ಶೃಂಗೇರಿ: ‘ಮೆಣಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂತೂರು ಹಾಗೂ ಹೇರೂರ್ ಗ್ರಾಮಗಳಲ್ಲಿ ಜಲಜೀವನ್ ಕಾಮಗಾರಿ ನಡೆದು 2 ವರ್ಷಗಳು ಕಳೆಯುತ್ತ ಬಂದಿದ್ದು, ನೀರಿನ ಸಂಪರ್ಕ ನೀಡದೇ ಅಧಿಕಾರಿಗಳು ಜನಸಾಮಾನ್ಯರನ್ನು ಸತಾಯಿಸುತ್ತಿದ್ದಾರೆ. ವಾರದೊಳಗೆ ನೀರಿನ ಸಂಪರ್ಕ ನೀಡದಿದ್ದಲ್ಲಿ, ಶೃಂಗೇರಿಯಿಂದ ಜಯಪುರ ಮಾರ್ಗದ ರಸ್ತೆ ತಡೆದು ಪ್ರತಿಭಟನೆ ನಡೆಸುತ್ತೇವೆ’ ಎಂದು ಮಲೆನಾಡು ಮತ್ತು ಕರಾವಳಿ ಜನಪರ ಒಕ್ಕೂಟದ ರಾಜ್ಯ ಸಂಚಾಲಕ ಅನಿಲ್ ಹೊಸಕೊಪ್ಪ ಎಚ್ಚರಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ‘7 ವರ್ಷದ ಹಿಂದೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಜಲಜೀವನ್ ಮಿಷನ್ ಜಾರಿಗೊಳಿಸಿ, 2024ರೂಳಗೆ ದೇಶದ ಗ್ರಾಮೀಣ ಪ್ರದೇಶದ ಪ್ರತಿ ಮನೆಗೆ ನಲ್ಲಿ ಸಂಪರ್ಕ ನೀಡಿ ನೀರು ಪೂರೈಸುವ ಗುರಿ ಹೊಂದಿತ್ತು. ನೀರು ಪೂರೈಸುವ ಜತೆಗೆ ನೀರಿನ ಮೂಲಗಳ ರಕ್ಷಣೆ, ಮಳೆ ನೀರು ಸಂಗ್ರಹ ಇತ್ಯಾದಿಗಳ ಕಡೆಗೂ ಗಮನ ಹರಿಸುವುದು ಯೋಜನೆಯ ಭಾಗವಾಗಿದೆ. ಆದರೆ, ಯೋಜನೆ ಸಮರ್ಪಕವಾಗಿ ಅನುಷ್ಠಾನಕ್ಕೆ ಬಾರದೆ ವಿಫಲಗೊಳ್ಳುತ್ತಿರುವುದು ವಿಪರ್ಯಾಸದ ಸಂಗತಿ ಎಂದರು.

ಈಗಾಗಲೇ ಇರುವ ನೀರಿನ ಪೈಪ್ಲೈನ್ ಮಧ್ಯೆ ಜಲಜೀವನ್ ಯೋಜನೆಯ ಪೈಪ್ ಹಾಕಲಾಗಿದ್ದು, ಬಹುತೇಕ ಕಡೆ ನೀರು ಪೊರೈಕೆಯಾಗಿಲ್ಲ. ಎಲ್ಲೆಂದರಲ್ಲಿ ಪೈಪ್ ಅಳವಡಿಸಿದ್ದರಿಂದ ರಸ್ತೆಗಳು ಹಾಳಾಗಿದ್ದರೆ, ಅನೇಕ ಕಡೆ ರಸ್ತೆ ಅಗೆದು ಹಾಗೇ ಬಿಡಲಾಗಿದೆ. ನೀರಿನ ಮೂಲವೇ ಇಲ್ಲದ ಕಡೆಯೂಟ್ಯಾಂಕ್ ನಿರ್ಮಿಸಿ, ಪೈಪ್ ಹಾಕಲಾಗಿದೆ. ಹಣಕ್ಕಾಗಿ ಎಲ್ಲಾ ಕಡೆ ಪೈಪ್ಲೈನ್ ಅಳವಡಿಸಿ, ಸರ್ಕಾರಕ್ಕೆ ಹಾಗೂ ಜನಸಾಮಾನ್ಯರಿಗೆ ದ್ರೋಹ ಬಗೆದಿದ್ದಾರೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು, ತಹಶೀಲ್ದಾರ್, ಕಾರ್ಯ ನಿರ್ವಾಹಣಾಧಿಕಾರಿ, ಎಂಜಿನಿಯರ್ ಎಲ್ಲರೂ ಬಂದು ಸಮಸ್ಯೆ ಸರಿಪಡಿಸುವವರೆಗೂ ರಸ್ತೆ ತಡೆ ಅನಿವಾರ್ಯವಾಗುತ್ತದೆ. ಈ ಹಿಂದೆ ಜಲಜೀವನ್ ಕಾಮಗಾರಿ ಸರಿಯಾಗಿ ನಡೆದಿಲ್ಲ ಎಂದು ಪತ್ರ ನೀಡಿದ್ದರೂ, ಇದುವರೆಗೂ ಕ್ರಮ ತೆಗೆದುಕೊಂಡಿಲ್ಲ. ಅಧಿಕಾರಿಗಳು ಯಾರೇ ತಪ್ಪು ಎಸಗಿದ್ದರೂ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-126-1194983804

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.