿದೆ. ವೇದಿಕೆ ಮೇಲೆ ಬಂದರೆ ಮಾತ್ರ ನಮ್ಮ ಮಕ್ಕಳು ತಮ್ಮ ಪ್ರತಿಭೆ ತೋರಿಸುತ್ತಾರೆ ಎನ್ನುವ ತಪ್ಪು ಕಲ್ಪನೆ ಇಟ್ಟುಕೊಂಡು ಶಾಲೆಗಳ ಮೇಲೆ ಪೂಷಕರು ಒತ್ತಡ ಹೇರುತ್ತಿರುವುದು ಆತಂಕಕಾರಿ. ಸ್ವಾಗತ, ನಿರೂಪಣೆ, ವಂದನಾರ್ಪಣೆ, ಅಥಿತಿಗಳನ್ನು ವೇದಿಕೆಗೆ ಕರೆದು ತರುವುದು, ಹೂವು ನೀಡುವ ವಿಚಾರಗಳು ಕೂಡ ಮಕ್ಕಳ ಬುದ್ಧಿವಂತಿಗೆ ಮತ್ತು ಕ್ರಿಯಾಶೀಲತೆಗೆ ಸಹಕಾರಿಯಾಗುವುದರಿಂದ ಮಕ್ಕಳನ್ನು ವೇದಿಕೆ ಕಾರ್ಯಕ್ರಮಕ್ಕೆ ಸೀಮಿತಗೊಳಿಸುವುದರ ಬದಲು ಸರ ವಿಚಾರಗಳ ಬಗ್ಗೆ ಗಮನ ಹರಿಸಬೇಕು. ಸಣ್ಣ ವಿಚಾರಗಳೆಂದು ಕಡೆಗಣಿಸುವ ಬದಲು ಸಣ್ಣ ಕೆಲಸದಲ್ಲಿ ದೊಡ್ಡ ಸಾಧನೆ ಮಾಡುವ ಬಗ್ಗೆ ಆಲೋಚಿಸಬೇಕು. ಸರಳ ಜೀವನ, ತಾಳ್ಮೆ, ಬುದ್ಧಿವಂತಿಕೆ, ಪ್ರೀತಿ, ಸಹೃದಯಿ, ಪಿತೃವಾಕ್ಯ ಪರಿಪಾಲಕ ಶ್ರೀ ರಾಮನ ರೀತಿಯಲ್ಲಿ ನಮ್ಮ ಮಕ್ಕಳನ್ನು ಬೆಳೆಸಿ ದೇಶಕ್ಕೆ ಉತ್ತಮ ಸಂಸ್ಕಾರವುಳ್ಳ ಮಕ್ಕಳನ್ನು ಕೊಡುಗೆಯಾಗಿ ನೀಡಬೇಕು ಎಂದು ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿಗಳಾಗಿ ಸತ್ತಿಹಳ್ಳಿ ಗ್ರಾಮ ಪಂಚಾಯತಿಯ ಅಧ್ಯಕ್ಷ ಎಚ್.ಬಿ ರಮೇಶ್, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಎಂ.ಸಿ.ಹೂವಪ್ಪ, ಕ್ಲಸ್ಟರ್ ಮಟ್ಟದ ಸಂಪನ್ಮೂಲ ವ್ಯಕ್ತಿ ಪಿ.ಮಂಜುನಾಥ್, ಗುಲ್ಲನ್ ಪೇಟೆ ಜಾಮಿಯಾ ಮಸೀದಿಯ ಅಧ್ಯಕ್ಷ ಹಾತಾಜ್ ಮೊಹಮದ್ ಸಮೀವುಲ್ಲಾ, ಅಥಿತಿಗಳಾಗಿ ವೈ.ಸಿ.ಹರೀಶ್, ಕೃಷ್ಣೇಗೌಡ, ಮಾನಸಾ ಹರೀಶ್, ಹೆಚ್.ಎಂ.ವೀಣಾ ಭಾಗವಸಿದ್ದರು. ಆರ್.ಎಸ್ ಶಾಲೆಯ ಅಧ್ಯಕ್ಷ ಇರ್ಫಾನ್ ಆಲಿ ಅವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನೆರವೇರಿತು.

ಪ್ರಾಂಶುಪಾಲರಾದ ರುಕ್ಷಿಂದಾ ಇರ್ಫಾನ್ ಅವರು ಶಾಲೆಯ ವರದಿ ಓದಿದರು. ಸ್ವಾಗತವನ್ನು ಹುಸೇನ್ ಷರೀಫ್, ತಹರೀಸ್ ಅವರು ವಂದನಾರ್ಪಣೆ ಮಾಡಿದರು. ಸಭಾ ಕಾರ್ಯಕ್ರಮದ ನಂತರ ಶಾಲಾ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ ನೆರವೇರಿತು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !