ಶೃಂಗೇರಿಯಲ್ಲಿ ನಿಲ್ಲದ ವರುಣನ ಆರ್ಭಟ

7

ಶೃಂಗೇರಿಯಲ್ಲಿ ನಿಲ್ಲದ ವರುಣನ ಆರ್ಭಟ

Published:
Updated:
Deccan Herald

ಶೃಂಗೇರಿ: ನಿಲ್ಲದ ವರುಣನ ಆರ್ಭಟಕ್ಕೆ ಮತ್ತೊಮ್ಮೆ ತುಂಗೆಯಲ್ಲಿ ಪ್ರವಾಹ ಬಂದಿದ್ದು, ಪಟ್ಟಣದ ತುಂಗಾತೀರದ ವಿದ್ಯಾತೀರ್ಥ ಮಾರ್ಗವು ಈ ವರ್ಷ ಹತ್ತನೇ ಬಾರಿಗೆ ಮುಳುಗಿದ್ದು, ಸಂಜೆ ಆಗುತ್ತಿದ್ದಂತೆ ಮಳೆಯ ಅಬ್ಬರ ಇನ್ನಷ್ಟು ವೇಗ ಪಡೆದಿದೆ.

ನಾಲ್ಕು ವರ್ಷಗಳಲ್ಲಿ ಒಂದೆರಡು ಬಾರಿ ಮುಳುಗಿದ್ದ ಪಟ್ಟಣದ ಪ್ಯಾರಲಲ್ ರಸ್ತೆಯು ಈ ವರ್ಷ ಪದೇ, ಪದೇ ನೀರಿನಿಂದ ಆವೃತ್ತವಾಗುತ್ತಿದೆ. ಭಾನುವಾರ ರಸ್ತೆ ಮಟ್ಟದಲ್ಲಿ ನದಿ ಪ್ರವಾಹ ಹರಿಯುತ್ತಿತ್ತು. ಸೋಮವಾರ ಮಧ್ಯಾಹ್ನದ ವೇಳೆಗೆ ರಸ್ತೆಯನ್ನು ಬಂದ್ ಮಾಡಲಾಯಿತು. ಗ್ರಾಮಾಂತರದ ಕಿಕ್ರೆ ಮೊದಲಾದ ತಗ್ಗು ಪ್ರದೇಶಗಳಲ್ಲಿ ನೀರಿನಮಟ್ಟ ಮೇಲೆ ಬಂದು ರಸ್ತೆ ಸಂಚಾರಕ್ಕೆ ತಡೆ ಉಂಟಾಯಿತು.

ಶಾರದಾ ಮಠದ ಸ್ನಾನಘಟ್ಟದಲ್ಲಿನ ಕಪ್ಪೆಶಂಕರ ಸಹ ಮುಳುಗಿದೆ. ನಿರಂತರ ಮಳೆಯಿಂದಾಗಿ ಅಡಿಕೆ ತೋಟಗಳಲ್ಲಿ ಕೊಳೆ ರೋಗ ಬಂದಿದ್ದು ಚಿಗುರು ಅಡಿಕೆ ಕಾಯಿಗಳು ವ್ಯಾಪಕವಾಗಿ ಉದುರಿ ಬಿದ್ದು ಈ ಸಾಲಿನ ಫಸಲಿನ ನಷ್ಟವಾಗಿದೆ. ಇದಲ್ಲದೇ ಕಾಳುಮೆಣಸು ಬಳ್ಳಿಗಳು ಸಹ ಕೊಳೆಯುತ್ತಿವೆ. ನೆಲ ಮೃದುವಾಗಿ ತೋಟದಲ್ಲಿ ಹೆಜ್ಜೆ ಇಟ್ಟರೆ ಕುಸಿದು ಹೋಗುವಂತೆ ಆಗಿದೆ. ಈ ಎಲ್ಲಾ ಅವಸ್ಥೆಯಿಂದ ಮರುಗುತ್ತಿರುವ ರೈತರು ತೋಟಕ್ಕೆ ಹೋಗುವುದನ್ನೇ ಬಿಟ್ಟಿದ್ದೇವೆ ಎನ್ನುತ್ತಿದ್ದಾರೆ.

ತಾಲೂಕಿನಲ್ಲಿ ಈ ಸಾಲಿನಲ್ಲಿ ಇಂದಿನ ವರೆಗೆ ಒಟ್ಟು 3944.6 ಮಿಲಿ ಮೀಟರ್ ಮಳೆಯಾಗಿದೆ. ಸೋಮವಾರ ಕೆರೆಕಟ್ಟೆಯಲ್ಲಿ 171 ಮಿಲಿ ಮೀಟರ್, ಶೃಂಗೇರಿಯಲ್ಲಿ 99 ಮಿಲಿ ಮೀಟರ್ ಹಾಗೂ ಕಿಗ್ಗಾದಲ್ಲಿ 142.4 ಮಿ.ಮೀ. ಮಳೆ ಆಗಿದೆ.ತಹಶೀಲ್ದಾರ್ ನಾರಯಣ ಕನಕರೆಡ್ಡಿ,ಪೋಲಿಸ್ ಇನ್‍ಸ್ಪೆಕ್ಟರ್ ಪ್ರಮೋದ್ ಕುಮಾರ್ ಸಾರ್ವಜನಿಕರು ನದಿಯ ಕಡೆಗೆ ಹೋಗದಂತೆ ಕಟ್ಟೆಚ್ಚರ ವಹಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !