ನರಸಿಂಹರಾಜಪುರ: ಶೃಂಗೇರಿ ಕ್ಷೇತ್ರಕ್ಕೆ ಸಂಬಂಧಿಸಿದ ಹಲವು ಬೇಡಿಕೆ ಈಡೇರಿಕೆಗೆ ಶಾಸಕ ಟಿ.ಡಿ.ರಾಜೇಗೌಡ ಅವರು ಸೋಮವಾರ ವಿವಿಧ ಕಾಮಗಾರಿಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.

ಪ್ರಮುಖವಾಗಿ ಶೃಂಗೇರಿ ಕ್ಷೇತ್ರದ ಹೆಚ್ಚಿನ ಜನರು ಶಿವಮೊಗ್ಗ ನಗರವನ್ನು ಅವಲಂಬಿಸಿದ್ದು, ಮಲ್ಪೆ– ಮೊಳಕಾಲ್ಮುರು ರಸ್ತೆಯ ಕೊಪ್ಪ– ಶಿವಮೊಗ್ಗ ವಿಮಾನ ನಿಲ್ದಾಣ ರಸ್ತೆ (70 ಕಿ.ಮೀ) ಅಭಿವೃದ್ಧಿ ಪಡಿಸಲು ₹70 ಕೋಟಿ, ಕ್ಷೇತ್ರದ ವ್ಯಾಪ್ತಿಯ ಸುಮಾರು 2,741 ಕಿ.ಮೀ ಗ್ರಾಮೀಣ ರಸ್ತೆಗಳು ಅತಿವೃಷ್ಟಿಯಿಂದ ಹಾಳಾಗಿರುವುದರಿಂದ ಈ ರಸ್ತೆಗಳ ಗುಂಡಿ ಮುಚ್ಚಲು ಅಂದಾಜು ₹100 ಕೋಟಿ ವಿಶೇಷ ಅನುದಾನ ಮಂಜೂರು ಮಾಡಬೇಕು. ಚಿಕ್ಕಮಗಳೂರು ಜಿಲ್ಲಾ ಕೇಂದ್ರ ಹಾಗೂ ಶೃಂಗೇರಿ ಕ್ಷೇತ್ರ ಸುಮಾರು 100 ಕಿ.ಮೀ ಅಂತರದಲ್ಲಿ ಇರುವುದರಿಂದ ರೈತರು, ಸಾರ್ವಜನಿಕರಿಗೆ ಅನುಕೂಲಕ್ಕಾಗಿ ಕೊಪ್ಪ ತಾಲ್ಲೂಕಿನಲ್ಲಿ ಉಪವಿಭಾಗಾಧಿಕಾರಿ ಕಚೇರಿ ಮಂಜೂರು ಮಾಡಬೇಕು. ಟಾಸ್ಕ್ ಫೋರ್ಸ್ ಸಮಿತಿಯ ಜಂಟಿ ಸರ್ವೆ ಕಾರ್ಯ ಭೂಮಾಪಕರು ಮತ್ತು ಸರ್ವೆ ಸೂಪರ್ ವೈಸರ್ ಹುದ್ದೆಗಳು ಖಾಲಿ ಇದ್ದು ಅವುಗಳನ್ನು ಭರ್ತಿ ಮಾಡಬೇಕು. ಪ್ಲಾಂಟೇಷನ್ ಬೆಳೆಗಳ ಜಮೀನುಗಳನ್ನು ಗುತ್ತಿಗೆ ನೀಡಲು ವಿಳಂಬವಾಗುತ್ತಿದ್ದು ಈ ಪ್ರಕ್ರಿಯೆಗಳನ್ನು ತ್ವರಿತಗೊಳಿಸಲು ಸಂಬಂಧಪಟ್ಟವರಿಗೆ ನಿರ್ದೇಶಿಸಬೇಕು ಎಂದು ಕೋರಿದ್ದಾರೆ.

ನರಸಿಂಹರಾಜಪುರದಿಂದ ಹಳೆ ಕೂಸ್ಗಲ್ ಮಾರ್ಗವಾಗಿ ಹೆಬ್ಬೆ–ಜಾಗರ ಮುತ್ತೋಡಿ ಗೇಮ್ ಸೆಂಚುರಿ ಮೂಲಕ ಚಿಕ್ಕಮಗಳೂರು ಸಂಪರ್ಕಿಸುವ ಪ್ರಮುಖ ರಸ್ತೆಯಾಗಿತ್ತು. ಭದ್ರಾ ಅಣೆಕಟ್ಟು ನಿರ್ಮಾಣದ ಹಿನ್ನೀರಿನಿಂದ ಸೇತುವೆ ಮುಳುಗಡೆಯಾಗಿ ಸಂಪರ್ಕ ಸ್ಥಗಿತವಾಗಿದೆ. ಈ ರಸ್ತೆ ಅಭಿವೃದ್ಧಿ ಪಡಿಸಿದಲ್ಲಿ ಜಿಲ್ಲಾ ಕೇಂದ್ರ ಹಾಗೂ ಕ್ಷೇತ್ರದ ನಡುವೆ ಅಂತರ ಕಡಿಮೆಯಾಗಿ ಕ್ಷೇತ್ರದ ಜನರಿಗೆ ಅನುಕೂಲ ಆಗುವುದರಿಂದ ರಸ್ತೆ ಅಭಿವೃದ್ಧಿ ಪಡಿಸಲು ಅರಣ್ಯ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆಗೆ ನಿರ್ದೇಶಿಸಬೇಕು. ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಮತ್ತು ಪುನರ್ವಸತಿ ಪ್ಯಾಕೇಜ್ಗೆ ಅರ್ಜಿ ಸಲ್ಲಿಸಿರುವ 314 ಕುಟುಂಬಗಳಿಗೆ ಪರಿಹಾರ ಒದಗಿಸಬೇಕು ಎಂದು ಮನವಿ ಮಾಡಲಾಗಿದೆ.

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿರುವ ಶಾಸಕರು ಮಲ್ಪೆ–ಮೊಳಕಾಲ್ಮುರು ರಸ್ತೆಯ ಕೊಪ್ಪ– ಶಿವಮೊಗ್ಗ ವಿಮಾನ ನಿಲ್ದಾಣ ರಸ್ತೆ (70ಕಿ.ಮೀ) ಅಭಿವೃದ್ಧಿ ಪಡಿಸಲು ₹70 ಕೋಟಿ ಅನುದಾನ ನೀಡಬೇಕು, ವಿರಾಜಪೇಟೆ –ಬೈಂದೂರು ರಾಜ್ಯ ಹೆದ್ದಾರಿಯ ವಸ್ತಾರೆಯಿಂದ ಶೃಂಗೇರಿವರೆಗೆ 80 ಕಿ.ಮೀ ರಸ್ತೆ ಅಭಿವೃದ್ಧಿಗೆ ₹100 ಕೋಟಿ ಅನುದಾನ, ಬಾಳೆಹೊನ್ನೂರು– ನರಸಿಂಹರಾಜಪುರ ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಪ್ರಮುಖ ರಸ್ತೆ (32ಕಿ.ಮೀ) ಅಭಿವೃದ್ಧಿಗೆ ₹50 ಕೋಟಿ ಅನುದಾನ, ಕೊಪ್ಪ– ಹರಿಹರಪುರ ಮುಖ್ಯರಸ್ತೆ ಅಭಿವೃದ್ಧಿ (17ಕಿ.ಮೀ)ಗೆ ₹20ಕೋಟಿ ಒಟ್ಟು ₹240 ಕೋಟಿ ಅನುದಾನ ಬಿಡುಗಡೆ ಮಾಡಬೇಕು ಎಂದು ಮನವಿ ಸಲ್ಲಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260416-126-1855702332

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.