ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು | ಕೋವಿಡ್‌ನಿಂದ ಇಬ್ಬರು ಸಾವು, 62 ಮಂದಿಗೆ ಸೋಂಕು

ಕೋವಿಡ್‌: ಸಾವಿನ ಸಂಖ್ಯೆ 14ಕ್ಕೆ ಏರಿಕೆ- ಸಕ್ರಿಯ ಪ್ರಕರಣ 261
Last Updated 23 ಜುಲೈ 2020, 15:53 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕೋವಿಡ್‌ನಿಂದಾಗಿ ಗುರುವಾರ ಇಬ್ಬರು ಸಾವಿಗೀಡಾಗಿದ್ದಾರೆ, ಸಾವಿನ ಸಂಖ್ಯೆ 14ಕ್ಕೆ ಏರಿದೆ. 62 ಮಂದಿಗೆ ಕೋವಿಡ್‌ ದೃಢಪಟ್ಟಿದ್ದು, 55 ಮಂದಿ ಗುಣಮುಖರಾಗಿ ಕೋವಿಡ್‌ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಚಿಕ್ಕಮಗಳೂರಿನ ಶಂಕರಪುರದ 72 ವರ್ಷದ ಪುರುಷ ಹಾಗೂ ಕೊಪ್ಪ ತಾಲ್ಲೂಕಿನ ಬಿಂತರವಳ್ಳಿ ಬಾಳಗಡಿಯ 70 ವರ್ಷದ ಪುರುಷ ಮೃತಪಟ್ಟವರು.

ತಾಲ್ಲೂಕುವಾರು ಚಿಕ್ಕಮಗಳೂರು– 21, ಕಡೂರು– 20, ಕೊಪ್ಪ–7, ಶೃಂಗೇರಿ– 6, ತರೀಕೆರೆ– 4, ಎನ್‌.ಆರ್.ಪುರ ಮತ್ತು ಮೂಡಿಗೆರೆ ತಲಾ ಇಬ್ಬರಿಗೆ ಒಬ್ಬರಿಗೆ ಸೋಂಕು ಪತ್ತೆಯಾಗಿದೆ. ಸೋಂಕಿತರನ್ನು ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾಫಿನಾಡಿನಲ್ಲಿ ಸಕ್ರಿಯ ಪ್ರಕರಣಗಳು 261 ಇವೆ. ಈವರೆಗಿನ ಒಟ್ಟಾರೆ ಪ್ರಕರಣಗಳ ಸಂಖ್ಯೆ 546ಕ್ಕೆ ತಲುಪಿದೆ. ಜಿಲ್ಲೆಯ ವಿವಿಧೆಡೆ ಪ್ರಸ್ತುತ 238 ಪ್ರದೇಶಗಳನ್ನು ನಿರ್ಬಂಧಿತ ವಲಯ (ಟೈನ್ಮೆಂಟ್‌ ಜೋನ್‌) ಎಂದು ಘೋಷಿಸಲಾಗಿದೆ. ಈವರೆಗೆ 216 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಒಬ್ಬರಿಗೆ ಕೋವಿಡ್ ದೃಢ
ನರಸಿಂಹರಾಜಪುರ:
ತಾಲ್ಲೂಕಿನ ನಾಗಮಕ್ಕಿ ಗ್ರಾಮದ ವ್ಯಾಪ್ತಿಯ 36 ವರ್ಷದ ಪುರುಷನಿಗೆ ಕೋವಿಡ್‌ ಸೋಂಕು ತಗಲಿರುವುದು ದೃಢಪಟ್ಟಿದೆ.

ಪಟ್ಟಣದಲ್ಲಿ ಕ್ಷೌರಿಕ ವೃತ್ತಿ ಮಾಡುತ್ತಿದ್ದ ನಾಲ್ಕು ಜನರಿಗೆ ಕೋವಿಡ್‌ ಪಾಸಿಟಿವ್ ಬಂದ ಕಾರಣ ಚಿಕ್ಕಮಗಳೂರು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇವರಿಗೆ ಗುರುವಾರ ಮರು ಪರೀಕ್ಷೆಗೊಳಪಡಿಸಿದಾಗ ವರದಿ ನೆಗೆಟಿವ್ ಬಂದಿದ್ದು, ಮನೆಗೆ ವಾಪಸಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT