ಹಾಸನ: ಶೃಂಗೇರಿ ಶಾಸಕ ಸ್ಥಾನದ ವಿವಾದಕ್ಕೆ ಸುಪ್ರೀಂ ಕೋರ್ಟ್ ತೆರೆ ಎಳೆದ ಬೆನ್ನಲ್ಲೇ ಶಾಸಕ ಟಿ.ಡಿ. ರಾಜೇಗೌಡ ಗುರುವಾರ ನಗರದ ಶಕ್ತಿ ದೇವತೆ ಪುರದಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ಹರಕೆ ತೀರಿಸಿದರು.

ಶೃಂಗೇರಿ ಕ್ಷೇತ್ರದ ಶಾಸಕ ಸ್ಥಾನ ಹಾವು-ಏಣಿ ಆಟದಂತೆ ಕಾಂಗ್ರೆಸ್, ಬಿಜೆಪಿ, ಮತ್ತೆ ಕಾಂಗ್ರೆಸ್ ಪಾಲಾಗಿದ್ದು, ಇಡೀ ದೇಶದ ಗಮನ ಸೆಳೆದಿತ್ತು. ಚುನಾವಣಾ ಫಲಿತಾಂಶ, ಹೈಕೋರ್ಟ್ ತೀರ್ಪು, ಬಳಿಕ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದ ಪ್ರಕರಣದಲ್ಲಿ ಇದೀಗ ತೀರ್ಪು ರಾಜೇಗೌಡ ಅವರ ಪರ ಬಂದಿರುವುದರಿಂದ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.

ಸುಪ್ರೀಂ ಕೋರ್ಟ್ನಲ್ಲಿ ಅಂತಿಮ ವಿಚಾರಣೆಗೂ ಮುನ್ನ ರಾಜೇಗೌಡ ಅವರು ಪುರದಮ್ಮ ಕ್ಷೇತ್ರಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿ ದೆಹಲಿಗೆ ತೆರಳಿದ್ದರು. ‘ನ್ಯಾಯ ಸಿಕ್ಕರೆ ಮತ್ತೆ ನಿನ್ನ ಸನ್ನಿಧಿಗೆ ಬಂದು ಹರಕೆ ತೀರಿಸುತ್ತೇನೆ’ ಎಂದು ದೇವಿಗೆ ಹರಕೆ ಹೊತ್ತಿದ್ದರು.

ಸುಪ್ರೀಂ ಕೋರ್ಟ್ನಲ್ಲಿ ರಾಜೇಗೌಡರ ಪರ ತೀರ್ಪು ಬಂದಿದ್ದು, ಬುಧವಾರ ರಾತ್ರಿಯೇ ಬೆಂಗಳೂರಿಗೆ ವಾಪಸಾದ ರಾಜೇಗೌಡ, ಗುರುವಾರ ಬೆಳಿಗ್ಗೆ ನೇರವಾಗಿ ಕ್ಷೇತ್ರಕ್ಕೆ ಭೇಟಿ ನೀಡಿದರು.

ಕ್ಷೇತ್ರಕ್ಕೆ ತೆರಳುವ ಮುನ್ನ ಪತ್ನಿ, ಪುತ್ರ ರಾಜ್ದೇವ್ ಹಾಗೂ ಸೊಸೆಯೊಂದಿಗೆ ಪುರದಮ್ಮ ದೇವಸ್ಥಾನಕ್ಕೆ ತೆರಳಿದ ಶಾಸಕರು, ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನದ ಅರ್ಚಕರು ಪೂರ್ಣಕುಂಭ ಸ್ವಾಗತ ನೀಡಿದರು.

‘ಪುರದಮ್ಮನ ಮೇಲಿನ ನಂಬಿಕೆಯೇ ನನಗೆ ಶಕ್ತಿ ನೀಡಿತ್ತು. ಇಂದು ನ್ಯಾಯ ಸಿಕ್ಕಿದೆ. ಮೊದಲು ದೇವಿಗೆ ನಮಿಸಿ ನಂತರವೇ ಕ್ಷೇತ್ರದ ಜನರ ಬಳಿ ಹೋಗುತ್ತೇನೆ’ ಎಂದು ರಾಜೇಗೌಡ ಭಾವುಕರಾಗಿ ನುಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-36-876688302

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.