ಕಾಫಿಗೆ ಬೆಂಬಲ ಬೆಲೆ ಘೋಷಣೆಗೆ ಸಂಸತ್ತಿನಲ್ಲಿ ಒತ್ತಾಯ: ಶೋಭಾ ಕರಂದ್ಲಾಜೆ

7

ಕಾಫಿಗೆ ಬೆಂಬಲ ಬೆಲೆ ಘೋಷಣೆಗೆ ಸಂಸತ್ತಿನಲ್ಲಿ ಒತ್ತಾಯ: ಶೋಭಾ ಕರಂದ್ಲಾಜೆ

Published:
Updated:
Deccan Herald

ಚಿಕ್ಕಮಗಳೂರು: ಕಾಫಿ ಬೆಳೆಗಾರರ ಸಾಲಗಳ ಕನಿಷ್ಠ ಒಂದು ವರ್ಷದ ಬಡ್ಡಿಮನ್ನಾ ಮಾಡಬೇಕು ಮತ್ತು ಪ್ರಸಕ್ತ ವರ್ಷ ಈ ಬೆಳೆಗಾರರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಸಂಸತ್ತಿನಲ್ಲಿ ಒತ್ತಾಯಿಸಿದ್ದಾರೆ.

ಸಂಸತ್‌ನಲ್ಲಿ ಮಂಗಳವಾರ ಕಾಫಿ ಬೆಳೆಗಾರರ ಸಂಕಷ್ಟಗಳ ಕುರಿತು ಮಾತನಾಡಿ, ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಸರ್ಕಾರ ತಕ್ಷಣ ಮಧ್ಯ ಪ್ರವೇಶಿಸಬೇಕು. ಕಾಫಿಗೆ ಕನಿಷ್ಠ ಬೆಂಬಲ ಬೆಲೆ ಘೋಷಿಸಬೇಕು. ಕಾಫಿ ಬೆಳೆಗಾರರ ಸಂಕಷ್ಟ ಪರಿಹರಿಸುವ ದೃಷ್ಟಿಯಿಂದ ಬೆಲೆ ಪರಿಹಾರ ಯೋಜನೆ ಜಾರಿಗೊಳಿಸಬೇಕು ಎಂದು ಕೋರಿದ್ದಾರೆ.

ಕಾಫಿ ಬೆಳೆ ಇಳುವರಿ ಕುಸಿತದಿಂದ ಬೆಳೆಗಾರರು ಕಂಗಾಲಾಗಿದ್ದಾರೆ. ಹವಾ ಮಾನ ವೈಪರೀತ್ಯ, ಉಷ್ಣಾಂಶ ಹೆಚ್ಚಳದಿಂದಾಗಿ ಇಳುವರಿ ಕುಸಿದಿದೆ. ಜಾಗತಿಕಮಟ್ಟದಲ್ಲಿ ಬೆಳೆಯ ಪ್ರಮಾಣ ಹೆಚ್ಚಿದ್ದು ಮಾರುಕಟ್ಟೆಯಲ್ಲಿ ಕಾಫಿ ಬೆಲೆ ಹತ್ತಿಕ್ಕುವ ಪ್ರವೃತ್ತಿ ಮುಂದುವರಿದಿದೆ. ಈ ಸಾಲಿನಲ್ಲಿ ಬೆಲೆ ತೀವ್ರ ಕುಸಿದಿದೆ. ಬೆಳೆ ಬೆಳೆಯಲು ತಗಲುವ ವೆಚ್ಚಕ್ಕಿಂತಲೂ ಕಾಫಿ ಬೆಳೆ ಬೆಲೆ ಕಡಿಮೆಯಾಗಿದ್ದು, ಬೆಳೆಗಾರರು ಆತಂಕದಲ್ಲಿದ್ದಾರೆ ಎಂದು ಸಂಸತ್ತಿನಲ್ಲಿ ಗಮನಸೆಳೆದಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !