ಭಾನುವಾರ, ನವೆಂಬರ್ 17, 2019
21 °C

ಸ್ವಾಮೀಜಿಯಿಂದ ಕೋರಣ್ಯ ಭಿಕ್ಷಾಟನೆ

Published:
Updated:
Prajavani

ಚಿಕ್ಕಮಗಳೂರು: ಹೊಸದುರ್ಗದ ಕನಕಗುರು ಮಠದ ಈಶ್ವರಾನಂದಪುರಿ ಸ್ವಾಮೀಜಿ ಅವರು ನಗರದಲ್ಲಿ ಇತ್ತೀಚೆಗೆ ಶ್ರಾವಣ ಮಾಸದ ವಾರ್ಷಿಕ ಕೋರಣ್ಯ ಭಿಕ್ಷೆ ಸಂಪ್ರದಾಯ ಆಚರಿಸಿದರು.

ಮಠದ ಭಕ್ತರ ಮನೆಗೆ ತೆರಳಿ ಕೋರಣ್ಯ ಭಿಕ್ಷಾಟನೆ ಮಾಡಿದರು. ಭಕ್ತರು ಸ್ವಾಮೀಜಿ ಪಾದಪೂಜೆ ಮಾಡಿದರು. ಫಲ, ಪುಷ್ಪ, ಕಾಣಿಕೆ ಅರ್ಪಿಸಿ ಆಶೀರ್ವಾದ ಪಡೆದರು.

ವಿಧಾನ ಪರಿಷತ್ತಿನ ಮಾಜಿ ಸದಸ್ಯೆ ಎ.ವಿ.ಗಾಯತ್ರಿ ಶಾಂತೇಗೌಡ ಅವರ ಮನೆಯಲ್ಲಿ ಈಶ್ವರಾನಂದಪುರಿ ಸ್ವಾಮೀಜಿ ಮಾತನಾಡಿ, ‘ಗುರುಪೀಠದ ಪದ್ಧತಿಯಂತೆ ಶ್ರಾವಣ ಮಾಸದಲ್ಲಿಯೇ ಕೋರಣ್ಯ ಬಿಕ್ಷಾಟನೆ ಮಾಡಬೇಕಿತ್ತು. ವಿವಿಧ ಕಾರ್ಯಕ್ರಮಗಳಿಂದಾಗಿ ಈ ಬಾರಿ ತಡವಾಗಿದೆ’ ಎಂದರು.

ಜಿಲ್ಲಾ ಕುರುಬರ ಸಂಘ ಅಧ್ಯಕ್ಷ ಕೆ.ಎಂ.ಮಂಜುನಾಥ್, ಖಜಾಂಚಿ ಎಚ್.ಎಸ್.ಪುಟ್ಟೇಗೌಡ, ಸದಸ್ಯರಾದ ಕಣಿವೆದಾಸರಹಳ್ಳಿ ವೆಂಕಟೇಶ್ ಇದ್ದರು.

ಪ್ರತಿಕ್ರಿಯಿಸಿ (+)