ಕಳಸ/ಶೃಂಗೇರಿ: ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಮತ್ತು ಹೊರನಾಡು ದೇಗುಲಗಳು ಅನ್ನ ದಾಸೋಹಕ್ಕೆ ಅಡುಗೆ ಅನಿಲದ ಮೇಲೆ ಅವಲಂಬಿತವಾಗಿಲ್ಲ.

ಎಲ್ಲೆಡೆ ಅಡುಗೆ ಅನಿಲದ ಸಮಸ್ಯೆ ಕಾಡುತ್ತಿದ್ದರೆ, ಈ ಎರಡೂ ದೇಗುಲಗಳಲ್ಲಿ ಅನ್ನದಾಸೋಹಕ್ಕೆ ಅಡುಗೆ ಅನಿಲದ ಸಮಸ್ಯೆ ಕಾಡಿಲ್ಲ. ಎರಡೂ ಕಡೆ ಉರುವಲಾಗಿ ಸೌದೆ ಹೊಟ್ಟು, ಕಾಫಿ ಪೆಲೆಟ್ಸ್ ಬಳಕೆ ಆಗುತ್ತಿದೆ.

ಶೃಂಗೇರಿಯ ಶಾರದಾ ದೇವಿಯ ದರ್ಶನಕ್ಕೆ ಬರುವ ಭಕ್ತರಿಗೆ ಪ್ರತಿನಿತ್ಯ ಊಟದ ವ್ಯವಸ್ಥೆ ಇದೆ. ಸುಮಾರು 8 ಸಾವಿರ ಜನರಿಗೆ ನಿತ್ಯ ದಾಸೋಹ ನಡೆಯಲಿದೆ. ಮರದ ಹೊಟ್ಟು ಮತ್ತು ಪುಡಿ ಸೌದೆಯ ಒಂದು ಬಾಯ್ಲರ್, ಮತ್ತೊಂದು ಡೀಸೆಲ್ ಬಾಯ್ಲರ್ ಇದೆ. ಇವೆರಡನ್ನೂ ಬಳಸಿ ಊಟ ತಯಾರಿಸಲಾಗುತ್ತಿದೆ. ಮೊದಲಿನಿಂದಲೂ ಅಡುಗೆ ಅನಿಲ ಬಳಕೆಯ ಪ್ರಯತ್ನವನ್ನೇ ಇಲ್ಲಿ ಮಾಡಿಲ್ಲ.

ಮತ್ತೊಂದೆಡೆ ಹೊರನಾಡು ಅನ್ನಪೂರ್ಣೇಶ್ವರಿ ದೇಗುಲದಲ್ಲೂ ಅಡುಗೆ ಅನಿಲದ ಮೇಲೆ ಅವಲಂಬನೆಯಾಗಿಲ್ಲ. ಕಾಫಿ ಸಿಪ್ಪೆಯ ಪೆಲೆಟ್ಸ್ಗಳನ್ನು ಬಳಸಿ ಅಡುಗೆ ತಯಾರಿಸಲಾಗುತ್ತಿದೆ.

‘ಕಾಫಿ ಸಿಪ್ಪೆಯಿಂದ ಪೆಲೆಟ್ಸ್(ಸಿಪ್ಪೆಯಿಂದ ಮಾಡಿದ ಸಣ್ಣ ಉಂಟೆಗಳು) ತಯಾರಿಸಲಾಗುತ್ತದೆ. ಅವುಗಳನ್ನು ಉರುವಲಿಗೆ ಬಳಸಲಾಗುತ್ತದೆ. ಪೆಲೆಟ್ಸ್ನಿಂದ ಸ್ಟೀಮ್ ಉತ್ಪಾದಿಸುವ ಬಾಯ್ಲರ್ ಯಂತ್ರವನ್ನು ಅಳವಡಿಸಲಾಗಿದೆ. ಹೀಗಾಗಿ, ಸಮಸ್ಯೆ ತಟ್ಟಿಲ್ಲ’ ಎಂದು ದೇಗುಲದವರು ಹೇಳುತ್ತಾರೆ.

ಹೊರನಾಡಿನಲ್ಲಿ ಪ್ರತಿನಿತ್ಯ 5 ಸಾವಿರ ಜನರಿಗೆ ಅಡುಗೆ ತಯಾರಿಸಲಾಗುತ್ತಿದೆ. ಪರೀಕ್ಷಾ ಸಮಯ ಆಗಿರುವುದರಿಂದ ಪ್ರವಾಸಿಗರ ಸಂಖ್ಯೆ ಎರಡೂ ದೇಗುಲಗಳಿಗೆ ಕಡಿಮೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.