ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಞಾನದಾಸೋಹಕ್ಕೆ ಗುರುವಿನ ಜೀವನ ಮೀಸಲು

ಶೃಂಗೇರಿ ಸರ್ಕಾರಿ ಪ್ರೌಢಶಾಲೆಯ ಅಮೃತ ಮಹೋತ್ಸವ ಸಮಾರಂಭ
Last Updated 26 ಡಿಸೆಂಬರ್ 2022, 3:48 IST
ಅಕ್ಷರ ಗಾತ್ರ

ಶೃಂಗೇರಿ: `ಗುರು ಎಂದರೆ ಕತ್ತಲೆಯಿಂದ ಬೆಳಕನ್ನು ತೋರುವವನು, ಜ್ಞಾನವನ್ನು ನೀಡುವ ಗುರು ಜೀವನದ ದಿಕ್ಕನ್ನು ತೋರಿಸುತ್ತಾನೆ' ಎಂದು ಹೊರನಾಡಿನ ಅನ್ನಪೂರ್ಣೇಶ್ವರಿ ದೇವಾಲಯದ ಧರ್ಮದರ್ಶಿ ಭೀಮೇಶ್ವರ ಜೋಷಿ ಹೇಳಿದರು.

ಶೃಂಗೇರಿಯ ಸರ್ಕಾರಿ ಪ್ರೌಢಶಾಲೆಯ (ಗುಡ್ಡದ ಹೈಸ್ಕೂಲ್) ಅಮೃತ ಮಹೋತ್ಸವದ ಅಂಗವಾಗಿ ಸರ್ಕಾರಿ ಪದವಿ ಪೂಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಗುರುವಂದನೆ ನೆರವೇರಿಸಿ ಅವರು ಮಾತನಾಡಿದರು.

`ಗುರು ತನ್ನ ಜೀವನವನ್ನು ಜ್ಞಾನದಾ ಸೋಹಕ್ಕೆ ಮೀಸಲು ಇಡುತ್ತಾನೆ. ಉಪಾಧ್ಯಾಯ ವೃತ್ತಿಯು ಶ್ರೇಷ್ಠ ವೃತ್ತಿಯಾಗಿದ್ದು, ವೃತ್ತಿಯಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಾರೆ. ಗುರು ಎನ್ನುವ ಪದಕ್ಕೆ ಮಹತ್ವವಾದ ಸ್ಥಾನವಿದೆ. ಗುರು ಎಂದಿಗೂ ತಾನು ಶಿಕ್ಷಣ ನೀಡಿ ಇಂಥಹ ಅದ್ಬುತ ವಿದ್ಯಾರ್ಥಿಯನ್ನು ಸಮಾಜಕ್ಕೆ ನೀಡಿದ್ದೆ ಎಂದು ಎಂದಿಗೂ ಹೇಳಿಕೊಳ್ಳುವುದಿಲ್ಲ. ಮರೆಯುವುದು ಈಗಿನ ಸಂಸ್ಕತಿಯಾಗಿರುವ ಸಂದರ್ಭದಲ್ಲಿ 75 ವರ್ಷ ಸೇವೆ ಸಲ್ಲಿಸಿದ ಶಿಕ್ಷಕರನ್ನು ಗುರುತಿಸಿ ಪತ್ತೆ ಹಚ್ಚಿ ಅವರನ್ನು ಒಂದೆಡೆ ಸೇರಿಸಿ ಗೌರವಿಸುವುದು ದೊಡ್ಡ ಸಾಧನೆಯಾಗಿದೆ.ಜ್ಞಾನದಿಂದ ವಿಜ್ಞಾನ, ಸಮಾಜದಲ್ಲಿ ಪರಿವರ್ತನೆ ಉತ್ತಮ ವಿದ್ಯಾರ್ಥಿಗಳ ನಿರ್ಮಾಣದಿಂದ ಸಾಧ್ಯ.ಬದುಕಿನ ಪರಿಪೂರ್ಣತೆಗಾಗಿ ಗುರುವಿನ ಋಣವನ್ನು ತೀರಿಸುವ ಭಾಗ್ಯ ದೊರಕಿರುವುದು ಸೌಭಾಗ್ಯವಾಗಿದೆ' ಎಂದರು.

ಗುರುವಂದನೆ ಸ್ವೀಕರಿಸಿ ನಿವೃತ್ತ ಶಿಕ್ಷಕ ಎಂ.ಆರ್.ಕೃಷ್ಣಮೂರ್ತಿ ಮಾತನಾಡಿ, `ಪ್ರಶ್ನಿಸುವ ವಿದ್ಯಾರ್ಥಿಗಳಿದ್ದಾಗ ಶಿಕ್ಷಕರು ಕಲಿಯುವುದು ಅನಿವಾರ್ಯವಾಗುತ್ತದೆ. ಖಾಸಗಿ ಶಾಲೆಗಿಂತ ಭಿನ್ನವಾಗಿ ಸರ್ಕಾರಿ ಶಾಲೆಯಲ್ಲಿ ವರ್ಗಾವಣೆ ನಡೆಯುವುದರಿಂದ ಹೊಸ ಶಿಕ್ಷಕರು ಬದಲಾವಣೆ ತರುತ್ತಾರೆ ಎಂದರು.

ಮಹಿಳಾ ಶಿಕ್ಷಕಿ ನಾಗಮಣಿ ಮಾತನಾಡಿದರು. ಬಿಜಿಎಸ್ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಡಾ.ಕೆ.ಸಿ ನಾಗೇಶ್ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರಣ್ಯಪುರ ಗ್ರಾಮ ಪಂಚಾಯಿತಿ ಸದಸ್ಯರಾದ ರಾಧಿಕಾ, ಮಂಜುನಾಥ್, ಪ್ರಪುಲ್ಲಾ, ಮಮತಾ, ಹಳೇ ವಿದ್ಯಾರ್ಥಿ ಸಂಘದ ಡಾ.ನಿರಂಜನ್, ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ಸುಧಾಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT