ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮನಸ್ಸು ಒಂದುಗೂಡಿಸುವ ಸಂಗೀತ’

ಕನ್ನಡ ಜಾನಪದ ಪರಿಷತ್ ಹರಿಹರಪುರ ಹೋಬಳಿ ಘಟಕದ ಪದಗ್ರಹಣ
Last Updated 5 ಸೆಪ್ಟೆಂಬರ್ 2022, 2:42 IST
ಅಕ್ಷರ ಗಾತ್ರ

ಕೊಪ್ಪ: ‘ಸಂಗೀತ ಒಡೆದ ಮನಸುಗಳನ್ನ ಒಂದುಗೂಡಿಸುತ್ತದೆ. ಜಾನಪದ ಸಂಗೀತದಿಂದ ಮನಸಿಗೆ ಉಲ್ಲಾಸ ಸಿಗುತ್ತದೆ’ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

ತಾಲ್ಲೂಕಿನ ನಿಲುವಾಗಿಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಕನ್ನಡ ಜಾನಪದ ಪರಿಷತ್ ಹರಿಹರಪುರ ಹೋಬಳಿ ಘಟಕದ ಪದಗ್ರಹಣ ಹಾಗೂ ತಾಲ್ಲೂಕು ಮಟ್ಟದ ಭಜನಾ ಮತ್ತು ರಾಗಿ ಬೀಸುವ ಹಾಡು, ಸಮೂಹ ಜಾನಪದ ಗೀತೆ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸಂಗೀತಕ್ಕೆ ಹಲವಾರು ರೋಗಗಳನ್ನು ಗುಣಪಡಿಸುವ ಶಕ್ತಿ ಇದೆ. ಸಂಗೀತ ಸಂಸ್ಕಾರ ಕಲಿಸುತ್ತದೆ. ಇಂತಹ ಜಾನಪದ ಕಾರ್ಯಕ್ರಮಗಳ ಆಯೋಜನೆಯಿಂದ ಗ್ರಾಮೀಣ ಪ್ರತಿಭೆಗಳಿಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ’ ಎಂದು ತಿಳಿಸಿದರು.

ಹರಿಹರಪುರ ಹೋಬಳಿ ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಕೊಡ್ತಾಳ್ ನಾಗಪ್ಪ ಅಧ್ಯಕ್ಷತೆ ವಹಿಸಿದ್ದರು. ನಿಲುವಾಗಿಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಸಿಂಗಪ್ಪ, ಉಪಾಧ್ಯಕ್ಷ ಕೆ.ಟಿ.ಮಿತ್ರ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶಶಿಕುಮಾರ್, ಮುಖ್ಯ ಶಿಕ್ಷಕ ಪ್ರಮೋದ್, ಪದ್ಮನಾಭ್, ಗಿರೀಶ್, ಸುಮಿತ್ರ ನಾರಾಯಣ್, ಪ್ರಮೋದ್, ಇದ್ದರು.

ಶಿಕ್ಷಕರ ದಿನ ಇಂದು

ಕೊಪ್ಪ: ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನಾಚರಣೆ ಪ್ರಯುಕ್ತ ವಿವಿಧ ಇಲಾಖೆ, ಸಂಘ ಸಂಸ್ಥೆಗಳ ಆಶ್ರಯದಲ್ಲಿ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಸಮಾರಂಭವನ್ನು ಪಟ್ಟಣದ ಪುರಭವನದಲ್ಲಿ ಸೆ.5 ರಂದು ಬೆಳಿಗ್ಗೆ 10.30ಕ್ಕೆ ಆಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT