ಶೃಂಗೇರಿ: ‘ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಜಂಟಿ ಸರ್ವೆ ಕಾರ್ಯ ಜುಲೈ ತಿಂಗಳ ಒಳಗೆ ಬಹುತೇಕ ಮುಗಿಯಲಿದ್ದು, ಮೀಸಲು ಅರಣ್ಯ ಸರ್ವೆಯನ್ನು ಜನರಿಗೆ ಮತ್ತು ಜನಪ್ರತಿನಿಧಿಗಳಿಗೆ ಗೊತ್ತಿಲ್ಲದೆ ಸರ್ವೆ ಮಾಡಲಾಗುತ್ತಿದೆ. ಕೂಡಲೇ ಗ್ರಾಮ ಮಟ್ಟದ ಸಭೆ ನಡೆಸಿ ಸಾರ್ವಜನಿಕ ಅಭಿಪ್ರಾಯದಂತೆ ನಕ್ಷೆ ತಯಾರಿಸಬೇಕು. ಇಲ್ಲದಿದ್ದರೆ ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಪ್ರತಿಭಟನೆ ನಡೆಸುವುದು ಅನಿವಾರ್ಯ’ ಎಂದು ಮಲೆನಾಡು ಮತ್ತು ಕರಾವಳಿ ಜನಪರ ಒಕ್ಕೂಟದ ಸಂಚಾಲಕ ನವೀನ್ ಕರುವಾನೆ ಎಚ್ಚರಿಸಿದ್ದಾರೆ.

‘ಸುಮಾರು 22 ವರ್ಷಗಳ ರೈತರ ಹಾಗೂ ಮಲೆನಾಡು ಮತ್ತು ಕರಾವಳಿ ಜನಪರ ಒಕ್ಕೂಟದ ಹೋರಾಟಕ್ಕೆ ಸರ್ಕಾರ ಸ್ಪಂದಿಸಿದೆ. ಆದರೆ ಶೃಂಗೇರಿಯ ಕೆಲ ಭಾಗಗಳಲ್ಲಿ ಜಂಟಿ ಸರ್ವೆ ನಡೆದ ಬಳಿಕ ಮತ್ತೆ ಸರ್ವೆ ಮಾಡಿರುವ ಕ್ರಮವನ್ನು ಸಾರ್ವಜನಿಕರಿಗೆ ಅರಣ್ಯ ಇಲಾಖೆ ಗ್ರಾಮ ಸಭೆಗಳನ್ನು ನಡೆಸಿ ತಾಲ್ಲೂಕಿಗೆ ಸಂಬಂಧಪಟ್ಟ ಅರಣ್ಯ ಇಲಾಖೆ, ಕಂದಾಯ ಇಲಾಖೆ, ಸರ್ವೆ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಮ್ಮುಖದಲ್ಲಿ ಮಾಹಿತಿಯನ್ನು ತಿಳಿಸಿ, ಸರ್ವೆ ಕಾರ್ಯ ನಡೆಸಬೇಕೆಂದು ನಾವು ತಿಳಿಸಿದ್ದೇವು. ಆದರೆ ಅರಣ್ಯ ಇಲಾಖೆಯ ಕೆಲ ಸರ್ವೆಯು ಜನರ ಗಮನಕ್ಕೆ ಬಾರದೆ ನಡೆಯುತ್ತಿರುವುದರಿಂದ, ಬದುಕಿಗಾಗಿ ಒತ್ತುವರಿ ಮಾಡಿ ಕೃಷಿ ಮಾಡಿರುವ ಜನರಲ್ಲಿ ಆತಂಕ ಮೂಡಿದೆ. ಗ್ರಾಮ ಪಂಚಾಯಿತಿಗಳ ಮುಖಾಂತರ ಸಾರ್ವಜನಿಕ ಉದ್ದೇಶಕ್ಕೆ ಬೇಕಾಗುವ ಗ್ರಾಮ ಠಾಣಾ, ರಸ್ತೆ, ಆಸ್ಪತ್ರೆ, ಅಂಗನವಾಡಿ, ಶಾಲಾ ಕಾಲೇಜುಗಳು, ಹಾಸ್ಟೆಲ್, ನೀರಿನ ಟ್ಯಾಂಕ್ ನಿರ್ಮಾಣ, ವಿದ್ಯುತ್ ಮಾರ್ಗಕ್ಕೆ ಬೇಕಾಗುವ ಜಾಗಗಳನ್ನು ಗುರುತಿಸಬೇಕಾಗುವ ಅವಶ್ಯಕತೆ ಇರುವುದರಿಂದ ಗ್ರಾಮ ಸಭೆಗಳು ಅನಿವಾರ್ಯವಾಗಿವೆ. ಅರಣ್ಯ ಇಲಾಖೆ ಕೂಡಲೇ ಗ್ರಾಮ ಸಭೆಗಳನ್ನು ಕರೆಯಬೇಕು ಎಂದು ಅವರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-126-606500608

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.