ಶೃಂಗೇರಿ: ‘ಕ್ಷೇತ್ರದ 120 ಗ್ರಾಮಗಳಲ್ಲಿ ಕಂದಾಯ ಮತ್ತು ಅರಣ್ಯ ಇಲಾಖೆ ಜಂಟಿ ಸರ್ವೆ ಪೂರ್ಣಗೊಂಡಿದೆ. ಸರ್ವೆ ಪೂರ್ಣಗೊಂಡರೆ, ನಮೂನೆ 94ಸಿ, 94ಸಿಸಿ ಮತ್ತು 50, 53, 57 ಅಡಿಯಲ್ಲಿ ಅರ್ಜಿ ಸಲ್ಲಿಸಿದವರಿಗೆ ಹಕ್ಕುಪತ್ರ ನೀಡಲು ಸಹಕಾರಿಯಾಗಲಿದೆ’ ಎಂದು ಶಾಸಕ ಟಿ.ಡಿ. ರಾಜೇಗೌಡ ಹೇಳಿದರು.

ಶೃಂಗೇರಿಯಲ್ಲಿ ನಿರ್ಮಾಣಗೊಂಡ ನಾಡಕಚೇರಿಯಲ್ಲಿ 9 ಜನರಿಗೆ ಹಕ್ಕುಪತ್ರ ನೀಡುವ ಮೂಲಕ ಆ ಕಟ್ಟಡವನ್ನು ಲೋಕಾರ್ಪಣೆಗೊಳಿಸಿ ಅವರು ಶನಿವಾರ ಮಾತನಾಡಿದರು.

‘ಬದುಕಿಗಾಗಿ ರೈತರು ಭೂಮಿ ಒತ್ತುವರಿ ಮಾಡಿಕೊಂಡಿದ್ದಾರೆ.ಜಂಟಿ ಸರ್ವೆಯಿಂದ ಒತ್ತುವರಿ ಗೊಂದಲಕ್ಕೆ ಶಾಶ್ವತ ಪರಿಹಾರ ಸಿಗಲಿದೆ. ಸರ್ವೆಯ ಸಾಧಕ-ಬಾಧಕ ಕುರಿತು ತಜ್ಞರೊಂದಿಗೆ ಚರ್ಚಿಸಿ, ಮುಂದಿನ ಕ್ರಮ ಕೈಗೊಳ್ಳಲಿದ್ದೇವೆ. ಒತ್ತುವರಿ ಜಾಗದಲ್ಲಿ ಕಾಫಿ ಕೃಷಿ ಮಾಡಿ ನಮೂನೆ 57 ರಲ್ಲಿ ಅರ್ಜಿ ಸಲ್ಲಿಸಿದರೆ ಹಕ್ಕುಪತ್ರ ನೀಡಲು ಅವಕಾಶ ಇಲ್ಲ. ಆದ್ದರಿಂದ ಕಾಫಿ ಬೆಳೆಗಾರರು ಒತ್ತುವರಿ ಜಾಗವನ್ನು ಭೋಗ್ಯಕ್ಕೆ ಪಡೆಯಲು ಅರ್ಜಿ ಸಲ್ಲಿಸಬಹುದು’ ಎಂದರು.

‘ನಾಡಕಚೇರಿ ಕಟ್ಟಡ ಸಾರ್ಥಕ ಆಗಬೇಕಾದರೆ, ಕಚೇರಿಗೆ ಬಂದ ಸಾರ್ವಜನಿಕರ ಸಮಸ್ಯೆಗಳನ್ನು ಅಧಿಕಾರಿಗಳು ಬಗೆಹರಿಸಬೇಕು. ನಾನು ಅಭಿವೃದ್ಧಿಗೆ ಅಡ್ಡಗಾಲು ಹಾಕಿಲ್ಲ. ಜನ ಕೊಟ್ಟ ಅಧಿಕಾರವನ್ನು ಕೆಲವರು ಕದ್ದು ಪಡೆಯಲು ಮುಂದಾಗಿದ್ದರು. ಹಲವರು ವಾಟ್ಸ್ಆ್ಯಪ್, ಫೇಸ್ಬುಕ್ನಲ್ಲಿ ಟೀಕೆ ಮಾಡುತ್ತಾರೆ. ಆದರೆ, ಅದಕ್ಕೆಲ್ಲಾ ನಾನು ತಲೆಕೆಡಿಸಿಕೊಳ್ಳುವುದಿಲ್ಲ’ ಎಂದರು.

‘ಶೃಂಗೇರಿಯಲ್ಲಿ ₹37 ಕೋಟಿ ವೆಚ್ಚದ 100 ಹಾಸಿಗೆಯ ಆಸ್ಪತ್ರೆ, ಜಯಪುರದಲ್ಲಿ ₹13 ಕೋಟಿ ವೆಚ್ಚದ 30 ಹಾಸಿಗೆಯ ಆಸ್ಪತ್ರೆ, ಕೊಪ್ಪದಲ್ಲಿ ₹14 ಕೋಟಿ ವೆಚ್ಚದ ಆಸ್ಪತ್ರೆ ನಿರ್ಮಾಣ, ವಸ್ತಾರೆಯಿಂದ ಶೃಂಗೇರಿಗೆ ₹75 ಕೋಟಿ ಮೊತ್ತದಲ್ಲಿ ರಸ್ತೆ ವಿಸ್ತರಣೆ, ಪಟ್ಟಣದ ಎಲ್ಲಾ ರಸ್ತೆಗಳಿಗೂ ಡಾಂಬರೀಕರಣ ಮಾಡುವ ಮೂಲಕ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಮುಂದಿನ ದಿನಗಳಲ್ಲಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿಪಡಿಸುತ್ತೇವೆ. ಕಿಗ್ಗಾ ಹೋಬಳಿಯಲ್ಲಿ 30 ಹಕ್ಕುಪತ್ರಗಳನ್ನು ನೀಡುತ್ತೇವೆ’ ಎಂದರು.

ಸಿಬ್ಬಂದಿಗಳಿಗೆ ಲ್ಯಾಪ್ಟಾಪ್ಗಳನ್ನು ಶಾಸಕ ವಿತರಿಸಿದರು. ಅಕ್ರಮ–ಸಕ್ರಮ ಸಮಿತಿ ಅಧ್ಯಕ್ಷ ಮಹಾಬಲ, ಸದಸ್ಯರಾದ ತ್ರೀವೇಣಿ, ಎಚ್.ಎ ಶಿವಮೂರ್ತಿ, ರಮೇಶ್, ತಹಶೀಲ್ದಾರ್ ಅನೂಪ್ ಸಂಜೋಗ್, ಕಾರ್ಯನಿರ್ವಹಣಾಧಿಕಾರಿ ಸುದೀಪ್ ಎಚ್., ಬೆಟ್ಟಗೇರೆ ಪಿಎಸಿಎಸ್ನ ಅಧ್ಯಕ್ಷ ಕೊಡತಲು ರಮೇಶ್ ಭಟ್, ಹಾಲಂದೂರು ಪಿಎಸಿಎಸ್ನ ಅಧ್ಯಕ್ಷ ನಟರಾಜ್ ಎಂ.ಎಚ್., ಪೀಕಾರ್ಡ್ ಬ್ಯಾಂಕ್ ಅಧ್ಯಕ್ಷ ದಿನೇಶ್ ಹೆಗ್ಡೆ ನೆಮ್ಮಾರ್ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-126-779375516

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.