ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕಶ್ರೀ ಪತ್ತಿನ ಸಹಕಾರ ಸಂಘಕ್ಕೆ ₹7.11 ಲಕ್ಷ ಲಾಭ

Last Updated 24 ಸೆಪ್ಟೆಂಬರ್ 2022, 5:08 IST
ಅಕ್ಷರ ಗಾತ್ರ

ಅಜ್ಜಂಪುರ: ‘ಪಟ್ಟಣದ ಕನಕಶ್ರೀ ಪತ್ತಿನ ಸಹಕಾರ ಸಂಘ 2021-22ನೇ ಸಾಲಿನಲ್ಲಿ ₹7.11 ಲಕ್ಷ ಲಾಭ ಗಳಿಸಿದೆ’ ಎಂದು ಸಂಘದ ಅಧ್ಯಕ್ಷ ಕೆ.ವಿ. ಅಣ್ಣಯ್ಯ ತಿಳಿಸಿದರು.

ಪಟ್ಟಣದಲ್ಲಿ ಶುಕ್ರವಾರ ನಡೆದ ಕನಕಶ್ರೀ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಅವರು ಮಾತನಾಡಿದರು.

ಸಂಘ, 1,309 ಸದಸ್ಯರನ್ನು ಹೊಂದಿದ್ದು, ₹3.07 ಕೋಟಿ ವ್ಯವಹಾರ ನಡೆಸಿದೆ. ₹82.12 ಲಕ್ಷ ಸಾಲ ನೀಡಿದೆ’ ಎಂದು ಮಾಹಿತಿ ನೀಡಿದರು.

ಸಂಘದ ಉಪಾಧ್ಯಕ್ಷ ಜಿ.ನಟರಾಜ್ ಮಾತನಾಡಿ, ‘ಸಂಘದಲ್ಲಿ ಸಾಲ ಪಡೆದವರು ನಿಗದಿತ ಅವಧಿಯಲ್ಲಿ ಮರುಪಾವತಿ ಮಾಡಬೇಕು. ಇತರ ಸದಸ್ಯರು ಸಂಘದಲ್ಲಿ ಠೇವಣಿ ಇರಿಸಬೇಕು. ಆ ಮೂಲಕ ಸಂಘದ ಅಭಿವೃದ್ಧಿಗೆ ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.

ನಿರ್ದೇಶಕ ಎಚ್. ಪುಟ್ಟಸ್ವಾಮಿ, ಆರ್. ಶ್ರೀನಿವಾಸ್, ಎ.ಜಿ. ಮಂಜುನಾಥ್, ಎ.ಟಿ. ಶ್ರೀನಿವಾಸ್, ಕೆ. ಸುಭಾಶ್, ಎಂ. ಭದ್ರಪ್ಪ ಮಾತನಾಡಿದರು.

ಸಂಘದ ನಿರ್ದೇಶಕಿ ಪಾರ್ವತಮ್ಮ ಮಹೇಶ್, ಪ್ರತಿಭಾ ಷಡಕ್ಷರಿ, ಮಂಜುಳಾ ಬಸವರಾಜಪ್ಪ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅನುಷಾ ಮನೋಜ್, ವಿಶ್ವಾಸ್ ಬೆಳಗೆರೆ ಇದ್ದರು.

ಸಂಘದ ಸಂಸ್ಥಾಪಕ ಎಸ್. ತಿಪ್ಪೇರುದ್ರಯ್ಯ ಹಾಗೂ ಈಚೆಗೆ ನಿವೃತ್ತರಾದ ಕಾರ್ಯ ನಿರ್ವಹಣಾಧಿಕಾರಿ ತಿಮ್ಮಯ್ಯ ಅವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT