ಶೃಂಗೇರಿ: ‘ಕಾರ್ಮಿಕರಿಂದ ಕೈಗಾರಿಕೆಗಳು ಬೆಳೆಯುತ್ತಿವೆ. ರಸ್ತೆ, ಸೇತುವೆ, ಶಾಲೆ, ಆಸ್ಪತ್ರೆಗಳು ಕಾರ್ಮಿಕರ ಶ್ರಮದ ಫಲವಾಗಿವೆ’ ಎಂದು ಪೊಲೀಸ್ ಅಧಿಕಾರಿ ಮೋಹನ್ ರಾಜಣ್ಣ ಹೇಳಿದರು.

ಶೃಂಗೇರಿಯ ಕನ್ನಡ ಭವನದಲ್ಲಿ ಕಾರ್ಮಿಕ ಮಿತ್ರ ಬಳಗದಿಂದ ಆಯೋಜಿಸಿದ್ದ ಕಾರ್ಮಿಕ ದಿನಾಚರಣೆ, ಆಂಬುಲೆನ್ಸ್ ವಾಹನ ಚಾಲಕರು ಮತ್ತು ಕಟ್ಟಡ ಕಾರ್ಮಿಕರಿಗೆ ಗೌರವ ಸಮರ್ಪಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಅಭಿವೃದ್ಧಿಗೆ ಶ್ರಮವೇ ಮೂಲಾಧಾರ. ರೈತನು ಹೊಲದಲ್ಲಿ ದುಡಿದಾಗ ಅನ್ನ ಸಿಗುತ್ತದೆ. ಕಾರ್ಮಿಕನು ಕಟ್ಟಡ ನಿರ್ಮಿಸಿದಾಗ ಮನೆಗಳು ನಿರ್ಮಾಣವಾಗುತ್ತವೆ. ಶ್ರಮ ಜೀವಿಗಳು ಸಮಾಜದ ಅವಿಭಾಜ್ಯ ಅಂಗ. ಅವರನ್ನು ಗೌರವದಿಂದ ಕಾಣಬೇಕು’ ಎಂದರು.

ಶಾರದಾ ಮಠದ ಗುರುಗಳ ಆಪ್ತ ಸಹಾಯಕ ಕೃಷ್ಣಮೂರ್ತಿ ಭಟ್ ಮಾತನಾಡಿ, ‘ಕಾರ್ಮಿಕರ ಹಕ್ಕು, ಆರೋಗ್ಯ ಮತ್ತು ಸುರಕ್ಷತೆಗೆ ಸರ್ಕಾರ ಹಾಗೂ ಸಮಾಜ ಒತ್ತು ನೀಡಬೇಕು. ಸಮಾನ ವೇತನ, ಮಕ್ಕಳ ಶಿಕ್ಷಣ ಮತ್ತು ಭದ್ರತೆಗಾಗಿ ಎಲ್ಲರೂ ಕೈಜೋಡಿಸಬೇಕು. ಬಸವಣ್ಣನವರ ‘ಕಾಯಕವೇ ಕೈಲಾಸ’ ಸಂದೇಶದಂತೆ ಶ್ರಮಕ್ಕೆ ಗೌರವ ನೀಡುವುದು ನಮ್ಮ ಕರ್ತವ್ಯ’ ಎಂದರು.

ತಾಲ್ಲೂಕಿನ ಆಂಬುಲೆನ್ಸ್ ಚಾಲಕ ಹಾಗೂ ಕಟ್ಟಡ ಕಾರ್ಮಿಕರಾದ ಸುರೇಶ್, ದುರ್ಗೇಶ್, ವಸಂತ ಕುಮಾರ್, ಅರುಣ, ನಾಗೇಂದ್ರ ಶೆಟ್ಟಿ, ಅಶ್ವಿನ್, ಜೆ. ರಾಜೇಶ್ ಶೆಟ್ಟಿ, ಗಿರೀಶ್ ಅವರನ್ನು ಶಾರದಾ ಮಠದ ಗುರುಗಳ ಆಪ್ತ ಸಹಾಯಕ ಕೃಷ್ಣಮೂರ್ತಿ ಭಟ್ ಗೌರವಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷೆ ಶೈಲಜಾ ರತ್ನಾಕರ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿದರು. ಡಾ. ಲಕ್ಷ್ಮೀನಾರಾಯಣ್ ಅವರು, ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಕಾರ್ಮಿಕ ಮಿತ್ರ ಬಳಗದ ಅಧ್ಯಕ್ಷ ಶ್ರೀಕಾಂತ್ ಎಸ್.ಕೆ., ಮಾಜಿ ಅಧ್ಯಕ್ಷ ರಮೇಶ್ ಶೂನ್ಯ, ರಕ್ತದಾನಿ ಬಳಗದ ಮುಖ್ಯಸ್ಥ ಪ್ರಶಾಂತ್ ಪೂಜಾರಿ, ಪತ್ರಕರ್ತರ ಸಂಘದ ಅಧ್ಯಕ್ಷ ರಂಜಿತ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಆಗುಂಬೆ ಗಣೇಶ್ ಹೆಗ್ಡೆ, ಸುಮಂಗಲಿ ಆನಂದ ಸ್ವಾಮಿ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-126-1703246061

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.