ಚಿಕ್ಕಮಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರುಎಣಿಕೆಯಲ್ಲಿ ಕಾಂಗ್ರೆಸ್ನ ಟಿ.ಡಿ. ರಾಜೇಗೌಡ ಅವರು ಶಾಸಕ ಸ್ಥಾನ ಕಳೆದುಕೊಂಡಿದ್ದು, ಡಿ.ಎನ್. ಜೀವರಾಜ್ ಅವರಿಗೆ ಗೆಲುವು ಸಂದಿದೆ ಎಂದು ಚುನಾವಣಾಧಿಕಾರಿ ಭಾನುವಾರ ರಾತ್ರಿ ಘೋಷಿಸಿದ್ದಾರೆ.

2023ರಲ್ಲಿ ಸಿಂಧುವಾಗಿದ್ದ 1,540 ಮತಗಳಲ್ಲಿ ಶನಿವಾರ ಮರುಎಣಿಕೆ ವೇಳೆ 255 ಮತಗಳು ಅಸಿಂಧುವಾಗಿವೆ. ತಾಂತ್ರಿಕವಾಗಿ ಬಿಜೆಪಿಯ ಡಿ.ಎನ್. ಜೀವರಾಜ್ ಅವರು 52 ಮತಗಳ ಮುನ್ನಡೆ ಸಾಧಿಸಿದ್ದಾರೆ.

ಶನಿವಾರ ದಿನವಿಡೀ ನಡೆದ ಗೊಂದಲಗಳ ನಡುವೆ ಭಾನುವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಮತ ಎಣಿಕೆ ಪ್ರಕ್ರಿಯೆಯನ್ನು ಅಧಿಕಾರಿಗಳು ಪೂರ್ಣಗೊಳಿಸಿದರು. ‘2023ರ ಎಣಿಕೆ ವೇಳೆ ಮಾನ್ಯವಾಗಿದ್ದ ಮತಗಳ ಪೈಕಿ ಟಿ.ಡಿ. ರಾಜೇಗೌಡ ಅವರ 255 ಮತಗಳು ಈಗ ಅಮಾನ್ಯಗೊಂಡವು. ಡಿ.ಎನ್.ಜೀವರಾಜ್ ಅವರಿಗೆ ಬಂದಿದ್ದ ಮತಗಳ ಪೈಕಿ 2 ಮತಗಳು ಅಮಾನ್ಯಗೊಂಡವು. ಇದರಿಂದಾಗಿ 52 ಮತಗಳ ಅಂತರದಲ್ಲಿ ಜೀವರಾಜ್ ಜಯ ಸಾಧಿಸಿದ್ದಾರೆ’ ಎಂದು ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು.

ಎಣಿಕೆ ಪ್ರಕ್ರಿಯೆ ಮುಗಿದ ಬಳಿಕ ಮಾಹಿತಿ ನೀಡಿದ ಚುನಾವಣಾಧಿಕಾರಿ ಗೌರವಶೆಟ್ಟಿ, ‘2023ರ ಮತ ಎಣಿಕೆ ವೇಳೆ ಚಲಾವಣೆಯಾಗಿದ್ದ 1,822 ಅಂಚೆ ಮತಗಳ ಪೈಕಿ ಬಿಜೆಪಿ ಅಭ್ಯರ್ಥಿ ಜೀವರಾಜ್ ಅವರಿಗೆ 692 ಮತಗಳು, ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ. ರಾಜೇಗೌಡ ಅವರಿಗೆ 569 ಮತಗಳು ಲಭಿಸಿದ್ದವು. ಆದರೆ, ಶನಿವಾರ ನಡೆದ ಪರಿಶೀಲನೆ ಮತ್ತು ಮರು ಎಣಿಕೆಯ ಬಳಿಕ ಜೀವರಾಜ್ ಅವರ ಮತಗಳು 690 ಆಗಿದ್ದರೆ. ರಾಜೇಗೌಡ ಅವರ ಮತಗಳು 314ಕ್ಕೆ ಇಳಿದಿವೆ. ರಾಜೇಗೌಡ ಅವರಿಗೆ 255 ಮತಗಳು ಕಡಿಮೆಯಾಗಿವೆ’ ಎಂದು ಹೇಳಿದರು.

‘ನ್ಯಾಯಾಲಯದ ನಿರ್ದೇಶನದಂತೆ ಪರಿಶೀಲನೆ ಮತ್ತು ಮರುಎಣಿಕೆ ಪ್ರಕ್ರಿಯೆ ನಡೆಸಿ ಮತಪತ್ರಗಳನ್ನು ಮತ್ತೆ ಸ್ಟ್ರಾಂಗ್ ರೂಮಿನಲ್ಲಿ ಇರಿಸಿ ಸೀಲ್ ಮಾಡಲಾಗಿದೆ. ಮರು ಎಣಿಕೆಯ ನಂತರ ಕಂಡು ಬಂದ ಮತ ವ್ಯತ್ಯಾಸದ ಕುರಿತು ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಲಾಗಿದೆ’ ಎಂದು ವಿವರಿಸಿದರು.

ಈ ವೇಳೆ ಮಾಧ್ಯಮಗಳ ಜತೆ ಮಾತನಾಡಿದ ಜೀವರಾಜ್, ‘ಮರು ಎಣಿಕೆಯಿಂದ ರಾಜೇಗೌಡರ ಮತಗಳು ಕಡಿಮೆಯಾಗಿದ್ದು, ನನಗೆ ಹೆಚ್ಚು ಮತಗಳು ಬಂದಿವೆ. ಚುನಾವಣಾಧಿಕಾರಿ ಫಲಿತಾಂಶ ಘೋಷಣೆ ಮಾಡಿ ಪ್ರಮಾಣಪತ್ರ ನೀಡುತ್ತಾರೆ ಎಂದು ನಿರೀಕ್ಷೆ ಮಾಡಿದ್ದೆ. ಆದರೆ, ನೀಡಲಿಲ್ಲ. ನನಗೆ ಹೆಚ್ಚು ಮತಗಳು ಬಂದಿವೆ. ಅಧಿಕಾರಿಗಳು ಏನು ಕ್ರಮ ಕೈಗೊಳ್ಳುತ್ತಾರೆ ಎಂದು ಗೊತ್ತಿಲ್ಲ, ಕಾಯುತ್ತೇನೆ’ ಎಂದರು.

ಎಣಿಕೆ ಬಳಿಕ ಪ್ರತಿಕ್ರಿಯಿಸಿದ ರಾಜೇಗೌಡ, ‘ನನ್ನ ಪರ ಚಲಾವಣೆಯಾಗಿದ್ದ ಮತಪತ್ರಗಳ ಮೇಲೆ ಹೆಚ್ಚುವರಿ ಗುರುತುಗಳಿವೆ. ಬೇರೆಯವರ ಹೆಸರಿನ ಮುಂದೆ ಕೂಡ ಗೆರೆ ಎಳೆಯಲಾಗಿದೆ. ಇದು ಹೇಗೆ ಎಂಬುದು ಗೊತ್ತಿಲ್ಲ. 2023ರ ಮತಎಣಿಕೆಯ ವೇಳೆ ಎಲ್ಲ ಪಕ್ಷಗಳ ಏಜೆಂಟರ ಸಮ್ಮುಖದಲ್ಲಿ ಈ ಮತಪತ್ರಗಳನ್ನು ಮಾನ್ಯ ಎಂದು ಪರಿಗಣಿಸಲಾಗಿತ್ತು. ಈಗ ಅದೇ ಮತಗಳನ್ನು ಅಮಾನ್ಯ ಎಂದು ಘೋಷಣೆ ಮಾಡಿರುವುದರಿಂದ ನನ್ನ ಮತಗಳ ಸಂಖ್ಯೆ ಕಡಿಮೆಯಾಗಿದೆ’ ಎಂದರು.

ರಾಜೇಗೌಡ ಅವರ ಪರವಾಗಿ ಎಣಿಕೆ ಏಜೆಂಟ್ ಆಗಿದ್ದ ಸುಧೀರ್ಕುಮಾರ್ ಮುರೊಳ್ಳಿ ಮಾತನಾಡಿ, ‘2023ರ ಮತ ಎಣಿಕೆಯ ವೇಳೆ ಆಗಿನ ಚುನಾವಣಾಧಿಕಾರಿ ಎಲ್ಲ ಪಕ್ಷಗಳ ಏಜೆಂಟರ ಸಮ್ಮುಖದಲ್ಲೇ ಅಂಚೆ ಮತಗಳನ್ನು ಎಣಿಸಿದ್ದರು. ಆದರೆ, ಈಗ ರಾಜೇಗೌಡ ಅವರಿಗೆ ಬಂದ ಮತಪತ್ರಗಳ ಕಟ್ಟುಗಳಷ್ಟೇ ಅಮಾನ್ಯ ಎಂದು ಪರಿಗಣಿಸಲಾಗಿದೆ. 2023ರ ಎಣಿಕೆಯಲ್ಲಿ ಇವೆಲ್ಲವೂ ಮಾನ್ಯ ಮತಗಳಾಗಿದ್ದವು. ಈಗ ಮತಪತ್ರಗಳಲ್ಲಿ ಮತ್ತೊಬ್ಬ ಅಭ್ಯರ್ಥಿಗೂ ಗೆರೆ ಎಳೆದಿರುವುದು ಕಾಣಿಸುತ್ತಿದೆ’ ಎಂದರು.

2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನ ಟಿ.ಡಿ. ರಾಜೇಗೌಡ 201 ಮತಗಳಿಂದ ಜಯ ಸಾಧಿಸಿದ್ದರು. 1,822 ಅಂಚೆ ಮತಗಳಲ್ಲಿ 279 ಮತಗಳು ತಿರಸ್ಕೃತಗೊಂಡಿದ್ದವು. ಮರು ಮತ ಎಣಿಕೆ ಕೋರಿ ಬಿಜೆಪಿ ಪರಾಜಿತ ಅಭ್ಯರ್ಥಿ ಡಿ.ಎನ್. ಜೀವರಾಜ್ ಹೈಕೋರ್ಟ್ ಮೊರೆ ಹೋಗಿದ್ದರು. ಮರು ಎಣಿಕೆಗೆ ಹೈಕೋರ್ಟ್ ಆದೇಶಿಸಿತ್ತು.

ಕಾಂಗ್ರೆಸ್ ಮುಖಂಡರು ದೂರು ನೀಡಿದ್ದಾರೆ. ಈ ವಿಷಯದ ಕುರಿತು ಕಾನೂನು ಸಲಹೆ ಪಡೆಯಲಾಗಿದ್ದು ಇಂತಹ ಪ್ರಕರಣಗಳಲ್ಲಿ ಚುನಾವಣಾಧಿಕಾರಿ ದೂರು ನೀಡಿದರೆ ಮಾತ್ರ ಎಫ್ಐಆರ್ ದಾಖಲಿಸಲು ಸಾಧ್ಯ
ಜಿತೇಂದ್ರಕುಮಾರ್ ದಯಾಮ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಶೃಂಗೇರಿ ಕ್ಷೇತ್ರದ ರೀತಿಯಲ್ಲೇ ನನಗೂ 2018ರಲ್ಲಿ ಬಾದಾಮಿ ಕ್ಷೇತ್ರದಲ್ಲಿ ಮೋಸವಾಗಿತ್ತು. ಆಗ ನ್ಯಾಯಾಲಯದ ಮೊರೆ ಹೋಗಲು ಸಾಧ್ಯವಾಗಲಿಲ್ಲ
ಬಿ. ಶ್ರೀರಾಮುಲು ಮಾಜಿ ಸಚಿವ

