ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೃಂಗೇರಿ: ಮೈನವಿರೇಳಿಸಿದ ಜೀಪ್‌ ರ್‍ಯಾಲಿ

ಶೃಂಗೇರಿ ಅಡ್ವೆಂಚರ್ ಮತ್ತು ಮೋಟಾರ್ ಸ್ಪೋರ್ಟ್ಸ್‌ ಕ್ಲಬ್ ಅಯೋಜನೆ
Last Updated 13 ನವೆಂಬರ್ 2022, 6:33 IST
ಅಕ್ಷರ ಗಾತ್ರ

ಶೃಂಗೇರಿ: `ಮಲೆನಾಡಿನಲ್ಲಿ ಜೀಪ್ ರ್‍ಯಾಲಿ ನಡೆಸುವ ಸ್ಥಳೀಯ ಯುವಜನರ ಉತ್ಸಾಹ ಶ್ಲಾಘನೀಯ’ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ್ ಶೆಟ್ಟಿ ಹೇಳಿದರು.

ಶೃಂಗೇರಿ ತಾಲ್ಲೂಕಿನ ಕೊರಡುಕೊಲ್ಲಿನ ಹೆಲಿಪ್ಯಾಡ್‍ನಲ್ಲಿ ಶನಿವಾರ ಶೃಂಗೇರಿ ಅಡ್ವೆಂಚೆರ್ ಮತ್ತು ಮೋಟಾರ್ ಸ್ಪೋರ್ಟ್ಸ್‌ ಕ್ಲಬ್ ಅಯೋಜಿಸಿದ್ದ ಮಲೆನಾಡು ತ್ರಿಲ್ಸ್ ಮೋಟರ್ ರ್‍ಯಾಲಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಇದು ಆಕರ್ಷಕ ಕ್ರೀಡೆ. ಇಂತಹ ಕ್ರೀಡೆ ನಡೆಸುವಾಗ ಪರಿಸರ ಕಾಳಜಿ ಯುವಕರಲ್ಲಿ ಮೂಡಬೇಕು. ಇಂತಹ ಕ್ರೀಡೆಗಳಲ್ಲಿ ಪಾಲ್ಗೋಳ್ಳುವುದರಿಂದ ದೇಶಿಯ ಮತ್ತು ಅಂತರಾಷ್ಟ್ರೀಯ ಸ್ಪರ್ಧೆಗಳಲ್ಲೂ ಭಾಗವಹಿಸಬಹುದು' ಎಂದರು.

ರಾಜ್ಯ ಮಟ್ಟದ ಷಟಲ್ ಬಾಡ್ಮಿಂಟನ್‍ನ ಜೂನಿಯರ್ ಮಟ್ಟದ ಸಿಂಗಲ್ಸ್ ಮತ್ತು ಡಬಲ್ಸ್‌ನಲ್ಲಿ ಪ್ರಥಮ ಸ್ಥಾನ ಪಡೆದ ಉನ್ನತಿ ನವೀನ್ ಮೇಗೂರು ಅವರನ್ನು ಗೌರವಿಸಲಾಯಿತು.

ರ್‍ಯಾಲಿಯಲ್ಲಿ 78 ಜೀಪ್‍ಗಳು ಭಾಗವಹಿಸಿದ್ದವು. ನದಿ, ಗುಡ್ಡಗಾಡು ಪ್ರದೇಶ, ಹಳ್ಳ ಮತ್ತು ಗುಡ್ಡ ಹತ್ತುವ ಪ್ರದೇಶಗಳಲ್ಲಿ ಆಕರ್ಷಕವಾಗಿ ರ್‍ಯಾಲಿ ನಡೆಸಿದವು.

ಕಾರ್ಯಕ್ರಮದಲ್ಲಿ ಕಚ್ಚೋಡಿ ರಮೇಶ್, ಶೃಂಗೇರಿ ಅಡ್ವೆಂಚೆರ್ ಮತ್ತು ಮೋಟಾರ್ ಸ್ಪೋರ್ಟ್ಸ್‌ ಕ್ಲಬ್ ಅಧ್ಯಕ್ಷ ಪ್ರಸನ್ನ ಕುಮಾರ್, ಗೌರವ ಅಧ್ಯಕ್ಷ ಡಿ.ಮಹೇಶ್, ಕಾರ್ಯದರ್ಶಿ ಚೇತನ್ ಕುಮಾರ್, ಸದಸ್ಯರಾದ ಭರತ್ ಗಿಣಿಕಲ್, ವಿಶ್ವಾಸ್ ಹೆಗ್ಡೆ, ಭಗವಾನ್ ಗಿಣಿಕಲ್, ಶ್ರೀವತ್ಸ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT