ಶೃಂಗೇರಿ: ‘2023ರ ವಿಧಾನಸಭಾ ಚುನಾವಣೆಯಲ್ಲಿ ಮತದಾರರಿಂದ ಶಾಸಕರಾಗಿ ಆಯ್ಕೆಗೊಂಡಿದ್ದ ಟಿ.ಡಿ. ರಾಜೇಗೌಡರಿಗೆ ಬಂದಿರುವ ಅಂಚೆ ಮತಗಳನ್ನು ಮರು ಎಣಿಕೆ ಮೂಲಕ 255 ಮತಗಳನ್ನು ಅಸಿಂಧು ಮಾಡಿರುವುದು ಸಂವಿಧಾನ ಬಾಹಿರವಾಗಿದೆ. ಇದಕ್ಕೆ ಡಿ.ಎನ್. ಜೀವರಾಜ್, ಅಂದಿನ ಜಿಲ್ಲಾಧಿಕಾರಿ ರಮೇಶ್ ಕೆ.ಎನ್ ಮತ್ತು ಚುನಾವಣಾಧಿಕಾರಿ ವೇದಮೂರ್ತಿ ನೇರ ಕಾರಣ’ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೊಡತಲು ಕೆ.ಎಂ. ರಮೇಶ್ ಭಟ್ ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘2023ರ ಮೇ 13ರಂದು ಮತ ಎಣಿಕೆ ಸಂದರ್ಭದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷ ಮತ್ತು ಪಕ್ಷತೀತವಾಗಿ ನಿಂತಿದ್ದ 12 ಅಭ್ಯರ್ಥಿಗಳ ಎಜೆಂಟರ್ಗಳ ಸಮ್ಮುಖದಲ್ಲಿ 569 ಅಂಚೆ ಮತಗಳು ಸಿಂಧು ಎಂದು ಚುನಾವಣಾಧಿಕಾರಿ ಎಣಿಕೆ ಮಾಡಿ, ಟಿ.ಡಿ ರಾಜೇಗೌಡರು 201 ಮತಗಳಿಂದ ಜಯಗಳಿಸಿದ್ದಾರೆ ಎಂದು ಘೋಷಿಸಿದ್ದರು. ಮತ ಎಣಿಕೆ ಮಾಡುವ ಸಂದರ್ಭದಲ್ಲಿ ವಿಡಿಯೊ ಚಿತ್ರೀಕರಣ ಸಹ ಮಾಡಲಾಗಿತ್ತು. ಆಗ ಸಿಂಧು ಆಗಿದ್ದ ಮತ, ಈಗ ಅಸಿಂಧು ಆಗಿರುವುದು ಹೇಗೆ. ಪ್ರಸ್ತುತ ಡಿ.ಎನ್. ಜೀವರಾಜ್ ಅವರನ್ನು ಶಾಸಕರು ಎಂದು ಘೋಷಿಸಿರುವುದು ಸಂವಿಧಾನಕ್ಕೆ ವಿರುದ್ಧವಾಗಿದೆ. ಈ ಘಟನೆಯಲ್ಲಿ ರಾಜೇಗೌಡರಿಗೆ ಅನ್ಯಾಯವಾಗಿದೆ. ಘಟನೆಯಲ್ಲಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಮರು ಮತ ಎಣಿಕೆಗೆ ಸ್ಟ್ರಾಂಗ್ ರೂಮ್ ತೆರೆದಾಗ ಹಲವು ಮತಪೆಟ್ಟಿಗೆಗಳಿದ್ದ 9 ಟ್ರಂಕ್ಗಳಲ್ಲಿ ಕೆಲವು ಟ್ರಂಕ್ಗಳಿಗೆ ಬೀಗ ಇರಲಿಲ್ಲ, ಸೀಲ್ ಹಾಕಿರಲಿಲ್ಲ. 279 ತಿರಸ್ಕೃತ ಮತಗಳಲ್ಲಿ 12 ಮತಗಳು ಎಲ್ಲಿ ಕಾಣೆಯಾಗಿದ್ದಾವೆ ಎಂದು ಚುನಾವಣಾ ಆಯೋಗ ಉತ್ತರಿಸಬೇಕು. ಒಟ್ಟು ಚಲಾವಣೆಯಾದ 1,811 ಅಂಚೆ ಮತಗಳಲ್ಲಿ 279 ಮತಗಳು ತಿರಸ್ಕೃತವಾಗಿತ್ತು. ಸಿಂಧುವಾಗಿದ್ದ ಅಂಚೆ ಮತಗಳು 3 ವರ್ಷದ ನಂತರ ಮರು ಎಣಿಕೆಯ ಸಂದರ್ಭದಲ್ಲಿ ಟಿ.ಡಿ. ರಾಜೇಗೌಡರ 255 ಮತಗಳು ಮಾತ್ರ ಅಸಿಂಧುವಾಗಿರುವುದು ಅನುಮಾನಕ್ಕೆ ಕಾರಣವಾಗಿದೆ. ಡಿ.ಎನ್. ಜೀವರಾಜ್ ಮತ ಡಕಾಯಿತಿ ಮಾಡಿದ್ದಾರೆ ಎಂಬ ಸಂಶಯವಿದೆ’ ಎಂದು ದೂರಿದರು.

ಕಾಂಗ್ರೆಸ್ ವಕ್ತಾರ ಉಮೇಶ್ ಪುದುವಾಳ್ ಮಾತನಾಡಿ, ಗೆದ್ದಿರುವ ವ್ಯಕ್ತಿಯನ್ನು ಸೋಲಿಸಲು ವ್ಯವಸ್ಥಿತ ಹುನ್ನಾರ ನಡೆಸಲಾಗಿದೆ. ಚುನಾವಣಾ ಆಯೋಗದ ಬಗ್ಗೆ ಸಾರ್ವಜನಿಕರಲ್ಲಿ ನಂಬಿಕೆ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ ಎಂದರು.

ಮುಖಂಡರಾದ ಲಕ್ಷ್ಮೀಶ, ಎಚ್.ಕೆ. ದಿನೇಶ್ ಹೆಗ್ಡೆ, ಅಜಿತ್ ಅಣ್ಕುಳಿ, ಭಾಸ್ಕರ ನಾಯ್ಕ್, ದೇವೇಂದ್ರ, ಪುಟ್ಟಪ್ಪ ಹೆಗ್ಡೆ, ಕೆ.ಟಿ. ಮಂಜುನಾಥ್, ಅಂಬಲಮನೆ ಸುಬ್ರಹ್ಮಣ್ಯ, ಮುರುಳಿಧರ್ ಪೈ, ನಾಗ ರಾಜ್ ಬೇಗಾನೆ, ಎಚ್.ಎ. ಶಿವಮೂರ್ತಿ, ರಾಘವೇಂದ್ರ, ಇಂದ್ರಜಿತ್ ಹೆಗ್ಡೆ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260507-126-778460312

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.