ಮರು ಮತ ಎಣಿಕೆಯಲ್ಲಿ ಕುತಂತ್ರ: ಡಿಕೆಶಿ

ಹೊಸಪೇಟೆ (ವಿಜಯನಗರ): ‘ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ವಿಚಾರದಲ್ಲಿ ದೊಡ್ಡ ಅಪರಾಧ ನಡೆದಿದೆ. 200ಕ್ಕೂ ಅಧಿಕ ಮತಗಳನ್ನು ಅಧಿಕಾರಿಗಳೇ ತಿದ್ದಿದ್ದಾರೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ದೊಡ್ಡ ಕಳಂಕ. ಇದನ್ನು ನಾವು ಕೋರ್ಟ್ನಲ್ಲಿ ಪ್ರಶ್ನಿಸಲಿದ್ದೇವೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ಸಮೀಪದ ತುಂಗಭದ್ರಾ ಅಣೆಕಟ್ಟೆಗೆ ಭಾನುವಾರ ಭೇಟಿ ನೀಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ ‘ಶೃಂಗೇರಿ ಕ್ಷೇತ್ರದಲ್ಲಿ ಅಧಿಕಾರಿಗಳನ್ನು ಬಳಸಿಕೊಂಡು ಮತಪತ್ರಗಳಲ್ಲಿ ಹಸ್ತಕ್ಷೇಪ ನಡೆದಿದೆ. ಮಾಜಿ ಶಾಸಕರಿಗೆ ನಿಷ್ಠರಾದ ಕೆಲ ಅಧಿಕಾರಿಗಳಿಂದಲೇ ಈ ಕೆಲಸ ಮಾಡಿಸಲಾಗಿದೆ. ಜಯನಗರ ಕ್ಷೇತ್ರದಲ್ಲೂ ಇಂತಹದೇ ಘಟನೆ ನಡೆದಿತ್ತು’ ಎಂದರು. ಶಾಸಕ ಟಿ.ಡಿ.ರಾಜೇಗೌಡ ಮತ್ತು ಡಿ.ಎನ್.ಜೀವರಾಜ್ ಇಬ್ಬರ ಕಡೆಯವರೂ ಸರಿಯಾಗಿ ಸಹಿ ಹಾಕಿಲ್ಲ ಎಂದು ಗೃಹ ಸಚಿವರೇ ಹೇಳಿದ್ದಾರಲ್ಲ ಎಂದು ಕೇಳಿದಾಗ ‘ಸಹಿ ಸರಿಯಾಗಿಯೇ ಮಾಡಿದ್ದಕ್ಕೆ ದಾಖಲೆ ಇದೆ. ನಾನೂ ವರದಿ ತರಿಸಿಕೊಂಡಿದ್ದೇನೆ’ ಎಂದರು.

ಚುನಾವಣಾಧಿಕಾರಿಗೆ ನೋಟಿಸ್

ಮತ ಎಣಿಕೆ ಮುಕ್ತಾಯಗೊಂಡರೂ ಫಲಿತಾಂಶ ಪ್ರಕಟ ಮಾಡದಿರುವುದನ್ನು ಪ್ರಶ್ನಿಸಿ ಬಿಜೆಪಿ ಪರ ವಕೀಲರು ಚುನಾವಣಾಧಿಕಾರಿಗೆ ಲೀಗಲ್ ನೋಟಿಸ್ ನೀಡಿದ್ದಾರೆ. ಚುನಾವಣಾಧಿಕಾರಿ ಗೌರವ ಕುಮಾರ್ ಶೆಟ್ಟಿ ಅವರಿಗೆ ನೋಟಿಸ್ ನೀಡಿರುವ ವಕೀಲರಾದ ವಂದನಾ ‘ನ್ಯಾಯಾಲಯದ ಆದೇಶ ಪ್ರಕಾರ ಫಲಿತಾಂಶ ಪ್ರಕಟ ಮಾಡಬೇಕು. ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು’ ಎಂದು ತಿಳಿಸಿದ್ದಾರೆ. ಈ ನಡುವೆ ಮತ ಪತ್ರಗಳನ್ನು ತಿದ್ದಿರುವ ಆರೋಪದಲ್ಲಿ ನ್ಯಾಯಾಲಯದಲ್ಲಿ ವಾದ ಮಂಡಿಸಿ ಫಲಿತಾಂಶ ತಡೆ ಹಿಡಿಯಲು ಕಾಂಗ್ರೆಸ್ ಮುಖಂಡರು ಪ್ರಯತ್ನ ನಡೆಸಿದ್ದಾರೆ.

ಫಲಿತಾಂಶ ಘೋಷಿಸದಂತೆ ಕಾಂಗ್ರೆಸ್ ಒತ್ತಡ –ಬಿವೈವಿ

ತುಮಕೂರು: ಶೃಂಗೇರಿ ಕ್ಷೇತ್ರದ ಮತಗಳ ಮರುಎಣಿಕೆಯ ಫಲಿತಾಂಶ ಘೋಷಿಸದಂತೆ ಕಾಂಗ್ರೆಸ್ ನಾಯಕರು ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ. ಸಿದ್ಧಗಂಗಾ ಮಠದಲ್ಲಿ ಭಾನುವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು ‘ಮರು ಮತಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಡಿ.ಎನ್.ಜೀವರಾಜ್ 56 ಮತಗಳಿಂದ ಗೆದ್ದಿದ್ದಾರೆ ಎಂಬ ಮಾಹಿತಿ ಇದೆ. ಫಲಿತಾಂಶ ಘೋಷಿಸದೆ ಕಾಂಗ್ರೆಸ್ ಅಭ್ಯರ್ಥಿಗೆ ಹೈಕೋರ್ಟ್ಗೆ ಹೋಗಲು ಕಾಲಾವಕಾಶ ಕೊಡಬೇಕು ಎಂಬ ಕುತಂತ್ರ ನಡೆಯುತ್ತಿದೆ’ ಎಂದರು. ಜನರ ಆಶೀರ್ವಾದದಿಂದ ಗೆದ್ದಿರುವ ಜೀವರಾಜ್ ಅವರಿಗೆ ಮೂರು ವರ್ಷದಿಂದ ಅನ್ಯಾಯವಾಗಿದೆ. ಅನ್ಯಾಯ ಮುಂದುವರಿಸದೆ ಜನರ ತೀರ್ಪು ಒಪ್ಪಿ ಶಾಸಕರಾಗಿ ಕೆಲಸ ಮಾಡಲು ಅವಕಾಶ ಕಲ್ಪಿಸಬೇಕು ಎಂದರು. ಚಿತ್ರದುರ್ಗದಲ್ಲಿ ಇದೇ ವಿಷಯ ಕುರಿತು ಪ್ರತಿಕ್ರಿಯಿಸಿದ ವಿಜಯೇಂದ್ರ ಅವರು ‘ಮತ ಕಳ್ಳತನದ ಆರೋಪ ಮಾಡುತ್ತಿದ್ದ ಕಾಂಗ್ರೆಸ್ ನಾಯಕರ ಅಕ್ರಮ ಶೃಂಗೇರಿ ಕ್ಷೇತ್ರದಲ್ಲಿ ಬಯಲಾಗಿದೆ. ಆ ಪಕ್ಷದ ಮುಖಂಡರು ರಾಜ್ಯದ ಜನರ ಕ್ಷಮೆ ಕೇಳಬೇಕು’ ಎಂದು ಒತ್ತಾಯಿಸಿದರು.

ಎಣಿಕೆಯಲ್ಲಿ ಗೊಂದಲ –ಗೃಹ ಸಚಿವ

ತುಮಕೂರು: ‘ಶೃಂಗೇರಿ ವಿಧಾನಸಭಾ ಕ್ಷೇತ್ರದ ಮರು ಮತಎಣಿಕೆಯಲ್ಲಿ ಬಹಳಷ್ಟು ಗೊಂದಲ ಆಗಿದೆ. ಹೀಗಾಗಿಯೇ ಫಲಿತಾಂಶ ಘೋಷಿಸಲು ಆಗಿಲ್ಲ’ ಎಂದು ಗೃಹ ಸಚಿವ ಜಿ.ಪರಮೇಶ್ವರ ಪ್ರತಿಕ್ರಿಯಿಸಿದ್ದಾರೆ. ಭಾನುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ‘ಮತ ಎಣಿಕೆ ಸಮಯದಲ್ಲಿ ಜೀವರಾಜ್ ಮತ್ತು ರಾಜೇಗೌಡ ಕಡೆಯವರು ಕೆಲವು ಕಡೆ ಸಹಿ ಮಾಡಿದ್ದಾರೆ. ಕೆಲವೆಡೆ ಮಾಡಿಲ್ಲ. ಇದರಿಂದ ಗೊಂದಲ ಸೃಷ್ಟಿಯಾಗಿದೆ. ಅಧಿಕಾರಿಗಳು ವರದಿ ಕಳುಹಿಸಿದ್ದು ಆಯೋಗದಿಂದ ಫಲಿತಾಂಶ ಘೋಷಿಸಲಾಗುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.