ಶೃಂಗೇರಿ: ಕೆರೆಕಟ್ಟೆ ಗ್ರಾಮ ಪಂಚಾಯಿತಿಯ ಸುಂಕದಮಕ್ಕಿ ಗ್ರಾಮದಲ್ಲಿ ಒಂದು ಕುಟುಂಬವೊಂದರ ವಿವಾದ ಸಂಬಂಧ ಸೊಪ್ಪಿನಬೆಟ್ಟದಲ್ಲಿ ಹಿಂದೆ ಮಂಜೂರಾತಿ ಆಗಿದ್ದ ಹಕ್ಕುಪತ್ರವನ್ನು ಉಪವಿಭಾಗಧಿಕಾರಿ ರದ್ದು ಮಾಡಿದ್ದಲ್ಲದೇ, ಉಳಿದ ಎಲ್ಲಾ ಮಂಜೂರಾತಿಗಳನ್ನು ರದ್ದು ಪಡಿಸಲು ಮುಂದಾಗಿರುವುದನ್ನು ಕೂಡಲೇ ಜಿಲ್ಲಾಧಿಕಾರಿ ತಡೆಹಿಡಿಯಬೇಕು' ಎಂದು ಮಲೆನಾಡು ನಾಗರಿಕ ಹಕ್ಕುಗಳ ಹೋರಾಟ ಸಮಿತಿಯ ಅಧ್ಯಕ್ಷ ಅಂಬ್ಲೂರು ರಾಮಕೃಷ್ಣ ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಈಗಾಗಲೇ ರದ್ದು ಪಡಿಸಿರುವ ಹಕ್ಕುಪತ್ರವನ್ನು ಪುನಃ ನೀಡಬೇಕು. ಇಂತಹ ಸಮಸ್ಯೆಗಳ ಅಧಾರದ ಮೇಲೆ ಮುಂದೆ ಇಡೀ ತಾಲ್ಲೂಕಿನಲ್ಲಿ ಸಮಸ್ಯೆ ಉಂಟಾಗುತ್ತದೆ. ಇದಕ್ಕೆ ಸರ್ಕಾರ ಬೆಂಬಲ ನೀಡಬಾರದು. ಇಂತಹ ಕಠಿಣ ಸಂದರ್ಭದಲ್ಲಿ ನಮ್ಮ ಹೋರಾಟ ಸಮಿತಿಯು ರೈತರ ಪರವಾಗಿ ನಿಲ್ಲುತ್ತದೆ. ಆದರಿಂದ ಜೂನ್ 1ರಂದು ಶೃಂಗೇರಿಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-126-206051150

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.